ಇಂದಿನ ವಿಷಯ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-26..!

ಇಂದಿನ ವಿಷಯ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-26..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-26

25)ಚವ್ಯ (Piper chaba):

ಆಚಾರ್ಯ “ಚರಕ”ರ ತೃಪ್ತಿಘ್ನ ಗಣದಲ್ಲಿ ಸೇರಿಕೊಂಡಿರುವ “ಚವ್ಯ”ವು ವಿಶೇಷವಾಗಿ ಜ್ವರದಲ್ಲಿ ಶರೀರ ತಾಪಮಾನವನ್ನು ಕಡಿಮೆ ಮಾಡುತ್ತದೆ ಎಂದು 1980 ರಲ್ಲಿ ನಡೆದ ಆಧುನಿಕ ಸಂಶೋಧನೆಗಳಿಂದ ತಿಳಿದು ಬಂದಿದೆ.

ಸಾಂದರ್ಭಿಕ

‘ತೃಪ್ತಿಘ್ನ’ ಎಂದರೆ, ಕಫ ಮತ್ತು ಮೇದಸ್ಸುಗಳ ಆವರಣದಿಂದ ಉಂಟಾದ ಮೈ ಭಾರವನ್ನು, ಆಯಾಸವನ್ನು ಮತ್ತು ಆಲಸ್ಯವನ್ನು ಬಹುಶೀಘ್ರದಲ್ಲಿ ನಿವಾರಿಸುವುದು ಎಂದರ್ಥ.

ಶುಂಠಿಯೊಂದಿಗೆ ಸೇರಿಸಿ ಚವ್ಯವನ್ನು ಪ್ರಯೋಗಿಸಿದರೆ ರಕ್ತವನ್ನು ತೆಳುವಾಗಿಸುವ ಕೆಲಸವನ್ನೂ, ಪುಪ್ಪುಸದಲ್ಲಿ ಲೇಪನವಾಗಿರುವ ಕಫವನ್ನು ಏಕ ಕಾಲದಲ್ಲಿ ನಿವಾರಿಸುವುದು.
ಇಂತಹ ಒಂದು ಸಮಸ್ಯೆಯನ್ನೇ ಇಂದಿನ ಸೋಂಕಿನಿಂದ ನಾವು ಎದುರಿಸುತ್ತಿದ್ದೇವೆ. ಹಾಗಾಗಿ ಕಷಾಯ ಚೂರ್ಣದಲ್ಲಿನ ಚವ್ಯವು ಅತ್ಯಂತ ಪೂರಕವಾಗಿದೆ.

ಸಾಂದರ್ಭಿಕ

ಯಾವುದೇ ವೈರಾಣು ಸೋಂಕಿನ ಮೊದಲ 48 ಗಂಟೆಗಳಲ್ಲಿ ಮೈ ಭಾರ, ಕತ್ತರಿಸುವಂತಹ ನೋವು, ಜ್ವರ ಈ ಮೂರು ಲಕ್ಷಣಗಳನ್ನು ತೋರಿಸುತ್ತದೆ. ಇದಾದ 7 ರಿಂದ 14 ದಿನಗಳಲ್ಲಿ ಸೋಂಕು ಉಲ್ಬಣಗೊಂಡು ಶರೀರಕ್ಕೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇನ್ನೊಬ್ಬರಿಗೆ ಹರಡುತ್ತದೆ.

ಇಂತಹ ಆರಂಭಿಕ ಹಂತದಲ್ಲಿಯೇ ಸೋಂಕನ್ನು ತಡೆಯುವ ದೃಷ್ಟಿಯಿಂದ ಚವ್ಯ, ಶುಂಠಿ, ಯಷ್ಟಿಮಧು, ಅಮೃತಬಳ್ಳಿ ಮತ್ತು ವಿಶೇಷವಾಗಿ ಕರಿಜೀರಿಗೆ ಮುಂತಾದವುಗಳನ್ನು ಹೊಂದಿರುವ ಕಷಾಯ ಚೂರ್ಣವನ್ನು ಸೇವಿಸುವುದರಿಂದ “ಶೂಲಪ್ರಶಮನ” ಗಣದಲ್ಲಿ ಒಂದಾದ “ಚವ್ಯ”ವು ಸೋಂಕಿನ ಆರಂಭಿಕ ಹಂತದಲ್ಲಿಯೇ ಬರುವ ಶೂಲ-ಜ್ವರಾದಿಗಳನ್ನು ಇತರ 35 ದ್ರವ್ಯಗಳೊಡನೆ ಔಷಧೀಯ ಕಾರ್ಮುಖತೆಯಲ್ಲಿ ಕೈಜೋಡಿಸಿ ವ್ಯಕ್ತಿಯಲ್ಲಿ ಸೋಂಕು ಆಳಕ್ಕಿಳಿಯದಂತೆ ನೋಡಿಕೊಳ್ಳುತ್ತದೆ.

“ಸರ್ವರೂ ಆಯುರ್ವೇದ ಕಷಾಯ ಬಳಸಿ ಸೋಂಕಿನಿಂದ ಸ್ವಾತಂತ್ರ್ಯ ಪಡೆಯಿರಿ”

“ಚವ್ಯ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.researchgate.net/publication/329355180_Microbiological_investigation_of_piper_chaba_hunter

“ಚವ್ಯ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by:Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!