ರೋಗನಿರೋಧಕ ಶಕ್ತಿ ವರ್ಧನೆಗೆ- ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-1

ರೋಗನಿರೋಧಕ ಶಕ್ತಿ ವರ್ಧನೆಗೆ- ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-1

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ರೋಗನಿರೋಧಕ ಶಕ್ತಿ ವರ್ಧನೆಗೆ-
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-1

ಸುಮಾರು ಮೂರುಸಾವಿರ ವರ್ಷಗಳಿಗಿಂತ ಹಿಂದಿನಿಂದಲೂ ಸಿದ್ಧ ಗಿಡಮೂಲಿಕೆಗಳ ಕಷಾಯಗಳು ರೋಗ ಬಾರದಂತೆ ಮತ್ತು ಬಂದ ರೋಗಗಳನ್ನು ತಕ್ಷಣ ನಿಯಂತ್ರಿಸುವಂತೆ ಮತ್ತು ಅಪಾಯದ ಹಂತಕ್ಕೆ ಕೊಂಡೊಯ್ಯದಂತೆ ತಡೆಯುವಲ್ಲಿ ಯಶಸ್ವಿ ಸೂತ್ರಗಳಾಗಿದ್ದವು.

ಹಿಂದೆ-ಇಂದು-ಮುಂದೆಯೂ ಬದಲಾಗದ ಈ ಸೂತ್ರಗಳನ್ನು ಸಿದ್ಧಾಂತಗಳೆಂದು ಕರೆಯುತ್ತಾರೆ.

ಶಿವಮೊಗ್ಗದ ಅಥರ್ವ ಆಯುರ್ಧಾಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿದ್ಧ ಗಿಡಮೂಲಿಕೆಗಳಿಂದ ತಯಾರಿಸಿದ
36 ಔಷಧಿ ದ್ರವ್ಯಗಳನ್ನು ಮತ್ತು ಕಷಾಯ ಚೂರ್ಣದ ಮಾಹಿತಿಯನ್ನು ಪಡೆಯಲು ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಇಂದಿನಿಂದ 36 ಆಯುರ್ವೇದ ಗಿಡಮೂಲಿಕೆಗಳ ಕಷಾಯದಲ್ಲಿನ ಘಟಕಗಳ ಬಗ್ಗೆ ಇರುವ ಸಂಶೋಧನಾತ್ಮಕ ವಿವರಗಳನ್ನು ನೀಡಲಾಗುವುದು.ಇದು

ಕಷಾಯದಲ್ಲಿನ ಘಟಕ ದ್ರವ್ಯ:
01)ಕೃಷ್ಣ ಜೀರಕ/ಉಪಕುಂಚಿಕ (Nigelle sativa):
ಸುಮಾರು 6 ವರ್ಷಗಳ ಹಿಂದೆಯೇ ಕೊರೋನ ವೈರಾಣುವಿನ ಸಂತಾನೋತ್ಪತ್ತಿಯನ್ನು ತಡೆಯುವಲ್ಲಿ ಕೃಷ್ಣಜೀರಕ/ಉಪಕುಂಚಿಕ ಯಶಸ್ವಿಯಾಗಿತ್ತು ಎಂದು 12-01-2014 ರಂದು Molecular biological report ಎಂಬ International journal ನಲ್ಲಿ ಪ್ರಕಟಗೊಂಡಿದೆ. ಆಸಕ್ತರು ಈ ಲಿಂಕ್ ನ್ನು ನೋಡಿ ಪರಿಶೀಲಿಸಬಹುದು.

https://www.ncbi.nlm.nih.gov/pmc/articles/PMC3933739/

U.S.National library of medicine ಎಂಬುದರಲ್ಲಿ CoVid19 ಬಗ್ಗೆ ಕೃಷ್ಣ ಜೀರಕ trial ಬಗೆಗಿನ ಮಾಹಿತಿ ಇದೆ. ಆಸಕ್ತರು ಈ ಲಿಂಕ್ ನ್ನು ನೋಡಿ ಪರಿಶೀಲಿಸಬಹುದು.

