ನಮ್ಮ ರಕ್ಷಣೆ ನಮ್ಮ ಕೈಯ್ಯಲ್ಲಿ” ಕೊವಿಡ್ ಬಾರದಂತೆ ತಡೆಯಿರಿ..!

ನಮ್ಮ ರಕ್ಷಣೆ ನಮ್ಮ ಕೈಯ್ಯಲ್ಲಿ” ಕೊವಿಡ್ ಬಾರದಂತೆ ತಡೆಯಿರಿ..!

ಆಸ್ಪತ್ರೆರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:- ಕೊವಿಡ್ “ನಮ್ಮ ರಕ್ಷಣೆ ನಮ್ಮ ಕೈಯ್ಯಲ್ಲಿ”

  1. ಕೊವಿಡ್ ಬಾರದಂತೆ ತಡೆಯಿರಿ
  2. ಬಂದರೂ ಅಪಾಯದ ಹಂತ ತಲುಪದಂತೆ ನೋಡಿಕೊಳ್ಳಿ
  3. ಸಂಭಾವ್ಯ ಸಾವನ್ನು ತಡೆಯಿರಿ
  4. ಕೊವಿಡ್ ಬಾರದಂತೆ ತಡೆಯಿರಿ:

ಆಯುರ್ವೇದದ ಕಷಾಯ ಬಳಸಿದವರು ಕೊರೋನಾ ಅಷ್ಟೇ ಅಲ್ಲ, “ಸಣ್ಣ ನೆಗಡಿಯೂ ಬಾರದಂತೆ ತಡೆಯುವಲ್ಲಿ ಸಫಲರಾಗಿದ್ದಾರೆ” ಇದು ನಮ್ಮ ಮಾತಲ್ಲ- ಈ ಗುಂಪಿನಲ್ಲಿ ಹಿಂದೆ ಹೇಳಿದ್ದ ಕಷಾಯ ಸೇವನಾ ವಿಧಾನಗಳನ್ನು ಅನುಸರಿಸುತ್ತಿರುವ ಅನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅವರೆಲ್ಲಾ “ನಮ್ಮ ಕುಟುಂಬಕ್ಕೆ ಸಣ್ಣ ನೆಗಡಿಯೂ ಬಂದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆಯುರ್ವೇದದ ಕಷಾಯಗಳನ್ನು ಕುಡಿದು ವೈರಸ್ ಸೋಂಕನ್ನು ನಿಭಾಯಿಸುತ್ತಿದ್ದಾರೆ.

ನೀವೂ ಹಾಗೆ ಮಾಡಿ ಸುರಕ್ಷಿತರಾಗಿರಿ.
ಮನೆಯಲ್ಲಿ ಸುಲಭವಾಗಿ ದೊರೆಯುವ ದ್ರವ್ಯಗಳಾದ ತುಳಸಿ, ಶುಂಠಿ , ಬೆಳ್ಳುಳ್ಳಿ, ಕಾಳುಮೆಣಸು, ಕರಿ ಜೀರಿಗೆ, ತುಂಬೆಗಿಡ, ಅಮೃತ ಬಳ್ಳಿ ಎಲ್ಲವನ್ನೂ ಸಮ ಪ್ರಮಾಣದಲ್ಲಿ ಪುಡಿಮಾಡಿ ಇಟ್ಟುಕೊಳ್ಳಿ.

ಉಪಯೋಗಿಸುವ ವಿಧಾನ:

ಒಬ್ಬರಿಗೆ ಒಂದು ಚಮಚದಂತೆ ಪುಡಿ ಬಳಸಿ ಕಷಾಯ ಮಾಡಿ ಬೆಲ್ಲ ಅಥವಾ ಕಲ್ಲುಸಕ್ಕರೆ ಬೆರೆಸಿ ದಿನಕ್ಕೆ ಎರೆಡುಬಾರಿ ಸೇವಿಸಿ ಸುರಕ್ಷಿತವಾಗಿ ಇರಿ.
ಈ ಆಯುರ್ವೇದದ ಗಿಡಮೂಲಿಕೆಗಳಲ್ಲಿ ವೈರಸ್ ಮತ್ತು ಜ್ವರ ನಿವಾರಕ ಅಂಶಗಳು ಇರುವುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ.

