ಪರಿಸರ ವಿನಾಶದಿಂದ ಕರೋನದಂತ ಭೀಕರ ಕಾಯಿಲೆಗಳು ಬರುಲು ಕಾರಣವಾಗಿದೆ: ಕೆ.ಎಸ್‌ ಗುರುಮೂರ್ತಿ..!

ಪರಿಸರ ವಿನಾಶದಿಂದ ಕರೋನದಂತ ಭೀಕರ ಕಾಯಿಲೆಗಳು ಬರುಲು ಕಾರಣವಾಗಿದೆ: ಕೆ.ಎಸ್‌ ಗುರುಮೂರ್ತಿ..!

ಶಿವಮೊಗ್ಗ: ಜಗತ್ತಿನಲ್ಲಿ ಕರೋನದಂತ ಭೀಕರ ಕಾಯಿಲೆಗಳು ಬರಲು ನಮ್ಮ‌ ಸುತ್ತಮುತ್ತಲಿನ ಪರಿಸರ ವಿನಾಶವೇ ಕಾರಣವಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಳಿಯ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಹೇಳಿದರು.

ಶಿಕಾರಿಪುರ ತಾಲೂಕ್ ಬಿಜೆಪಿ ಯುವಾ ಮೋರ್ಚ ವತಿಯಿಂದ ಅಯೋಜಿಸಲಾಗಿದ ಪರಿಸರ ವೃಕ್ಷಾರೋಪಣಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಯಾವತ್ತೂ ಕೂಡ ಪರಿಸರ ಕಾರ್ಯಕ್ರಮಗಳು ಕೆಲವ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ ಪರಿಸರ‌ ನಮ್ಮ ಜೀವನದ ಅವಿಭಾಜ ಅಂಗವಾಗಬೇಕು ಪರಿಸರವನ್ನು ತಾಯಿಯಂತೆ ಕಾಣಬೇಕು ಎಂದರು.

ಪರಿಸರ ಸಂರಕ್ಷಣೆ ಬಿಜೆಪಿ ಪಕ್ಷ ಹಾಗೂ ಸಂಘ ಪರಿಹಾರ ಪರಿಸರ ಸಂರಕ್ಷಣಾಕ್ಕಾಗಿ ಪೂರ್ಣಾವಧಿ ಕಾರ್ಯಕರ್ತರನ್ನು ನೀಡಿದೆ.

ಶಿವಮೊಗ್ಗ ಮಲೆನಾಡ ಹೆಬ್ಬಾಗಿಲು ಪರಿಸರ ನೈಸರ್ಗಿಕ ಸಂಪತ್ತು ಹೊಂದಿದೆ‌ ಮಲೆನಾಡಿನ ಕಾಡಿನಲ್ಲಿ ಅಕೇಶಿಯ ಗಿಡಗಳನ್ನು‌ ನೆಡಬಾರದ್ದು ಎಂದು ಪರಿವಾರದ ಹಿರಿಯರು ಒಂದು ಯೋಜನೆಯನ್ನು ಹಾಕಿಕೊಂಡು ವೃಕ್ಷ ರಕ್ಷ ಅಂದೋಲನ ಸಾಗರಲ್ಲಿ ಆರಂಭವಾಯಿತ್ತು.

ಫಲ ನೀಡುವ ಗಿಡಗಳನ್ನು ನೇಡುವ ಪಶ್ಚಿಮ ಘಟ್ಟ ಉಳಿಸಿ ಎಂದು ಸಂಘ ಪರಿವಾರದಿಂದ ಯೋಜನೆ ರೂಪಿಸಿದರು.

ಇಡೀ ವಿಶ್ವದಲ್ಲಿ ಕೋವೀಡ್ ಗೆ ಕಾರಣ ನಮ್ಮ ಸುತ್ತಲಿನ ಪರಿಸರ ನಾಶವಾಗಿರುವುದರಿಂದ ಕಾಯಿಲೆಗಳು ಹರಡಲು ಕಾರಣವಾಗಿದೆ ಎಂದರು.

ಇಡೀ ವಿಶ್ವವೇ ಕರೋನ‌ದಿಂದ ನರಳುತ್ತಿದೆ ಭಾರತದಲ್ಲಿ ಆಯುರ್ವೇದ ಔಷಧದಿಂದ ಗುಣಮುಖರಾಗಿದ್ದಾರೆ.

