ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-2

ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-2

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-2

ಶಿವಮೊಗ್ಗದ ಅಥರ್ವ ಆಯುರ್ಧಾಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿದ್ಧ ಗಿಡಮೂಲಿಕೆಗಳಿಂದ ತಯಾರಿಸಿದ 36 ಔಷಧಿ ದ್ರವ್ಯಗಳ ಮತ್ತು ಕಷಾಯ ಚೂರ್ಣದ ಮಾಹಿತಿಯನ್ನು ಪಡೆಯಲು ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಕಷಾಯದಲ್ಲಿನ ಘಟಕ ದ್ರವ್ಯ:

02)ದಶಮೂಲ:
ಈ ಕಷಾಯದಲ್ಲಿನ ಪ್ರಧಾನ ಘಟಕ ದ್ರವ್ಯವಾದ ದಶಮೂಲವು(10 ವಿಶಿಷ್ಟ ಗಿಡಮೂಲಿಕೆಗಳ ಬೇರುಗಳು)
ವಿಶೇಷವಾಗಿ ಉಸಿರುನಾಳ, ಪುಪ್ಪುಸಗಳು, ಯಕೃತ್-ಪ್ಲೀಹ, ದೊಡ್ಡಕರಳು ಮತ್ತು ಗರ್ಭಾಶಯಗಳಲ್ಲಿನ ಕಫದಿಂದ ಉಂಟಾಗುವ ಮತ್ತು ವಾತದಿಂದ ಅತ್ಯಂತ ಶೀಘ್ರವಾಗಿ ವ್ಯಾಪಿಸುವಂತಹ ರೋಗಗಳನ್ನು ವಿಘಟನ ಮಾಡುವಲ್ಲಿ ಅತ್ಯಂತ ಸಮರ್ಥವಾಗಿದೆ.

ಪುಪ್ಪುಸದ ಮೂಲಧಾತು) ಫೇನರಕ್ತವು(ನೊರೆ ನೊರೆಯಾದ ರಕ್ತವು) ಕಫದೊಂದಿಗೆ ಸೇರಿ ಪುಪ್ಪುಸಗಳಲ್ಲಿ ವಿಶೇಷ ಸ್ರಾವವನ್ನು ಉಂಟುಮಾಡುತ್ತವೆ. ಇದೇ ಅಲರ್ಜಿ.

ಇದೇ ಸಮಯದಲ್ಲಿ
ದೇಹದ ಇನ್ನೊಂದು ಭಾಗದಲ್ಲಿ ಅಂದರೆ ದೊಡ್ಡ ಕರುಳಿನಲ್ಲಿ ಉತ್ಪತ್ತಿಯಾಗುವ ವಾತಕ್ಕೆ ಅಲ್ಲಿ ಸೇರಿದ ವಿಕೃತ ಕಫವು ಆವರಣವನ್ನುಂಟುಮಾಡುತ್ತದೆ, ಆಗ ವಾತವು ಮೇಲ್ಮುಖವಾಗಿ ಪ್ರವಹಿಸಿ ಪುಪ್ಪುಸಗಳನ್ನು ಸೇರುತ್ತದೆ. ಇದನ್ನು “ಅಧಃ ಪ್ರತಿಹತ ವಾಯುಃ” ಎನ್ನುತ್ತಾರೆ.

ಈಗಾಗಲೇ ಪುಪ್ಪುಸಗಳಲ್ಲಿ ಇರುವ ರೋಗಕಾರಕ ವಿಶೇಷ ಸ್ರಾವವನ್ನು ಈ ವಿಕೃತ ವಾತವು ಪುಪ್ಪುಸಗಳ ಸೂಕ್ಷಮಾತಿಸೂಕ್ಷ್ಮ ಕಾರ್ಯಘಟಕಗಳಾದ ಅಲ್ವಿಯೋಲಸ್ ಗಳಲ್ಲಿ ತುಂಬಿ ಅದನ್ನು ಅವರಿಸಲು ಆರಂಭಿಸುತ್ತದೆ. ಇದನ್ನೇ ಬ್ರೊಂಕೈಟಿಸ್, ಬ್ರೊಂಕಿಯಲ್ ಅಸ್ತಮಾ ಮುಂತಾಗಿ ಕರೆಯಬಹುದು ಮತ್ತು ಇಲ್ಲಿನ ವಾತವು ತನ್ನ ಒಣಗಿಸುವಿಕೆಯ ಗುಣದಿಂದ ಬಹಳ ಕಾಲದವರೆಗೆ ಸ್ಥಿತವಾದರೆ ಆಲ್ವಿಯೊಲಸ್ ಗಳ ಪೊರೆಯನ್ನೇ ಒಣಗಿಸುತ್ತಾ ಇಂಟಸ್ಸ್ಟಿಶಿಯಲ್ ಲಂಗ್ ಡಿಸೀಸ್(ILD), COPD ಮುಂತಾದ ಪ್ರಾಣಾಂತಿಕ ಖಾಯಿಲೆಗಳನ್ನು ಉಂಟು ಮಾಡುತ್ತದೆ.

