ಆತ್ಮ ನಿರ್ಭರ್ ಭಾರತ್ ಕ್ಕೆ ಸಾತ್ ನೀಡಿದ ಯುವಾ ಬ್ರಿಗೇಡ್ ನ ಗ್ಲೋಕಾಲ್ ಇಂಡಿಯಾ: ಗ್ರಾಮೀಣ ಭಾರತದ ಹೊಸ ಕಲ್ಪನೆ..!

ಆತ್ಮ ನಿರ್ಭರ್ ಭಾರತ್ ಕ್ಕೆ ಸಾತ್ ನೀಡಿದ ಯುವಾ ಬ್ರಿಗೇಡ್ ನ ಗ್ಲೋಕಾಲ್ ಇಂಡಿಯಾ: ಗ್ರಾಮೀಣ ಭಾರತದ ಹೊಸ ಕಲ್ಪನೆ..!

ಭಾರತ ಸ್ವಾಭಿಮಾನ ಸ್ವಯತತೆಯನ್ನು ರೂಢಿಸಿಕೊಳ್ಳಲು ಮತ್ತು ಭಾರತದಲ್ಲಿನ ಗ್ರಾಮೀಣ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೊದಿಯವರ ಆತ್ಮ ನಿರ್ಭರ್ ಭಾರತದ ಕಲ್ಪನೆಗೆ ಸಾತ್ ನೀಡುವ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಗ್ರಾಮೀಣ ವಸ್ತುಗಳನ್ನು ಪ್ರದರ್ಶಿಸುವ ಬೃಹತ್ ಸೇತುವೆಯಾಗಿ ಯುವಾ ಬ್ರಿಗೇಡ್ ಕಾರ್ಯನಿರ್ವಹಿಸುತ್ತಿದೆ.

ಗ್ಲೋಕಾಲ್ ಇಂಡಿಯಾ ಗ್ರಾಮೀಣ ಉತ್ಪನ್ನಗಳ ಸಂಪರ್ಕ ಸಾಧಿಸುವ ಮಹಾ ಸೇತುವೆಯಾಗಿ ಯುವಾ ಬ್ರಿಗೇಡ್ ಕಾರ್ಯನಿರ್ವಹಿಸುತ್ತಿದ್ದು ಯುವ ಬ್ರಿಗೇಡ್ ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರ ಹೊಸ ಕಲ್ಪನೆ ಗ್ರಾಮೀಣ ಭಾರತದ ಸ್ಥಳೀಯವಾಗಿ ಸಿಗಬಹುದಾದ ವಸ್ತುಗಳನ್ನು ಸ್ಥಳಕ್ಕೆ ಹೋಗಿ ಖರೀದಿಸಬೇಕಾದ ಪರಿಸ್ಥಿತಿ ಇತ್ತು ಅದರೆ ಈಗಾ ಕುಳಿತ ಸ್ಥಳದಲ್ಲೇ ಸ್ಥಳೀಯ ಉತ್ಪನ್ನಗಳನ್ನ ತಯಾರಿಸುವ ತಯಾರಕರ ಜೊತೆ ಮಾತನಾಡಿ ಉತ್ಪನ್ನಗಳನ್ನು ಬುಕ್ ಮಾಡಬಹುದು ತರಿಸಿಕೊಳ್ಳುವ ಹಾಗೂ ಉತ್ಪನ್ನಗಳನ್ನು ದೇಶವ್ಯಾಪಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಸಿಗಬೇಕೆಂಬ ಪ್ರಬಲವಾದ ಧ್ವನಿ ಅವರದ್ದಾಗಿದೆ.

