ಶಿಕಾರಿಪುರ:ಕುಸ್ಕೂರು ಗ್ರಾಮದ ವ್ಯಕ್ತಿಯೊಬ್ಬನಿಗೆ ಕರೋನ ಪಾಸಿಟಿವ್..! ಈಸೂರು ಜನರಿಗೇಕೆ ಆತಂಕ..?

ಶಿಕಾರಿಪುರ:ಕುಸ್ಕೂರು ಗ್ರಾಮದ ವ್ಯಕ್ತಿಯೊಬ್ಬನಿಗೆ ಕರೋನ ಪಾಸಿಟಿವ್..! ಈಸೂರು ಜನರಿಗೇಕೆ ಆತಂಕ..?

ಶಿಕಾರಿಪುರ ತಾಲೂಕಿನಲ್ಲಿ ಕರೋನ ಹಾವಳಿ ದಿನೇ ದಿನೇ ಹೆಚ್ಚಾಗ ತೊಡಗಿದ್ದು ನಿನ್ನೆ ರಾತ್ರಿ ತಾಲೂಕಿನ ಕುಸ್ಕೂರು ಗ್ರಾಮದ 27 ವರ್ಷದ ಯುವಕನೋರ್ವನಿಗೆ ಕರೋನ ಸೋಂಕು ದೃಡಪಟ್ಟಿದೆ.

ಸಂಪರ್ಕ ಹೇಗೆ:

ಕುಸ್ಕೂರು ಗ್ರಾಮದ ಯುವಕ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ತನ್ನ ಸಹದ್ಯೋಗಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡಿದೆ ಇದರಿಂದ ಆತಂಕಗೊಂಡು ಬೆಂಗಳೂರಿನಿಂದ ತನ್ನ ಸ್ವಗ್ರಾಮ ಕುಸ್ಕೂರಿಗೆ ಆಗಮಿಸಿದನ್ನು ಇವರ ಸ್ಲಾಬ್ ಪರೀಕ್ಷೆ ನಂತರ ಇತನಿಗೂ ಸೋಂಕು ದೃಢಪಟ್ಟಿದೆ.

ಮನೆಯ ಸದಸ್ಯರಿಗೆಲ್ಲ ಕ್ಯಾರಂಟೈನ್ ಮಾಡಲಾಗಿದ್ದು ಪ್ರಾಥಮಿಕ ಸಂಪರ್ಕ ಹೊಂದಿದವರಿಗೂ ಕ್ವಾರಂಟೈನ್ ಮಾಡಲಾಗಿದೆ ಅವರ ಮನೆಯ ಬೀದಿಯನ್ನು ಬ್ಯಾರಿಕ್ಯೇಡ್ ಮೂಲಕ ಬಂದ್ ಮಾಡಲಾಗಿದೆ.

ಈಸೂರಿನ ಜನರಿಗೇಕೆ ಕರೋನ ಆತಂಕ..?

ಕಳೆದ ನಾಲ್ಕೈದು ದಿನಗಳಿಂದ ಟಿವಿ ಮಾದ್ಯಮದ ವರದಿಯನ್ನು ನೋಡಿ ತಾಲೂಕಿನ ಈಸೂರು ಜನತೆ ತಮ್ಮ ಗ್ರಾಮದ ವ್ಯಕ್ತಿಯೊಬ್ಬರಿಗೆ ಕರೋನ ಇದೆ ಎಂದು ಆತಂಕಗೊಂಡಿದ್ದರು ಕರೋನ ಸೋಂಕು ತಗುಲಿರುವ ವ್ಯಕ್ತಿ ಈಸೂರು ಗ್ರಾಮದವನಾಗಿದ್ದು ಸೋಂಕು ತಗಲುವ 15-20 ದಿನಗಳ ಹಿಂದಯೇ ಈಸೂರು ಗ್ರಾಮದಿಂದ ಹೀರೇಕೆರುರೂ ತಾಲೂಕಿನ ಗ್ರಾಮವೊಂದಕ್ಕೆ ಮದುವೆಗೆ ತೆರಳಿದ ಎನ್ನಲಾಗಿದ್ದು ಈ ವ್ಯಕ್ತಿಗೆ ಕರೋನ ಪಾಸಿಟಿವ್ ಬಂದ ಹಿನ್ನಲೇಯಲ್ಲಿ ಹಾವೇರಿಯಲ್ಲಿಯೇ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತ ವ್ಯಕ್ತಿ ಈಸೂರು ಗ್ರಾಮದ ವ್ಯಕ್ತಿ ಆಗಿರುವುದರಿಂದ ಜನರು ಭಯಭೀತಗೊಂಡಿದ್ದರು ಈತನ ಕುಟುಂಬದವರು ಯಾರಾದರೂ ವಾಪಸ್ಸು ಬಂದು ಸುಳ್ಳು ಹೇಳುತ್ತಾ ಇರಬಹುದು ಎಂದು ತಾಲೂಕ್ ಆಡಳಿತ 20 ಕ್ಕೂ ಹೆಚ್ಚು ಜನರ ಸ್ಲ್ಯಾಬ್ ಪರೀಕ್ಷೆ ನಡೆಸಿದೆ ಎಂದು ಗ್ರಾಮಾಂತರ  ಪಿಎಸ್ ಐ ರವಿಕುಮಾರ್ ತಿಳಿಸಿದ್ದಾರೆ ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

News By: Raghu Shikari= 7411515737

Admin

Leave a Reply

Your email address will not be published. Required fields are marked *

error: Content is protected !!