ಇವು ನಿಧಾನಗತಿಯಲ್ಲಿ ಉಂಟಾಗುವ ರೋಗಗಳು. ಆದರೆ, ಸೋಂಕಿನಿಂದ ಉಂಟಾಗುವ
ಇನ್ ಫ್ಲೂ ಎಂಜಾ, ನ್ಯೂಮೋನಿಯ, ಟಿ.ಬಿ ಯಂತಹ ರೋಗಗಳು ಶೀಘ್ರವಾಗಿ ಪುಪ್ಪುಸಗಳನ್ನು ಹಾನಿಗೊಳಿಸುತ್ತವೆ.

ಈ ಅವಸ್ಥೆಗಳನ್ನು ಆರಂಭದಲ್ಲಿಯೇ ತಡೆದುಬಿಡುವ ಅಂದರೆ, ಪುಪ್ಪುಸಗಳಲ್ಲಿ ಕಫವನ್ನು ತಡೆಯುವ ಮತ್ತು ದೊಡ್ಡಕರುಳಿನಲ್ಲಿ ವಾತವನ್ನು ತಡೆಯುವ ವಿಶೇಷ ಸಾಮರ್ಥ್ಯವು “ದಶಮೂಲ”ಕ್ಕೆ ಇದೆ.

ಆಧುನಿಕ ವಿಜ್ಞಾನದ ಅನ್ವಯ ಅಧ್ಯಯನ ನಡೆಸಿದ ಸಂಶೋಧನೆಗಳು ದಶಮೂಲವನ್ನು ಶ್ರೇಷ್ಠ ಊತನಾಶಕ(Anti -inflammatory) ಎಂದು ಫಲಿತಾಂಶವನ್ನು ಕೊಟ್ಟಿವೆ. ಇದರ ಖಾಚಿತ್ಯತೆಗಾಗಿ ಕೆಳಗಿನ ಲಿಂಕ್ ನ್ನು ಒತ್ತಿ ನೋಡಬಹುದು.

https://www.ncbi.nlm.nih.gov/pmc/articles/PMC4395922/

ಈ ಲಿಂಕ್ ನಲ್ಲಿ ಹೇಳಿರುವ ಊತನಾಶಕ, ಎಂದರೆ, ದಶಮೂಲವು “ವಿಶೇಷವಾಗಿ ಸಣ್ಣ ಕರುಳಿನ ಕೊನೆಯ ಭಾಗ(ileum), ದೊಡ್ಡ ಕರುಳು, ಪುಪ್ಪುಸ, ಗರ್ಭಾಶಯಗಳಲ್ಲಿನ ಊತವನ್ನು ನಿವಾರಿಸುತ್ತದೆ”.

ವಿಶೇಷ ದ್ರವ್ಯಗಳೊಡನೆ ದಶಮೂಲವನ್ನು ಸೇರಿಸಿದರೆ ಮೆದುಳು, ಹೃದಯ, ಸಂಧಿಗಳು, ಮೂತ್ರಪಿಂಡ ಮುಂತಾದ ಮರ್ಮ ಸ್ಥಾನಗಳಲ್ಲಿನ ಊತವನ್ನು ನಿವಾರಿಸುತ್ತದೆ.

ಇಂತಹ ಶ್ರೇಷ್ಠ ದ್ರವ್ಯಗಳನ್ನು ಹೊಂದಿದ, ಸಂಸ್ಥೆ ಸಿದ್ಧಪಡಿಸಿದ ಕಷಾಯವು ಸೋಂಕು ಹರಡುತ್ತಿರುವ ಈ ಪರಿಸ್ಥಿತಿಯಲ್ಲಿ ನಮ್ಮ ಪುಪ್ಪುಸಗಳನ್ನು ಸಂರಕ್ಷಿಸುವಲ್ಲಿ ಸಂಶಯವಿಲ್ಲ.

ಸಂಪರ್ಕ ಸಂಖ್ಯೆ: 9148702645

ವಿಶ್ವಹೃದಯಾಶೀರ್ವಾದವಂ ಬಯಸಿ


ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!