ಭಾರತದ ಒಂದೊಂದು ರಾಜ್ಯದಲ್ಲೂ ವಿಶಿಷ್ಟ ಉತ್ಪನ್ನಗಳನ್ನು ನೊಡಬಹುದು ಕರ್ನಾಟಕದಲ್ಲಿಯೇ ನೊಡುವುದಾದರೆ ಚಿಕ್ಕಪೇಟ್ಟೆ ಗೊಂಬೆ ಇಳಕಲ್ಲು ಸೀರೆಗಳು, ಮೈಸೂರು ಪೇಟ, ಧಾರವಾಡ ಪೇಡಾ, ದೇಶಿಯ ಎಣ್ಣೆಗಾಣಗಳು,ಸಿಹಿ ತಿನಿಸು, ಹೀಗೆ ನಮ್ಮ ದಿನ ನಿತ್ಯದ ಬದುಕಿಗೆ ಅಗತ್ಯವಾದ ವಸ್ತುಗಳು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವಸ್ತುಗಳು ತಯಾರಾಗುತ್ತಿದ್ದರೂ ಪ್ರಚಾರ ಮತ್ತು ಸಂವಹನಕ್ಕೆ ಸರಿಯಾದ ವೇದಿಕೆ ಇಲ್ಲದ ಕಾರಣ ಇವುಗಳ ಬಗ್ಗೆ ಜನರಿಗೆ ಮಾಹಿತಿ ತಿಳಿಯುತ್ತಿರಲಿಲ್ಲ. ಈಗ ಇವುಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಲು ಯುವಾ ಬ್ರಿಗೇಡ್‌ Glocal India ಹೆಸರಿನ ಸಂಸ್ಥೆಯನ್ನು ಆರಂಭಿಸಿದೆ.

ಯುವಾ ಬ್ರಿಗೇಡ್ ಆರಂಭಿಸಿರುವ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌  ಈ www.glocalindia.org ಎಲ್ಲಾ ವೆಬ್ ಸೈಟ್ ಗಳ ರೀತಿಯಲ್ಲಿ  ಕಾರ್ಯ ನಿರ್ವಹಿಸುವುದಿಲ್ಲ  ನೇರವಾಗಿ ಈ ವೆಬ್‌ಸೈಟ್‌ ಮೂಲಕ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದು ಗ್ರಾಹಕರು ಮತ್ತು ತಯಾರಕರ ಮಧ್ಯೆ ಸಂವಹನ ಕಲ್ಪಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ ನೇರವಾಗಿ ಗ್ರಾಹಕರ ಹಾಗೂ ಉತ್ಪದಕರ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಸ್ಥಳೀಯ ಉತ್ಪನ್ನಗಳ ಪ್ರತಿಯೊಂದು ಉತ್ಪನ್ನಗಳ  ಸಂಪೂರ್ಣ ಮಾಹಿತಿಯನ್ನು ಈ ವೆಬ್ ಸೈಟ್ ನಲ್ಲಿ  ನೀಡಲಾಗಿದ್ದು ತಯಾರಕರ ಸಂಪರ್ಕದ ವಿಳಾಸವನ್ನು ನೀಡಲಾಗಿದೆ ಸ್ಥಳೀಯ ಉತ್ಪನ್ನಗಳಿಗೆ ಮಾತ್ರ ಸೇತುವೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಪ್ರಮುಖವಾಗಿ ಮನೆ, ಪೀಠೋಪಕರಣ, ಆಹಾರ, ಫ್ಯಾಶನ್‌, ಆಟಿಕೆ, ಸೇವೆ, ಎಲೆಕ್ಟ್ರಿಕಲ್‌, ಆರೋಗ್ಯ  ಸೇರಿದಂತೆ ಅನೇಕ ವಸ್ತುಗಳ ವಿವರಣೆ ನೀಡಲಾಗಿದೆ.

ಗ್ಲೋಕಾಲ್ ನ ಮುಖ್ಯ ಉದ್ದೇಶ:

ದೇಶದ ಪ್ರಧಾನಮಂತ್ರಿ ನರೇಂದ್ರಮೋದಿಜೀ ಅವರ  ಆತ್ಮನಿರ್ಭರ ಭಾರತ ಕನಸಿನೊಂದಿಗೆ ಮಹಾತ್ಮ ಗಾಂಧಿಜೀ ಅವರ ಗ್ರಾಮೀಣ ಭಾರತದ ಸ್ಥಳೀಯ ಗುಡಿ ಕೈಗಾರಿಕೆ ಕಲ್ಪನೆಗೆ ಯುವಾಬ್ರಿಗೇಡ್ ಹುಟ್ಟುಹಾಕಿದ ಸಂಸ್ಥೆ Glocal India. ಇದು Global ಮಟ್ಟಕ್ಕೇರಬಲ್ಲ Local ವಸ್ತುಗಳಿಗೆ Vocal ಆಗುವ ಪ್ರಯತ್ನ. ಇಲ್ಲಿ  ಪ್ರತಿ ಜಿಲ್ಲೆಯ ಸ್ಥಳೀಯ ಉತ್ಪನ್ನಗಳನ್ನು ಪಟ್ಟಿಮಾಡಿ ಅವುಗಳು ಸಿಗುವ ಸ್ಥಳಗಳನ್ನು ತಿಳಿಸಲು ವೇದಿಕೆ ರೂಪಿಸಿಕೊಡಲಾಗಿದೆ

