ಅರಿಯನ್ನೇ ಪರಿಹರಿಸುವ ಹರಿದ್ರಾ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-18..!

ಅರಿಯನ್ನೇ ಪರಿಹರಿಸುವ ಹರಿದ್ರಾ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-18..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-18

ಅರಿಯನ್ನೇ ಪರಿಹರಿಸುವ ಹರಿದ್ರಾ”
(ಅರಿಷಿಣ) Curcuma longa

“ಅರಿಶಿಣದ”ಯ ಸಂಶೋಧನಾತ್ಮಕ ವಿವರಣೆಗಾಗಿ ಕೆಳಗಿನ ಲಿಂಕ್ ನ್ನು ಒತ್ತಿ:

https://www.ncbi.nlm.nih.gov/pmc/articles/PMC5466256/

“ಗೋಲ್ಡನ್ ಮಿಲ್ಕ್” (ಬಂಗಾರದ ಹಾಲು) ಸೇವಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು

ಚರಕಾಚಾರ್ಯರು ಗಿಡಮೂಲಿಕೆಗಳ ವರ್ಗೀಕರಣದಲ್ಲಿ “ಹರಿದ್ರಾ” ಕ್ಕೆ ವಿಶೇಷ ಮಾನ್ಯತೆ ಕೊಟ್ಟು ಈ ಕೆಳಗಿನ ಗುಂಪಿಗೆ ಸೇರಿಸಿದ್ದಾರೆ.

• ಕುಷ್ಠಘ್ನ ವರ್ಗ
(ಚರ್ಮರೋಗಹರ ಔಷಧಿ ದ್ರವ್ಯಗಳ ಗುಂಪು)
• ವಿಷಘ್ನ ವರ್ಗ
(ರಕ್ತದಲ್ಲಿನ ವಿಷ ತಗೆಯುವ ಔಷಧಿ ದ್ರವ್ಯಗಳ ಗುಂಪು)
• ಲೇಖನೀಯ ವರ್ಗ
(ಮೇದಸ್ ಅನ್ನು ಕರಗಿಸುವ ಔಷಧಿ ದ್ರವ್ಯಗಳ ಗುಂಪು)

“ನಿಶಾ, ರಜನಿ,ವರ್ಣ ವಿಲಾಸಿನಿ” ಎಂಬ ವಿಶೇಷ ಹೆಸರುಗಳಿಂದ ಕರೆಸಿಕೊಂಡಿರುವ ಹರಿದ್ರಾವನ್ನು ಜಗತ್ತಿನ ಬಲಾಢ್ಯ ರಾಷ್ಟ್ರಗಳು ತಮ್ಮ ಸ್ವತ್ತನ್ನಾಗಿಸಿಕೊಳ್ಳಲು ಅನೇಕ ಕೋನಗಳಿಂದ ಯತ್ನಿಸಿದರೂ, ಈ “ವರ್ಣವಿಲಾಸಿನಿಯು” ಭಾರತಾಂಬೆಯ ಕೆನ್ನೆಯಲ್ಲಿ ಶೋಭಿಸಲು ಈ ರಾಷ್ಟ್ರದಲ್ಲೇ ನೆಲೆಸಿದ್ದಾಳೆ🇮🇳

ತ್ವಚೆಯ 7 ಪದರುಗಳಲ್ಲಿ “ರೋಹಿಣಿ” ಎಂಬ ಕಾಂತಿ ತರುವ ತ್ವಚೆಯ ಪದರಿನ ಜೊತೆಗೆ ಸಹಜವಾಗಿ ಬೆರೆತು ತ್ವಚೆಗೆ ದೈವತ್ವತ ಕಳೆಯನ್ನು ತರುತ್ತದೆ. ಏಕೆಂದರೆ, ಇದು ವಿಷಘ್ನವೂ ಹೌದು,ಕುಷ್ಠಘ್ನವೂ ಹೌದು(ಚರ್ಮ ವಿಕಾರನಾಶಕ) ಹಾಗೆಯೇ ವರ್ಣ ಪ್ರಸಾದನ ಮಾಡುವ, ರಕ್ತವನ್ನು ಶುದ್ಧೀಕರಣಗೊಳಿಸುವ ಸಂಜೀವಿನಿಯೂ ಹೌದು.