https://clinicaltrials.gov/ct2/show/NCT04401202

ಕೃಷ್ಣ ಜೀರಕವು ತೀಕ್ಷ್ಣ ಮತ್ತು ಆವಿಯಾಗುವಂತಹ ದ್ರವ್ಯಗಳನ್ನು ಹೊಂದಿದ್ದು ರೂಕ್ಷ(ಒಣಗಿಸುವಿಕೆ) ಗುಣವನ್ನು ಹೊಂದಿರುವುದರಿಂದ ವೈರಾಣುವಿನ ಹೊರ ಕವಚವನ್ನು ಒಣಗಿಸಿ ಬಿಡುತ್ತದೆ.

ಯಾವುದೇ ವೈರಸನ್ನು ವೃದ್ಧಿಯಾಗಲು ಅಥವಾ ಸಂತಾನೋತ್ಪತ್ತಿಯಾಗಲು ಬಿಡುವುದೇ ಇಲ್ಲ. ಯಾವ ರಾಸಾಯನಿಕ ಅಂಶವು ಈ ಕೆಲಸವನ್ನು ಮಾಡುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲಾಗಿಲ್ಲ. ಅದನ್ನು ಸಂಶೋಧನಾಸಕ್ತರು ಮುಂದುವರೆಸಿ ನೋಡಬಹುದು. ಸದ್ಯದ ವಿಷಣ್ಣ ಪರಿಸ್ಥಿತಿಯಲ್ಲಿ ನಮಗೆ ಬೇಕಾಗಿರುವುದು ಫಲಿತಾಂಶವೇ ಹೊರತು,ಅದು ರಾಸಾಯನಿಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ಧೃಡಪಡಿಸುವುದು ತುರ್ತು ಅಗತ್ಯವಲ್ಲ.

ಕೃಷ್ಣಜೀರಕ ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಏಕೆಂದರೆ,ಇದು ಯಾವುದೋ ಮಾನವ ನಿರ್ಮಿತ ರಾಸಾಯನಿಕ ಸಂಯುಕ್ತವಲ್ಲ.

ಬಹುಹಿಂದಿನಿಂದಲೂ ಭಾರತೀಯರು ಸಾಂಬರ್ ಪದಾರ್ಥಗಳಲ್ಲಿ ಬಳಸಿ ಏನೂ ತೊಂದರೆಯಾಗದಿರುವುದನ್ನು ನೋಡಿಯೂ ಮತ್ತು ಕೃಷ್ಣ ಜೀರಕವು ಈ ಹಿಂದೆಯೇ ಬಂದಿದ್ದ ಕೊರೋನ ಸೋಂಕಿನ ಸಂತಾನವನ್ನು ನಿಯಂತ್ರಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದ್ದಿದ್ದರೂ ಕೂಡ ಆಧುನಿಕ ವಿಜ್ಞಾನಿಗಳು ಇದರ ಬಳಕೆಯ ಬಗ್ಗೆ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ.

ಅವರು ಏನೇ ಮಾಡಿಕೊಳ್ಳಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಹಾಗಾಗಿ ಜಗತ್ತಿನಲ್ಲಿ ಕೊರೋನ ಸೋಂಕಿನ ಪ್ರಭಾವ ಇರುವವರೆಗೂ ನಿತ್ಯವೂ ಕೃಷ್ಣ ಜೀರಕ ಇರುವ ಕಷಾಯವನ್ನು ಸೇವಿಸಿ ಆರೋಗ್ಯವನ್ನು ರಕ್ಷಿಸಿಕೊಳೋಣ

ವಿಶ್ವಹೃದಯಾಶೀರ್ವಾದವಂ ಬಯಸಿ


ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!