ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-09

ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-09

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-09

ನಮ್ಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿವರ್ಧಕ ಕಷಾಯದಲ್ಲಿನ 36 ಔಷಧಿ ದ್ರವ್ಯಗಳ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾಣದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:
8) ಅಶ್ವಗಂಧ(withania Somnifera):
“ಮದ್ದಿಲ್ಲದ ರೋಗಕ್ಕೆ ಹಿರೇಮದ್ದಿನ ಬೇರು” ಎಂಬ ನಾಡ್ನುಡಿ ಬಹುಕಾಲದಿಂದಲೂ ಪ್ರಚಲಿತವಿದ್ದು ಚಿಕಿತ್ಸಾ ದೃಷ್ಟಿಯಿಂದ ಹಿರೇಮದ್ದು ಅಂದರೆ ಅಶ್ವಗಂಧದ ಬೇರು ಅತ್ಯಂತ ಸೂಕ್ತವಾಗಿದೆ.

ಜನರನ್ನು ಕಾಡುತ್ತಿರುವ ಇಂದಿನ ಮದ್ದಿಲ್ಲದ ಸೋಂಕಿಗೆ ಅಶ್ವಗಂಧ ಒಂದು ಶ್ರೇಷ್ಠ ಉಪಾಯವಾಗಬಲ್ಲದು. ಗಿಡಮೂಲಿಕೆಗಳಲ್ಲೇ ಅತ್ಯಂತ ಹೆಚ್ಚು ಅಲಕಲಾಯಿಡ್ಸ್ ಗಳನ್ನು ಹೊಂದಿರುವ ಅಶ್ವಗಂಧವು ಮೂರು ಕೆಲಸವನ್ನು ಒಟ್ಟಿಗೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಯಾವುದೇ ಊತನಾಶಕ ದ್ರವ್ಯವು ಹೊಂದಿರದ ಪೋಷಕ ಗುಣವನ್ನು ಅಶ್ವಗಂಧವು ಹೊಂದಿದೆ. ಶರೀರದ ಎಲ್ಲಾ ಅವಯವಗಳ ಎಲ್ಲಾ ಸ್ಥರಗಳಲ್ಲೂ ಪೋಷಕವಾಗಿ ಕಾರ್ಯನಿರ್ವಹಿಸುವಷ್ಟು ಗುಣವನ್ನು ಹೊಂದಿದ್ದರೂ ಅನಗತ್ಯ ಊತವನ್ನು ತನ್ನ ಪೋಷಕ ಶಕ್ತಿಯಿಂದಲೇ ನಿವಾರಿಸುತ್ತದೆ.ಆದ್ದರಿಂದ ಇದು ಊತನಿವಾರಕವೂ, ಪೋಷಕವೂ ಆಗಿದೆ.

ಅಶ್ವಗಂಧದಲ್ಲಿ ವಾತ ಮತ್ತು ಕಫವನ್ನು ಏಕಕಾಲಕ್ಕೆ ಸಮರ್ಥವಾಗಿ ನಿರ್ವಹಿಸುವ ಅನೇಕ ರಾಸಾಯನಿಕಗಳಿದ್ದು, ಪೋಷಣ ಅಭಾವದಲ್ಲೂ ಮತ್ತು ಅನಿಯಂತ್ರಿತ ಅಧಿಕ ಪೋಷಣೆಯಲ್ಲೂ ಆಗುವ ವಿಕಾರಗಳನ್ನು ಏಕ ಕಾಲಕ್ಕೆ ಸಮತೋಲನಕ್ಕೆ ತರುತ್ತದೆ.

ಅವಯವಗಳಿಗೆ ಗಡಸುತನವನ್ನು ಕೊಟ್ಟು ಅವು ಬಿಗಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ಯಾಲ್ಸಿಯಂ ಅತ್ಯಗತ್ಯ. ಆದರೆ ಇದು ಅತ್ಯಂತ ಸಮತೊಲನ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಅಂದರೆ-
ಕ್ಯಾಲ್ಸಿಯಂ ಕಣವು ಹೃದಯದ ಮಾಂಸಖಂಡಗಳಿಗೆ, ಪುಪ್ಪುಸದ ಸ್ನಾಯುಗಳಿಗೆ, ರಕ್ತನಾಳಗಳಿಗೆ, ಶರೀರದ ಮಾಂಸಖಂಡಗಳಿಗೆ ಮತ್ತು ಮೂಳೆಗಳಿಗೆ ಒಂದೇ ಸಾಂದ್ರತೆಯಲ್ಲಿ ಹಂಚಿಕೆಯಾಗಲಾರದು.

