ಆಯುರ್ವೇದದಿಂದ ಕೊರೋನಾಕ್ಕೆ ಯಶಸ್ವಿ ಚಿಕಿತ್ಸೆ..!

ಆಯುರ್ವೇದದಿಂದ ಕೊರೋನಾಕ್ಕೆ ಯಶಸ್ವಿ ಚಿಕಿತ್ಸೆ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಕೊನೆಗೂ ಪೂರ್ಣರೂಪದಲ್ಲಿ ಚಿಕಿತ್ಸೆಗೆ ಆಯುರ್ವೇದ ತಯಾರಾಗಿದೆ.

ಇಂತಹ ಪರಿಪೂರ್ಣ ಶಕ್ತಿ ಆಯುರ್ವೇದಕ್ಕೆ ಹಿಂದಿನಿಂದಲೂ ಇದ್ದರೂ, ಕಾನೂನುಗಳು, ವಿಜ್ಞಾನದ ವಿಧಿವಿಧಾನಗಳ ಹೆಸರಿನಿಂದ ದೂರ ತಳ್ಳುತ್ತಿದ್ದ ಕಬಂದ ಬಾಹುಗಳಿಗೆ ಸಡ್ಡುಹೊಡೆದು ಗೆದ್ದು ಬಂದಿದೆ ಆಯುರ್ವೇದ.

ಇದು ಆಯುರ್ವೇದಕ್ಕೆ ಸಿಕ್ಕ ಯಶಸ್ಸು ಎನ್ನುವುದಕ್ಕಿಂತ, ಈ ಅವಕಾಶದ ಹೋರಾಟಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸು. ಈ ಹೋರಾಟಕ್ಕೆ ಡಾ. ಗಿರಿಧರ ಕಜೆಯವರಿಗೆ ಅಥರ್ವ ಸಂಸ್ಥೆಯಿಂದ ಹೃತ್ಫೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇವೆ.

ಡಾ.ಗಿರಿಧರ್ ಕಜೆ

ಇನ್ನೂ ವಿಶೇಷ ಎಂದರೆ, ಕ್ಲಿನಿಕಲ್ ಟ್ರಯಲ್ ಗೆ ಒಳಪಟ್ಟ ಎಲ್ಲಾ 10 ಜನ ಸೋಂಕಿತರೂ‌ ಸಹ, ಪೂರ್ಣ ಕೊಮಾರ್ಬಿಡ್ ಲಕ್ಷಣಗಳುಳ್ಳವರು, ಕ್ಷಯ ರೋಗಿಯ ಪುಫ್ಪುಸ ಅತ್ಯಂತ ಮಾರಕ ಅಂತಹ ಸೋಂಕಿತರೂ ಸಹ ಸಂಪೂರ್ಣ ಗುಣಮುಖರಾದದ್ದು ಆಯುರ್ವೇದದ ಶಕ್ತಿಯನ್ನು ತೋರುತ್ತದೆ.

ನಾವೂ ಸಹ ಶಿವಮೊಗ್ಗದಲ್ಲಿ ಆಯುರ್ವೇದ ಚಿಕಿತ್ಸೆಯಿಂದ 19.06.2020 ರಂದು ಯಶಸ್ವಿಯಾದದ್ದು ತಮಗೆಲ್ಲಾ ತಿಳಿದೇ ಇದೆ.

ಇಷ್ಟೆಲ್ಲಾ ಇದ್ದಾಗ-
ಈ ಸುದ್ದಿ ಇಡೀ ವಿಶ್ವಕ್ಕೇ ಅತ್ಯಂತ ತುರ್ತಾಗಿ ಹಬ್ಬಿ, ಬೇಗ ಈ ವಿಷಮ ಪರಿಸ್ಥಿತಿಯಿಂದ ಹೊರಬರಬೇಕಾದ ಅನಿವಾರ್ಯತೆ ಇದೆ. ಹಾಗಿದ್ದೂ ಇದೊಂದು ಸಣ್ಣ ಸುದ್ದಿ ಎಂಬಂತೆ ಜನರಿಗೆ ತಲುಪಿಸುತ್ತಿರುವುದು ಅತ್ಯಂತ ಖೇದಕರ.

ಈ ಯಶಸ್ವಿ ಚಿಕಿತ್ಸೆಯ ಖರ್ಚಾದರೂ ಎಷ್ಟು ಗೊತ್ತೇ?!

ಕೇವಲ ₹.60.00 ರಿಂದ 180.00 ಎಂದರೆ, ಇನ್ನೇನು ಬೇಕಾಗಿದೆ ನಮಗೆ.
ಕೇವಲ ತಪಾಸಣೆಗಾಗಿ 4000.00 ದಷ್ಟು ಖರ್ಚುಮಾಡುವ ಮತ್ತು ಚಿಕಿತ್ಸೆಗಾಗಿ ಲಕ್ಷ‌ಲಕ್ಷ ಖರ್ಚು ಮಾಡುವ ಅಗತ್ಯ ಇದೆಯಾ?
ಖರ್ಚು ಮಾಡಿದರೂ ಯಶಸ್ಸಿನ ಬಗ್ಗೆ ಭರವಸೆ ?

ಅದರ ಬದಲು, ಯಾವುದೇ ಅಡ್ಡಪರಿಣಾಮ ಇಲ್ಲದಿರುವುದರಿಂದ ದೇಶದ ಎಲ್ಲಾ ಜನರಿಗೂ ಈ ಔಷಧ ಪ್ರಯೋಗಿಸಿದರೂ ತಪ್ಪೇನು? ಈಗ ಆಗುತ್ತಿರುವ ಖರ್ಚಿನ ಅರ್ಧದಷ್ಟೂ ಆಗುವುದಿಲ್ಲ.

ಈ ಯಶಸ್ಸನ್ನು ಹಂಚಿಕೊಂಡರೆ ವಿಶ್ವದ ಎದುರು ಭಾರತಕ್ಕೆ ಯಾವ ಸ್ಥಾನ ಸಿಗುತ್ತದೆ.

ಆಯುರ್ವೇದಕ್ಕೆ ಯಾವ ಸ್ಥಾನಮಾನ ಸಿಗುತ್ತದೆ.

ಜನರ ಹಣ ಅದೆಷ್ಟು ಉಳಿತಾಯವಾಗುತ್ತದೆ.

ಈಗ ಜನರೇ ಈ ಸುದ್ದಿಯನ್ನು ತಮ್ಮ ತಮ್ಮ ಜಾಲ ತಾಣಗಳಲ್ಲಿ ಹಂಚಿಕೊಳ್ಳಲು ಮುಂದಾಗಬೇಕು.

ಆತ್ಮೀಯರೇ,
ಧೈರ್ಯದಿಂದ ಇರಿ ಮತ್ತು ಈ ಸುದ್ದಿಯನ್ನು ಆದಷ್ಟೂ ಹಂಚಿಕೊಳ್ಳಿ.

ವಿಶ್ವಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research
Shimoga | Davanagere | Bengaluru | Kangra(H.P)



Admin

Leave a Reply

Your email address will not be published. Required fields are marked *

error: Content is protected !!