ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-7

ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-7

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-7

ನಮ್ಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿವರ್ಧಕ ಕಷಾಯದಲ್ಲಿನ 36 ಔಷಧಿ ದ್ರವ್ಯಗಳ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾಣದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:
7)ಮರೀಚ(Piper nigrum):
(ಕಾಳುಮೆಣಸು/black pepper):
ಹಿಂದಿನ-ಇಂದಿನ-ಮುಂದಿನ ಯಾವುದೇ ರೀತಿಯ ವೈರಾಣುವನ್ನು ಕೆಲವೇ ಕ್ಷಣಗಳಲ್ಲಿ ನಿಸ್ಪಂದನಗೊಳಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿರುವ ಮರೀಚವು ಇಂದಿನ ವಿಶ್ವವ್ಯಾಪಿ ಮತ್ತು ತೀವ್ರಗಾಮಿಯಾಗಿ ವರ್ತಿಸುತ್ತಿರುವ ಸೋಂಕಿಗೆ ಕೃಷ್ಣಜೀರಕದೊಂದಿಗೆ ಕೈ ಜೋಡಿಸಿ ಕಾರ್ಯ ನಿರ್ವಹಿಸುತ್ತಿರುವ ಮರೀಚದ ಕಾರ್ಯಕ್ಷಮತೆಯನ್ನು ನಾವ್ಯಾರೂ ಅವಗಣಿಸುವಂತಿಲ್ಲ.

ಆಚಾರ್ಯರು ಹೇಳಿದಂತೆ “ಜಂತು ಸಂತಾನ ನಾಶನಂ”, “ಭೂತ ನಾಶನಂ” ಎಂದರೆ, ಕೋಶವನ್ನು ಹೊಂದಿರದ ಅತ್ಯಂತ ಸೂಕ್ಷ ಜೀವಾಣುವನ್ನು ಭೂತ ಏಂತಲೂ (ಕಣ್ಣಿಗೆ ಕಾಣದಿರುವುದರಿಂದ ಭೂತ ಎಂಬ ಹೆಸರು ಬಂದಿದೆ), ಕೋಶವನ್ನು ಹೊಂದಿರುವ ಆದರೆ ಬರಿಗಣ್ಣಿಗೆ ಕಾಣದ ಸೂಕ್ಷ್ಣ ಜೀವಿಯನ್ನು ಜಂತು ಏಂತಲೂ ಕರೆಯಬಹುದು.

ಭೂತ=ವೈರಸ್
ಜಂತು=ಬ್ಯಾಕ್ಟೀರಿಯಾ

ಮರೀಚದಲ್ಲಿರುವ “ಪ್ರಮಾಥಿ” ಎಂಬ ವಿಶೇಷ ಗುಣವು ಸೋಂಕಿನ ಜೀವಾಣುಗಳ ಸಂಧಿಗಳನ್ನೇ ಮುರಿದುಹಾಕುತ್ತದೆ. ಅಂದರೆ, ಆ ಜೀವಾಣುವು ಚಲನೆಯನ್ನು ಹೊಂದಿ ಚೈತನ್ಯದಿಂದ ವರ್ತಿಸಲು ಅದರ ಸಂಧಿಗಳು ಬಲಿಷ್ಠವಾಗಿರಬೇಕಾಗುತ್ತವೆ.

(ಉದಾ:ಮಾನವನ ಅಸ್ಥಿ ಸಂಧಿಗಳು ಆರೋಗ್ಯವಾಗಿದ್ದಲ್ಲಿ ಅವನು ಶೀಘ್ರವಾಗಿ ಚಲನವಲನಗಳನ್ನು ಹೊಂದಿರುತ್ತಾನೆ ಮತ್ತು ಹೃದಯ ಮುಂತಾದ ಚೈತನ್ಯಕಾರಕ ಅವಯವಗಳ ಸಂಧಿಗಳು ನಿರಂತರ ಚಲನೆಯಲ್ಲಿರುವುದರಿಂದ ಮಾನವ ಜೀವಂತವಾಗಿರುತ್ತಾನೆ).

ಪ್ರಾಮಾಥಿ ಗುಣವು ಜೀವಚೈತನ್ಯ ಸಂಧಿಗಳನ್ನು ಶಿಥಿಲಗೊಳಿಸಿ ಚಲನೆಯನ್ನು ನಿಯಂತ್ರಿಸುವ ಅಥವಾ ಇಲ್ಲವಾಗಿಸುವ ಕಾರಣದಿಂದ ಅದು ಮಾನವನ ಜೀವಕೋಶದೊಳಕ್ಕೆ ತನ್ನ ಬಲದಿಂದಾಗಲೀ, ಯುಕ್ತಿಯಿಂದಾಗಲೀ (DNA ಅಥವಾ RNA chain ಬದಲಾಯಿಸಿಕೊಂಡು) ಪ್ರವೇಶಿಸುವದು ಅಸಾಧ್ಯ. ಇದನ್ನೇ “ಭೂತ ನಾಶನಂ” ಎಂದ್ದಿದ್ದಾರೆ.

