ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರರಿಂದ ಅಂಬ್ಲಿಗೊಳ್ಳ ಜಲಾಶಯಕ್ಕೆ ಬಾಗಿನ ಅರ್ಪಣೆ‌..!

ಶಿವಮೊಗ್ಗ: ಸಂಸದ ಬಿ.ವೈ ರಾಘವೇಂದ್ರರಿಂದ ಅಂಬ್ಲಿಗೊಳ್ಳ ಜಲಾಶಯಕ್ಕೆ ಬಾಗಿನ ಅರ್ಪಣೆ‌..!

ಶಿಕಾರಿಪುರ/ ಸಾಗರ ತಾಲೂಕಿ‌ನ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾದ ಬೆನ್ನಲ್ಲೇ ಅಂಬ್ಲಿಗೊಳ್ಳ ಜಲಾಶಯ ಕೂಡ ಭರ್ತಿಯಾಗಿದೆ.

ಸಂಸದ ಬಿ.ವೈ ರಾಘವೇಂದ್ರ ಪತ್ನಿ ಪುತ್ರರೊಂದಿಗೆ ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ಈ ವೇಳೆ ಜಲಾಶಯ ಸುತ್ತಮುತ್ತ ಪ್ರದೇಶಗಳ ಅಭಿವೃದ್ಧಿ ಪಡಿಸಿ ಪ್ರವಾಸಿತಾಣವಾಗಿ ಮಾರ್ಪಡು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು‌.

ಈ ವೇಳೆ ಮಾತನಾಡಿದ ಅವರು ಅಂಬ್ಲಿಗೊಳ್ಳ ಜಲಾಶಯ ತಾಲೂಕಿನ ಅತ್ಯಂತ ದೊಡ್ಡ ಜಲಾಶಯವಾಗಿದ್ದು ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಸ್ವಲ್ಪ ತಡವಾಗಿ ಭರ್ತಿಯಾಗಿದೆ ರೈತರಿಗೆ ಅನುಕೂಲವಾಗುವಂತೆ ತಾಲೂಕಿನ ಎಲ್ಲಾ ಹೊಬಳಿಗೂ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದು ಶೀಘ್ರ ಪೂರ್ಣಗೊಳ್ಳಲಿದೆ‌‌ ಎಂದರು.

ಈ ಸಂದರ್ಭದಲ್ಲಿ ಎಂಐಡಿಪಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ,ಅರಣ್ಯ ಅಭಿವೃದ್ಧಿ ಉಪಾಧ್ಯಕ್ಷ ಕೆ.ರೇವಣ್ಣಪ್ಪ, ತಾ.ಪಂ ಅಧ್ಯಕ್ಷ ಪ್ರಕಾಶ್, ಜಿ.ಪಂ ಸದಸ್ಯೆ ಅರುಂಧತಿ ರಾಜೇಶ್,ನೀರಾವರಿ ಅಧಿಕಾರಿಗಳು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!