ಆರೋಗ್ಯದ “ರೂಭಿ” ಮಂಜಿಷ್ಠ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-22..!

ಆರೋಗ್ಯದ “ರೂಭಿ” ಮಂಜಿಷ್ಠ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-22..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-22

ಆರೋಗ್ಯದ “ರೂಭಿ” ಮಂಜಿಷ್ಠ
21) ಮಂಜಿಷ್ಠ (Rubia Cordifolia)

ರಕ್ತದ ಬಣ್ಣವನ್ನೇ ಹೋಲುವ “ಮಂಜಿಷ್ಠ”ವನ್ನು “ರಕ್ತಮಂಜಿಷ್ಠ” ಎಂದೂ ಕರೆಯುತ್ತಾರೆ.
ಚರಕಾಚಾರ್ಯರು ಮಂಜಿಷ್ಠವನ್ನು “ಜ್ವರಘ್ನ”, “ವಿಷಘ್ನ”, “ವರ್ಣ್ಯ” ಗಣಗಳಲ್ಲಿಯೂ ಮತ್ತು ಸುಶ್ರುತಾಚಾರ್ಯರು ಪಿತ್ತಶಾಮಕ ಗಣದಲ್ಲಿಯೂ ಸೇರಿಸಿದ್ದಾರೆ.

“ಮಂಜಿಷ್ಠ”ದ ಒಟ್ಟು ಔಷಧೀಯ ಕಾರ್ಯವನ್ನು ನೋಡಿದರೆ-
“ರಕ್ತದಲ್ಲಿ ಸೋಂಕು ಅಥವಾ ಪಿತ್ತದಿಂದ ಉಂಟಾಗುವ ವಿಷಕಾರಕ ಅಂಶವನ್ನು ನಿವಾರಿಸುವುದು”.

ವಿಶೇಷವಾಗಿ ರಕ್ತದಲ್ಲಿನ ಪಿತ್ತದ ಅಂಶವನ್ನು ನಿಯಂತ್ರಿಸಿ, ರಕ್ತಶುದ್ಧೀಕರಣಗೊಳಿಸಿ, ಸೂಕ್ಷ್ಮ ರಕ್ತನಾಳಗಾಳಿಗೆ ಬಲವನ್ನು ಕೊಡುವುದು. ಈ ಕಾರಣಕ್ಕಾಗಿ “ಮಂಜಿಷ್ಠ”ವನ್ನು ಸೂಕ್ಷ್ಮರಕ್ತನಾಳಗಳ ವಿಕಾರಗಳಾದ ಮೆದುಳು, ಪುಪ್ಪುಸ, ಮೂತ್ರಪಿಂಡ, ಚರ್ಮರೋಗಗಳಲ್ಲಿ ನೇರವಾಗಿ ಅಥವಾ ಸಹಾಯಕ ಔಷಧ ದ್ರವ್ಯವಾಗಿ “ಮಂಜಿಷ್ಠ”ವನ್ನು ಆಯ್ಕೆಮಾಡುತ್ತಾರೆ.

ಮಂಜಿಷ್ಠವು-

  1. ರಕ್ತದಲ್ಲಿನ ಪಿತ್ತಶಾಮಕವಾಗಿದೆ.
  2. ರಕ್ತಶುದ್ಧೀಕರಣ ಮಾಡುವುದು.
  3. ರಕ್ತನಾಳಗಳಿಗೆ ಬಲಕೊಡುವುದು.

★ಪುಪ್ಪುಸ ವಿಕಾರಗಳಲ್ಲಿ ಮಂಜಿಷ್ಠ:
ರಕ್ತನಾಳಗಳನ್ನು ಬಲಪಡಿಸುವ ವಿಶೇಷ ಸಾಮರ್ಥ್ಯವನ್ನು ಹೊಂದಿರುವ “ಮಂಜಿಷ್ಠ” ಪುಪ್ಪುಸಗಳ ಸೂಕ್ಷ್ಮಾತಿ ಸೂಕ್ಷ್ಮ ರಕ್ತನಾಳಗಳಲ್ಲಿ ಪಿತ್ತದ ಅಂಶ ಶೇಖರಣೆ ಆಗುವುದನ್ನು ತಡೆಯುವುದು ಮತ್ತು ಅಲ್ಲಿ ಸೋಂಕಿನಿಂದ ಉಂಟಾದ ರಕ್ತದ ದೋಷವನ್ನು ಶುದ್ಧಗೊಳಿಸಿ ಆಮ್ಲಜನಕದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು.

ರಕ್ತದೋಷದಿಂದ ಉಂಟಾದ ಅಂದರೆ ಸೋಂಕಿನಿಂದ ಉಂಟಾದ ಜ್ವರ ಮತ್ತು ಉರಿಯೂತವನ್ನು ನಿಯಂತ್ರಿಸುವುದು.

ಕಷಾಯ ಚೂರ್ಣದಲ್ಲಿನ ಔಷಧ ದ್ರವ್ಯಗಳಲ್ಲಿ ಒಂದಾದ “ಮಂಜಿಷ್ಠ”ವು ಇತರ 35 ಗಿಡಮೂಲಿಕೆಗಳ ಜೊತೆಗೆ ಸೇರಿ ಪುಪ್ಪುಸ ವಿಕಾರಗಳ ಕೆಲವು ಸ್ಥರಗಳಲ್ಲಿ ಪ್ರಧಾನ ಔಷಧಿ ದ್ರವ್ಯವಾಗಿಯೂ ಮತ್ತೆ ಕೆಲ ಸ್ಥರಗಳಲ್ಲಿ ಸಹಾಯಕ ಔಷಧ ದ್ರವ್ಯವಾಗಿಯೂ ಒಟ್ಟು ಚಿಕಿತ್ಸೆಯನ್ನು ಯಶಸ್ವಿಗೊಳಿಸುತ್ತದೆ.

“ಮಂಜಿಷ್ಠ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.ncbi.nlm.nih.gov/pmc/articles/PMC5954628/

“ಏಲಾ” ಗಿಡಮೂಲಿಕೆಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute
Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!