  1. ಬಂದರೂ ಅಪಾಯದ ಹಂತ ತಲುಪದಂತೆ ನೋಡಿಕೊಳ್ಳಿ:

ಬೆಳಿಗ್ಗೆ ಎದ್ದ ತಕ್ಷಣ ಅಥರ್ವ ಆಯುರ್ದಂತಮ್ ದಂತದ್ರವದಿಂದ ಅಥವಾ ಉಪ್ಪಿನಿಂದ ಹಲ್ಲುಜ್ಜಿ ಗಂಟಲು ತೊಳೆದುಕೊಳ್ಳಿ, ನಂತರ
20ಮಿ.ಲೀ ನೆಲನೆಲ್ಲಿ(ಕಿರುನೆಲ್ಲಿ) ರಸವನ್ನು ಕುಡಿಯಿರಿ ಇದರಿಂದ ಯಕೃತ್ ಸಹಾಯದೊಂದಿಗೆ ಶರೀರದ ಯಾವುದೇ ಭಾಗದ ವೈರಸ್ ಗಳನ್ನು ಕಟ್ಟಿಹಾಕಿ ನಿಷ್ಕ್ರಿಯೆ ಗೊಳಿಸುತ್ತದೆ. ಕಿರುನೆಲ್ಲಿಯೂ ಸಹ ಶ್ರೇಷ್ಠ ವೈರಸ್ ನಿವಾರಕ ಎಂದು ಸಂಶೋಧನೆಗಳು ತಿಳಿಸಿವೆ.

ಮತ್ತು ಹೇರಳವಾಗಿ ವಿಟಮಿಸ್ ‘ಸಿ’ ಅಂಶವನ್ನು ಹೊಂದಿರುವ, ರೋಗನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ಮತ್ತು ವಯಸ್ಥಾಪನ (ಅಂದರೆ ಜೀವಕೋಶಗಳ ವಯಸ್ಸನ್ನು ತಡೆಯುವ) ಮಾಡುವಲ್ಲಿ ಶ್ರೇಷ್ಠವಾದ ಬೆಟ್ಟದ ನೆಲ್ಲಿಕಾಯಿಯ ಪುಡಿಯನ್ನು (ಅರ್ಧ ಚಮಚ)ಆಹಾರಕ್ಕಿಂತ 20ನಿಮಿಷ ಮೊದಲೇ ಶುದ್ಧ ಜೇನುತುಪ್ಪದೊಂದಿಗೆ ಅಥವಾ ನೀರಿನೊಂದಿಗೆ ಸೇವಿಸಿ. ಇದೂ ಸಹ ಅನೇಕ ಸಂಶೋಧನೆಗಳಿಂದ ಸಾಬೀತಾಗಿದೆ.

ಈ ಎರಡೂ ದ್ರವ್ಯಗಳ ಅಧ್ಬುತ ಪರಿಣಾಮಗಳನ್ನು ನೋಡಿದ್ದೇವೆ ಅನೇಕ HIV ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯಾಗಿರುವ CD4 ಕೋಶಗಳ ವೃದ್ಧಿಗೆ ಬಳಸಿ ಯಶಸ್ವಿಯಾಗುತ್ತಿದ್ದೇವೆ.

  1. ಸಂಭಾವ್ಯ ಸಾವನ್ನು ತಡೆಯಿರಿ.

ಕೊರೋನಾ ಬಂದ ತಕ್ಷಣ ಸಾಯುವ ಭಯ ಬೇಡ ಮತ್ತು ಏನೂ ಆಗುವುದಿಲ್ಲ ಎಂಬ ಭಂಡತನವೂ ಬೇಡ, ಮುನ್ನೆಚ್ಚರಿಕೆ ಅತ್ಯಗತ್ಯ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ನೋಡೋಣ-

ಅ) ಎಣ್ಣೆ ಪದಾರ್ಥ ಮಾಂಸಾಹಾರ ಸೇವನೆಯಿಂದ ಕೊರೋನಾ ವೈರಾಣುವಿನ ಪೊರೆ ಅಥವಾ ಹೊರಕವಚ ಇನ್ನಷ್ಟು ದಪ್ಪವಾಗಿ ನಮ್ಮ ರೋಗನಿರೋಧಕ ಶಕ್ತಿಯ ಕೈಗೆ ಸಿಗದೇ ತಪ್ಪಿಸಿಕೊಂಡು ಬೃಹತ್ ಸಂಖ್ಯೆಯಲ್ಲಿ ಬೆಳೆಯುತ್ತವೆ.

ಆ) ಮೈದಾ(ಬಿಸ್ಕೆಟ್ ಮತ್ತು ಬೇಕರಿ ತಿನಿಸುಗಳು), ಉದ್ದು(ವಡೆ, ದೋಸೆ…), ಸಿಹಿತಿಂಡಿ, ಗೋಧಿಯಂತಹ ಜಿಗುಟುಳ್ಳ ಪದಾರ್ಥಗಳ ಸೇವನೆಯಿಂದ ಕಫವು ಇನ್ನಷ್ಟು ಹೆಚ್ಚಿ ಸೋಂಕಿಗೆ ಆಹಾರವನ್ನು ಒದಗಿಸುತ್ತದೆ, ಹಾಗಾಗಿ ಇಂತಹ ಅವಸ್ಥೆಗಳನ್ನು ಕಫ ಛೇದನ ಮಾಡುವ ಮೆಣಸು ಮುಂತಾದ ದ್ರವ್ಯಗಳಿಂದ ನಿಯಂತ್ರಿಸುತ್ತದೆ ಆಯುರ್ವೇದ.