ಅದರೆ ನಮ್ಮ‌ ಜನರು ಆಯುರ್ವೇದ ಸಂಬಂಧಿಸಿದ ಪರಿಸರವನ್ನು ಮಾಡುತ್ತಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ ದೆವರ ಕಾಡು ಎಂಬ ಕಲ್ಪನೆಯನ್ನು ಇಟ್ಟುಕೊಂಡು ಕೋವಿಡ್ ಸಂದರ್ಭದಲ್ಲಿ‌ ನಿಸರ್ಗ ಸಂರಕ್ಷಣಾ ಮಾಡಬೇಕಾದ ಅನಿವಾರ್ಯತೆ ಇದೆ ಯುವ ಮೋರ್ಚದವರು ಈ ಕುರಿತು ಚಿಂತಿಸಬೇಕು ಕೆವಲ ಪೋಟೋಕ್ಕಾಗಿ ಪರಿಸರ ಕಾರ್ಯಕ್ರಮ ಮಾಡಬಾರದ್ದು ಎಂದರು.

ಮಲೆನಾಡಿನಲ್ಲಿ‌ ಜನರು ಪರಿಸರ ನಾಶಮಾಡಿಕೊಂಡು ಭೀಕರ ಬರಗಾಲವನ್ನು ಅನುಭುವಿಸಿದ್ದೇವೆ‌ ಅದ್ದರಿಂದ ಪರಿಸರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಬೇಕು ದೇಶಕ್ಕೆ ಪೂರಕವಾಗಿ ಯೋಜನೆ ಸಮಾಜದ ಆರೋಗ್ಯಕ್ಕಾಗಿ ವೃಕ್ಷ ರೋಪಣ ಕಾರ್ಯಕ್ರಮ ಸಂತಸ ತಂದಿದೆ ಎಂದರು.

ಈ ವೇಳೆ ಸಂಸದ‌ ಬಿ.ವೈ ರಾಘವೇಂದ್ರ ಮಾತನಾಡಿ ಒಂದು ರಾಷ್ಟ್ರೀಯ ಪಕ್ಷ ಚುನಾವಣೆಗೆ ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಈ ರೀತಿಯ ಸಾಮಾಜಿಕ ಕಾರ್ಯವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಎಲ್ಲಾ ರೀತಿಯ ಸಮಾಜ ಮುಖೇನ ಬೇರೆ ಪಕ್ಷಗಳಿಂತ ಭಿನ್ನವಾಗಿದೆ.

ರೈತರಿಗೆ ಪರಿಸರ ಸಂರಕ್ಷಣಾ ಬಗ್ಗೆ ಜಾಗೃತಿ ಮೂಡಿಸಬೇಕು ಮೊದಲು ಶಾಶ್ವಾತವಾಗಿ ಇರುವಂತೆ ಜಾಗವನ್ನು ಗುರುತಿಸಿ ಗಿಡಗಳನ್ನು ನೆಡಬೇಕು ಎಂದರು.

ಜಿಲ್ಲಾ‌‌ ಯುವ ಮೋರ್ಚ ಅಧ್ಯಕ್ಷ ಹರಿಕೃಷ್ಣ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮ‌ ಮನೆಯ ಮನೆಯ ಆಚರಣೆಗಳಲ್ಲಿ ಇತ್ತು ಅಶ್ವ ಗಿಡ ತುಳಸಿ, ಬನ್ನಿಮರ, ಈ‌ ರೀತಿ ನಮ್ಮ ಜೀವನ ಶೈಲಿಯಲ್ಲಿ ರೂಢಿಸಿಕೊಂಡಿತ್ತು.

ಪ್ಲಾಸ್ಟಿಕ್ ಬಳಕೆ ಮಾಡದೇ ಪ್ರಕೃತಿ ಜೊತೆಗೆ ಬದುಕೊಣ ನಮ್ಮ ಸಂಸ್ಕೃತಿಗಳ ಜೊತೆಗೆ ಪರಿಸರ ಮುಖ್ಯಭಾಗವಾಗಿಸಿಕೊಂಡು ಉಳಿಸಿಸೊಣ ಎಂದರು.

ನಂತರ ಸಂಸದ ಬಿ.ವೈ ರಾಘವೇಂದ್ರರವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ‌ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚ ಹಾಗೂ ತಾಲೂಕ್ ಯುವ ಮೋರ್ಚದ ಸದಸ್ಯರು ಬಿಜೆಪಿ‌ ಪಕ್ಷದ ಮುಖಂಡರು ಇದ್ದರು.

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!