ಕ್ಯಾಲ್ಸಿಯಂನ ಈ ಹಂಚಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾದಲ್ಲಿ ಶರೀರವು ಅಗಾಧವಾದ ವೇದನೆಯನ್ನೋ, ಆಘಾತವನ್ನೋ, ಅಪಾಯವನ್ನೋ, ಮರಣವನ್ನೋ ತಂದೊಡ್ಡಬಲ್ಲದು.

ಪ್ರಸ್ತುತ ಸನ್ನಿವೇಶದಲ್ಲಿ ಪುಪ್ಪುಸದ ಸ್ನಾಯುಗಳ ಸಂಕೋಚ, ಅಲ್ಲಿನ ರಕ್ತನಾಳಗಳ ಸಂಕೋಚ ಮತ್ತು ಅದಕ್ಕೆ ಸಮಸಮವಾಗಿ ಹೃದಯ ಸ್ನಾಯುಗಳ ಸಂಕೋಚ ಈ ಮೂರರ ನಡುವಿನ ಆಘಾತಕಾರಿ ಅಸಮತೋಲನವೇ ಮರಣವನ್ನು ತರುತ್ತಿದೆ. ಏಕೆಂದರೆ, ಸೋಂಕಿಗೆ ಪ್ರತಿಕ್ರಿಯೆ ತೋರಲು ಪುಪ್ಪುಸವು, ಅದಕ್ಕೆ ಬಲವಾಗಿ ರಕ್ತವನ್ನು ಹರಿಸಲು ಪ್ರಯತ್ನಿಸುವ ಹೃದಯವು, ಆ ಒತ್ತಡವನ್ನು ತಾಳಿಕೊಳ್ಳದ ರಕ್ತನಾಳಗಳು ಸಂಕೋಚಗೊಂಡು ವ್ಯಕ್ತಿಯನ್ನು ಅಪಾಯಕ್ಕೆ ನೂಕುತ್ತವೆ.

ಅಶ್ವಗಂಧವು ತನ್ನ ಬಲಕಾರಕ ಗುಣದಿಂದ ಕ್ಯಾಲ್ಸಿಯಂ ಹಂಚಿಕೆಯನ್ನು ಜೀವಕೋಶಕಗಳ ಎಲ್ಲಾ ಸ್ಥರದಲ್ಲೂ ಸುಲಲಿತಗೊಳಿಸುವುದರಿಂದ ತೀವ್ರ ಸೋಂಕಿನ ಅವಸ್ಥೆಯಲ್ಲೂ ಸಹ ಜೀವಚೈತನ್ಯ ಅವಯವಾಗಳಾದ ಹೃದಯ-ಪುಪ್ಪುಸಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ ಆದ್ದರಿಂದ ಅಲ್ಲಿ ಊತವಾಗಲೀ, ಸಂಕೋಚವಾಗಲೀ ಉಂಟಾಗುವುದೇ ಇಲ್ಲ.
ಹಾಗಾಗಿ ಸೋಂಕಿತ ವ್ಯಕ್ತಿಯು ಅಶ್ವಗಂಧವನ್ನು ನಿತ್ಯವೂ ಸೇವಿಸುತ್ತಿದ್ದರೆ ಮರಣದ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಬಹುದು.

ನಾಳೆ ಮುಂದುವರೆವುದು…………

ಈ ಸಂಶೋಧನೆಗಳ ಖಾಚಿತ್ಯತೆಗಾಗಿ ಈ ಕೆಳಗಿನ ಲಿಂಕ್ ನೋಡಿ:

https://pubmed.ncbi.nlm.nih.gov/25627548/

ನಮ್ಮ ಸಂಸ್ಥೆಯ ಕಷಾಯ ಚೂರ್ಣವನ್ನು ಬಳಸಲು ಇಚ್ಛಿಸುವವರು ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!