ಮಹೋಪಯೋಗಿ ನಿಂಬ”ಬೇವು ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-33

ಮಹೋಪಯೋಗಿ ನಿಂಬ”ಬೇವು ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-33

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-33

ಮಹೋಪಯೋಗಿ ನಿಂಬ”(ಬೇವು)

32) ನಿಂಬಪತ್ರ (Azadirachta indica):🌿

ಆಯುರ್ವೇದದಲ್ಲಿ ಸರ್ವಾರಿಷ್ಠ ನಿವಾರಕ ಔಷಧವಾಗಿ ಬಳಸುವ ಬೇವು/ನಿಂಬಪತ್ರದ ಎಲೆಯು ಶ್ರೇಷ್ಠ ಕ್ರಿಮಿನಾಶಕವಾಗಿದೆ.

ನಮ್ಮ ಅನುಭವದಲ್ಲಿ , ಶರೀರದ ಯಾವುದೇ ಜೀವಕೋಶಗಳನ್ನು ಸೋಂಕಿನ ಅವಸ್ಥೆಯಿಂದ ಅಥವಾ ಅನಗತ್ಯ ರೋಗಕಾರಕ ಅಂಶಗಳ ಸೇರುವಿಕೆಯಿಂದ ಸಂರಕ್ಷಿಸಿ ಸುಸ್ಥಿಯಲ್ಲಿಡಲು “ಬೇವು” ಕಾರ್ಯನಿರ್ವಹಿಸಿದಷ್ಟು ಸಮರ್ಥವಾಗಿ ಅನ್ಯದ್ರವ್ಯವು ಕಾಣಸಿಗುವುದಿಲ್ಲ ಎಂದು ತಿಳಿಯಲ್ಪಟ್ಟಿದ್ದೇವೆ.

“ನಿಂಬಪತ್ರವು” ಪ್ರಧಾನವಾಗಿ ಉದರ ಕರುಳುಗಳಲ್ಲಿ ಉಂಟಾಗಿರುವ ಅನಗತ್ಯ ರಾಸಾಯನಿಕಗಳ ಒತ್ತಡವನ್ನು ನಿವಾರಿಸುತ್ತದೆ ಮತ್ತು ಅದರಿಂದ ಉಂಟಾಗುವ ಅಲ್ಸರ್ ಅಥವಾ ಹುಣ್ಣುಗಳನ್ನು ಶೇಷರಹಿತವಾಗಿ ಗುಣಪಡಿಸುತ್ತದೆ.

ಬೇರುಗಳ ಜೊತೆಗೆ ಗಿಡದ ಎಲೆ, ಮೊಗ್ಗು, ಹೂವು, ಕಾಯಿ, ಹಣ್ಣು, ಬೀಜಗಳು ಯಾವ ರೀತಿಯ ಸಂಬಂಧವನ್ನು ಹೊಂದಿವೆಯೋ, ಅದೇ ರೀತಿ “ಉದರ-ಕರುಳುಗಳ ಜೊತೆಗೆ ಸರ್ವಶರೀರದ ಜೀವಕೋಶಗಳು ಮತ್ತು ಗರ್ಭಯೋತ್ಪಾದನೆ ಮಾಡುವ ಸ್ತ್ರೀ-ಪುರುಷರ ಬೀಜಗಳೂ ಸಹ ಸಂಬಂಧವನ್ನು ಹೊಂದಿರುತ್ತವೆ”.

ವಿಶೇಷವಾಗಿ ಬೇವು ಶೀಘ್ರ ಪರಿಣಾಮಕಾರಿ ಗುಣವನ್ನು ಹೊಂದಿದೆ. ಅಂದರೆ, “ಬೇವು” ಅಥವಾ “ನಿಂಬಪತ್ರವು” ಕರುಳಿನ ಜೀವಕೋಶಗಳಲ್ಲಿನ ರೋಗಕಾರಕ ಅಥವಾ ರೋಗಸಹಾಯಕ ಮೂಲ ರಾಸಾಯನಿಕಗಳನ್ನು ಶೀಘ್ರವಾಗಿ ಕರಗಿಸುವುದರಿಂದ, ಅಂತದೇ ಪರಿಣಾಮವನ್ನು ಕೇವಲ 48 ನಿಮಿಷಗಳಲ್ಲಿ ಪುಪ್ಪುಸಗಳಲ್ಲಿ, ಉಸಿರಿನಾಳಗಳಲ್ಲಿ, ಮೂಗು, ಗಂಟಲಿನಲ್ಲಿಯೂ ಮಾಡುತ್ತದೆ.

ಅಂದರೆ, ತುರ್ತು ಸೋಂಕಿನ ಪರಿಸ್ಥಿತಿಯಲ್ಲಿ ಸೋಂಕುವರ್ಧಕ ಅಥವಾ ಸೋಂಕುಸಹಾಯಕ ವ್ಯವಸ್ಥೆಯನ್ನು ತೆಗೆದು ಬಿಡುವ ನಿಂಬ ಪ್ರಯೋಗ ಅತ್ಯಂತ ಸಹಾಯಕ.

ಒಟ್ಟಾರೆ, “ನಿಂಬ” ಪತ್ರ ಪ್ರಯೋಗದ ಪರಿಣಾಮವನ್ನು ಸಮಗ್ರ ದೃಷ್ಠಿಯಿಂದ ನೋಡಿದರೆ ಸಣ್ಣ ಸೋಂಕಿನಿಂದ ಹಿಡಿದು ಗ್ಯಾಂಗ್ರೀನ್ (ಕೊಳೆ ರೋಗ)ವರೆಗಿನ ದುಷ್ಪರಿಣಾಮಗಳನ್ನು ಸಮರ್ಥವಾಗಿ ಮತ್ತು ಶೀಘ್ರವಾಗಿ ಗೆಲ್ಲುವುದನ್ನು ನಾವು ನೋಡಿದ್ದೇವೆ.

“ನಿಂಬಪತ್ರ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.ncbi.nlm.nih.gov/pmc/articles/PMC7149852/

“ನಿಂಬಪತ್ರ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9606616165
810545

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!