ಯಾವ ಸೋಂಕು ಅಥವಾ ಅಲರ್ಜಿ ಚರ್ಮಕ್ಕೆ ಬಾಧೆಯನ್ನು ತರುತ್ತದೋ ಅದೇ ಸೋಂಕು ಅಥವಾ ಅಲರ್ಜಿಯು ಪುಪ್ಪುಸಗಳನ್ನು ಬಾಧಿಸುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಹಾಗೆಂದೇ,ಚರ್ಮದ ಅಲರ್ಜಿ(Urticaria) ಮತ್ತು ಪುಪ್ಪುಸದ ಅಲರ್ಜಿ(Rhinitis and Bronchitis) ಎರಡಕ್ಕೂ ಒಂದೇ ಔಷಧಿಯನ್ನು ಕೊಡುತ್ತಾರೆ.

ಮೂಗು, ಗಂಟಲು, ಉಸಿರಿನಾಳ, ಪುಪ್ಪುಸದ ಸೋಂಕು ಆಳದಲ್ಲಿ ಸ್ಥಿತವಾಗಿದ್ದರೂ ತನ್ನ ರಕ್ತಶೋಧಕ ಗುಣದಿಂದ ಹೊರತಗೆಯುತ್ತದೆ.
ಸೋಂಕಿನ ಜೀವಾಣುವಿನ ಒಳಗೆ ಇರಬಹುದಾದ ತೇವಾಂಶ, ಪಿಚ್ಚಿಲ(ಅಂಟು)ತೆಯನ್ನು ಇಲ್ಲದಂತೆ ಮಾಡಿಬಿಡುವುದರಿಂದ ಆ ಜೀವಾಣುಗಳನ್ನೂ , ಅವುಗಳ ವಿಭಜನೆಯನ್ನೂ ಅಥವಾ ಸಂತತಿಯನ್ನು ಶೀಘ್ರವಾಗಿ ಮತ್ತು ಸಮೂಲವಾಗಿ ಕೊಂದುಹಾಕುತ್ತದೆ ಅಥವಾ ನಿಷ್ಕ್ರಿಯೆಗೊಳಿಸುತ್ತದೆ.

ಗಮನಿಸಿ:
ಮೂಗಿನಿಂದ ಅತಿಯಾಗಿ ನೀರು ಸೋರುತ್ತಿರುವ ಸಂದರ್ಭದಲ್ಲಿ ಶುದ್ಧ ಅರಿಷಿಣ ಪುಡಿಯನ್ನು ಕೆಂಡದ ಮೇಲೆ ಹಾಕಿ, ಬರುವ ಹೊಗೆಯನ್ನೋ ಅಥವಾ ಅರಿಶಿಣದ ಕೊಂಬಿನ ತುದಿಯನ್ನು ಸುಟ್ಟು, ಬರುವ ಹೊಗೆಯನ್ನೋ ಮೂಗಿನಿಂದ ಆಳವಾಗಿ ಒಂದೇ ಒಂದುಬಾರಿ ಎಳೆದುಕೊಳ್ಳುವುದರಿಂದ ಸುರಿಯುತ್ತಿರುವ ಅಷ್ಟೂ ನೀರು ಆ ಕ್ಷಣದಲ್ಲೇ ಇಲ್ಲವಾಗಿಬಿಡುತ್ತದೆ.

ಹಾಗಾಗಿ, ಇಂದಿನ ಸೋಂಕಿತ ಪರಿಸ್ಥಿತಿಯಲ್ಲಿ ಸೋಂಕಿನ ವಿರುದ್ಧ ಬ್ರಹ್ಮಾಸ್ತ್ರದಂತೆ ಛೇಧಿಸಿ ತೊಡೆದುಹಾಕುವ ಹರಿದ್ರಾವು ದಿವ್ಯಸಂರಕ್ಷಕವಾಗಿದೆ.

“ಅರಿಶಿಣ” ಗಿಡಮೂಲಿಕೆಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!