ಇ) ಹಗಲು ನಿದ್ದೆ, ಆಲಸ್ಯ, ಕೆಲಸವಿಲ್ಲದಿರುವಿಕೆಗಳೂ ವಿಕೃತಕಫ ಮತ್ತು ಮೇದವನ್ನು ಹೆಚ್ಚಿಸಿ ರೋಗಕ್ಕೆ ಸಹಾಯ ಮಾಡುತ್ತವೆ.

ಈ) ತಡರಾತ್ರಿ ಊಟ ರೋಗಕಾರಕ ಹಾಗಾಗಿ 6-6:30ರೊಳಗೆ ಊಟ ಮಾಡಿ

ಉ) ತಡರಾತ್ರಿ ನಿದ್ದೆ ನಮ್ಮ ಜೀವಕೋಶಗಳ ಸಾಮರ್ಥ್ಯವನ್ನು ಸುಮಾರು ಶೇ 80ರಷ್ಟು ಕುಸಿಯುವಂತೆ ಮಾಡುತ್ತವೆ. ಹಾಗಾಗಿ 9-9:30ಕ್ಕೆ ಮಲಗಿದರೆ ಚೈತನ್ಯವನ್ನೇ ತುಂಬುತ್ತವೆ.

ಊ) HydroChloro Quinine (HCQ 200, 400) ಮಾತ್ರೆಗಳು ಹೃದಯಾಘಾತಕ್ಕೆ ಕಾರಣವಾಗುವುದರಿಂದ, ಮತ್ತು ಇದುವರೆಗಿನ ಹೆಚ್ಚಿನ ಸಾವುಗಳಿಗೆ ನಿಖರ ಕಾರಣ ಗೊತ್ತಿಲ್ಲದಿರುವುದರಿಂದ ಸಂಶಯಾಸ್ಪದ ಇರುವ ಈ ಔಷಧವನ್ನು ಇದೀಗ W.H.O ನಿಲ್ಲಿಸಿದೆ. ಹಾಗಾಗಿ ಅವುಗಳ ಸೇವನೆಯ ವಿಷಯದಲ್ಲಿ ಎಚ್ಚರದಿಂದ ಇರಬೇಕಾಗುತ್ತದೆ.

ಅಂದರೆ ಇದುವರೆಗೆ ಅದನ್ನು ಸೇವಿಸಿ ಜೀವ ಉಳಿಸುತ್ತೇವೆ ಎಂದು ಆಯುರ್ವೇದವನ್ನು ತಳ್ಳುತ್ತಿದ್ದ ವೈದ್ಯ ಸಮುದಾಯಕ್ಕೆ ಏನು ಹೇಳೋಣ? ಪ್ರಾಣತೆತ್ತ ಜೀವಗಳ ಹೊಣೆ ಯಾರದ್ದು?

ಹಾಗಾಗಿ “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”

ಇಂದು ನಮ್ಮ ಆರೋಗ್ಯ ಕೆಡಿಸಲು ಕಾರಣವಾಗುವ ರಿಫೈಂಡ್ ಎಣ್ಣೆ, ಪ್ಯಾಕ್ಡ್ ಫುಢ್, ಪೌಲ್ಟ್ರಿ ಕೋಳಿ, ಬೇಕರಿಗಳು, ಟೂತ್ ಪೇಸ್ಟ್, ಮುಂತಾದವುಗಳನ್ನು ಆರೋಗ್ಯಕ್ಕೆ ಒಳ್ಳೆಯವು! ಎಂದು ಸುಳ್ಳು ಜಾಹೀರಾತು ನೋಡಿ ಬಳಸುವುದು ಅದೆಷ್ಟು ಅಮಾಯಕರು ನಾವು?!! ಅವುಗಳಿಂದ ಆರೋಗ್ಯ ಹೆಚ್ಚಾಗುತ್ತಿದೆ ಎಂದಾದರೆ ಇಷ್ಟೊಂದು ರೋಗಿಗಳೇಕೆ, ಇಷ್ಟೊಂದು ಆಸ್ಪತ್ರೆಗಳೇಕೆ?!!!

ನಮ್ಮ ಎಚ್ಚರದಲ್ಲಿ ನಾವು ಇರೋಣ

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!