ಪ್ರತಿ ಜಿಲ್ಲೆಯ ಸ್ಥಳೀಯ ಕಂಪೆನಿಗಳು ತಾವು Global ಆಗುವ ಅರ್ಹತೆ ಇದೆಯೋ ಇಲ್ಲವೋ ಎಂಬುದನ್ನು ಕೂಡ ತಜ್ಞರ ಸಮಿತಿ ನಿರ್ಧರಿಸಿ ಅವರಿಗೆ ಗುಣಮಟ್ಟ ಪತ್ರವನ್ನು ಕೊಡಲಾಗುತ್ತದೆ. ಮತ್ತು ಈ ವೆಬ್‌ಸೈಟ್‌ನಲ್ಲಿ ಅಂತಹ ಉತ್ತಮ ಗುಣಮಟ್ಟದ ವಸ್ತುಗಳನ್ನು ಪ್ರತ್ಯೇಕವಾಗಿ ಬಿಂಬಿಸಲಾಗುತ್ತದೆ.

ಇದು ಕೆವಲ ಸ್ಥಳೀಯ ವಸ್ತುಗಳಿಗೆ ವೇದಿಕೆ ಮಾತ್ರ ಆಗಿದ್ದು ಇದರ ಮೂಲಕ ಮಾರಾಟ ನಡೆಯುವುದಿಲ್ಲ ಬದಲಿಗೆ ಉತ್ಪಾದಕರ ನೇರ ಸಂಪರ್ಕವನ್ನು ಗ್ರಾಹಕರಿಗೆ ಈ ಮೂಲಕ ಕಲ್ಪಿಸಿಕೊಡಲಾಗುತ್ತದೆ.

ಗ್ಲೋಕಾಲ್ ಇಂಡಿಯಾ ವೆಬ್ಸೈಟ್ ಕುರಿತು ಚಕ್ರವರ್ತಿ ಸೂಲಿಬೆಲೆ ಅವರಿಂದ ಮಾಹಿತಿ

ಗ್ರಾಮೀಣ ಉತ್ಪನಗಳಿಗೆ ವೇದಿಕೆಯನ್ನು ಕಲ್ಪಿಸುವ ಮೂಲಕ ಯುವಾ ಬ್ರಿಗೇಡ್ ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಕರೋನದ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಗ್ರಾಮೀಣ ಯುವಕರು ಪಟ್ಟಣ ಬಿಟ್ಟು ಹಳ್ಳಿಗಳನ್ನು ಸೇರಿಕೊಂಡಿದ್ದಾರೆ.

ಈ ವಿಭಿನ್ನ ಪ್ರಯತ್ನದಿಂದ ಗ್ರಾಮೀಣ ಯುವಕರಿಗೆ ಹೊಸ ಉದ್ಯಮ ಸ್ಥಾಪಿಸಲು ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗವನ್ನು ಒದಗಿಸಲು ಸಹಕಾರಿಯಾಗಲಿದೆ ಎಂಬುದು ಚಕ್ರವರ್ತಿ ಅವರ ಆಶಾಯವಾಗಿದೆ ಒಟ್ಟಿನಲ್ಲಿ ಗ್ರಾಮೀಣ ಭಾರತ ಕಟ್ಟುವಲ್ಲಿ ಗಾಂಧಿಜೀ ಅವರ ಕನಸ್ಸು ನನಸ್ಸಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಯುವಾ ಬ್ರಿಗೇಡ್ ತಂಡದವರಿಗೆ ಶಿಕಾರಿ ನ್ಯೂಸ್ ಪರವಾಗಿ ಅಭಿನಂದಿಸುತ್ತೇವೆ.

Story By: Raghu Shikari= 7411515737

Admin

Leave a Reply

Your email address will not be published. Required fields are marked *

error: Content is protected !!