ಶಿವಮೊಗ್ಗದ ಶಾಸಕರೊಬ್ಬರಿಗೆ ಕೊರೋನ ಸೋಂಕು ದೃಢ…!

ಶಿವಮೊಗ್ಗದ ಶಾಸಕರೊಬ್ಬರಿಗೆ ಕೊರೋನ ಸೋಂಕು ದೃಢ…!

ಶಿವಮೊಗ್ಗ: ದೇಶದಾದ್ಯಂತ ಕೊರೋನ ಸೋಂಕು ವ್ಯಾಪಿಸಿದ್ದು ಇದೀಗ ರಾಜಕಾರಣಿಗಳು ಜನಪ್ರತಿನಿಧಿಗಳನ್ನು ಕಾಡುತ್ತಿದ್ದು ನಿನ್ನೆ ದೇಶದ ಗೃಹ ಮಂತ್ರಿ ಅಮಿತ್ ಷಾ, ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರಿಗೆ ಮತ್ತು ಅವರ ಪುತ್ರಿಯೊಬ್ಬರಿಗೆ ಸೋಂಕು ದೃಢ ಪಟ್ಟಿತ್ತು ಇಂದು ಶಿವಮೊಗ್ಗದ ಶಾಸಕರೋಬ್ಬರಿಗೆ ಸೋಂಕು ಧೃಡ ಪಟ್ಟಿದೆ‌‌.

ಶಿವಮೊಗ್ಗ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಗೆ ಕೊರೋನ ಸೋಂಕು ದೃಢಪಟ್ಟಿದ್ದು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ನಲ್ಲಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ ಪ್ರಸನ್ನಕುಮಾರ್ ಬೆಂಗಳೂರಿಗರ ಜು.27 ರಂದು ಹೋಗಿ ಬಂದ ಹಿನ್ನಲೆಯಲ್ಲಿ ಕೊರೋನ ಪರೀಕ್ಷೆಗೆ ಮಾಡಿಸಿದ್ದರು ಇಂದು ಕೊರೋನ ಪಾಸಿಟಿವ್ ಎಂದು ವರದಿ ಬಂದಿದೆ.

ಆದರೆ ನನಗೆ ಯಾವುದೇ ರೋಗ ಲಕ್ಷಣವಿಲ್ಲದಿದ್ದರು ವರದಿ ಪಾಸಿಟಿವ್ ಎಂದು ತಿಳಿದುಬಂದಿದೆ.

ಈ ಸಂಬಂಧ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ಆಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಸಹ ಕ್ವಾರಂಟೈನ್ ನಲ್ಲಿದ್ದು, ಪರೀಕ್ಷೆಗೆ ಒಳಪಡುವಂತೆ ಆರ್.ಪ್ರಸನ್ನ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!