ಒಂದೊಮ್ಮೆ ವೈರಾಣುವು ತನ್ನ ಗಾತ್ರದಲ್ಲಿ ಬ್ಯಾಕ್ಟೀರಿಯಾವನ್ನು ಹೋಲುತ್ತಿದ್ದರೆ ಅಥವಾ ಸೋಂಕು ಬ್ಯಾಕ್ಟೀರಿಯಾದಿಂದಲೇ ಉಂಟಾಗಿದ್ದರೆ ಅದು ಎರಡು-ನಾಲ್ಕಾಗಿ ವಿಭಜಿಸುವುದನ್ನು ಮರೀಚವು ತಡೆದುಬಿಡುತ್ತದೆ. ಇದನ್ನೇ “ಜಂತುಸಂತಾನ ನಾಶನಂ” ಎಂದು ಕರೆಯುತ್ತಾರೆ.

ವೈರಸ್ ಮತ್ತು ಬ್ಯಾಕ್ಟೀರಿಯಾದಲ್ಲಿನ ಪ್ರೊಟೀನ್ ಚೈನ್ ನಲ್ಲಿರುವ
ಪೇಪ್ ಟೈಡ್(peptide) ಬಾಂಡ್ ಗಳು ಆ ಸೂಕ್ಷ್ಮ ಜೀವಾಣುವಿನ ನಿಜವಾದ ಸಂಧಿಗಳು. ಈ ಚೈನಿನ ಯಾವುದೋ ಒಂದೆರಡು ಬಾಂಡ್ ಗಳನ್ನು ಶಿಥಿಲಗೊಳಿಸಿದರೆ ಅಥವಾ ಕಾರ್ಯಹೀನಗೊಳಿಸಿದರೆ ಆ ಜೀವಿಯು ತಾನು ಸ್ವತಃ ರೋಗವನ್ನು ಉಂಟುಮಾಡಲಾರದು ಮತ್ತು ತನ್ನಂತಹ ಇನ್ನೊಂದು ಸಂತಾನವನ್ನು ಸೃಷ್ಟಿಸಲಾರದು.

ಇಂತಹ ಶ್ರೇಷ್ಠ ದ್ರವ್ಯ ಮರೀಚವನ್ನು ಬಾಯಿಯಲ್ಲಿ ಹಾಕಿಕೊಂಡು ನಿಧಾನವಾಗಿ ಗಂಟಲೊಳಗೆ ಇಳಿಸಿದರೆ ಅಲ್ಲಿ ಹೊಸದಾಗಿ ಬಂದಿರಬಹುದಾದ ಇಂತಹ ಸೋಂಕಿನ ಜೀವಾಣುಗಳನ್ನು ಆ ಕ್ಷಣವೇ ನಿಸ್ತೇಜಯಾಗಿಸುತ್ತದೆ.

ಅತೀ ಪ್ರಮಾಣದಲ್ಲಿ ಮರೀಚ ಸೇವನೆಯನ್ನು ಮಾಡಿದರೆ ಜೀವಾಣುಗಳ ಸಂಧಿಗಳಲ್ಲದೇ ನಮ್ಮ ಶರೀರದ ಸಂಧಿಗಳನ್ನೂ ದುರ್ಬಲಗೊಳಿಸುತ್ತದೆ. ಹಾಗಾಗಿ ಪ್ರಮಾಣ-ಪರಿಣಾಮವನ್ನು ಗಮನಿಸದೇ ಅತಿಯಾಗಿ ಸೇವಿಸಬಾರದು.

ಮರೀಚವನ್ನು ಬಳಸಿ ತಯಾರಿಸುವ ಕೆಲವು ಔಷಧಿಗಳು:

  1. ತ್ರಿಕಟು(ಕೆಮ್ಮು,ಅಸ್ತಮಾ,ಅಲರ್ಜಿ, ಅಜೀರ್ಣ ನಿವಾರಕ)
  2. ಮಹಾಮರೀಚ್ಯಾದಿ ತೈಲ (ಬ್ಯಾಕ್ಟೀರಿಯಾ, ಫಂಗಸ್ ನಿಂದಾಗುವ ಚರ್ಮದ ಖಾಯಿಲೆಗಳು)

ಈ ಸಂಶೋಧನೆಯ ಖಾಚಿತ್ಯತೆಗಾಗಿ ಲಿಂಕ್ ನೋಡಿ-

http://nopr.niscair.res.in/handle/123456789/9828

ಕಷಾಯ ಚೂರ್ಣ ಬಳಸಲು ಇಚ್ಛಿಸುವವರು ಸಂಪರ್ಕಿಸಿ:
9148702645

ವಿಶ್ವಹೃದಯಾಶೀರ್ವಾದವಂ ಬಯಸಿ


ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.)

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!