ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮ ಸಾಗಿಸಿ ಕೊಳ್ಳ ಬಹುದು..!

ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮ ಸಾಗಿಸಿ ಕೊಳ್ಳ ಬಹುದು..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ನಾರಿಕೇಳೋದಕಂ ಸ್ನಿಗ್ಧಂ ಸ್ವಾದು ವೃಷ್ಯಂ ಹಿಮಂ ಲಘು |
ತೃಷ್ಣಾ, ಪಿತ್ತ-ಅನಿಲ ಹರಂ, ದೀಪನಂ ಬಸ್ತಿಶೋಧನಮ್ ||19||
ಅಷ್ಟಾಂಗ ಸೂತ್ರ, ಅಧ್ಯಾಯ-5

ಎಳೆನೀರು ತಂಪು ಉಂಟುಮಾಡುತ್ತದೆ, ಆದರೂ ಅಗ್ನಿಮಾಂದ್ಯವಲ್ಲ ಹಾಗಾಗಿ ಕಫ ನೆಗಡಿ ಉಂಟುಮಾಡದು.

ದುಃಖ, ನೋವುಗಳಲ್ಲಿ ಮನ ನೊಂದಾಗ, ಬಿಸಿಲಿಗೆ ಬಾಯಾರಿ ಬಳಲಿ ಬಂದಾಗ, ಪಿತ್ತದಿಂದಾದ ಉರಿಶೀತ, ಎದೆಯುರಿ, ಅತ್ಯಂತ ಆಯಾಸ(ಸಾದ), ಪಿತ್ತಾಜೀರ್ಣ, ಹುಳಿವಾಂತಿ, ತಲೆ ಸುತ್ತು ಇದ್ದಗ ಕೊಡಲೇಬೇಕಾದ ಆಹಾರ ರೂಪೀ ಔಷಧ.

ಮೂತ್ರ ಉರಿ, ರಕ್ತಮೂತ್ರ, ಮೂತ್ರಕೋಶದ‌ಲ್ಲಿ ನೋವು, ಮೈ ಉರಿ ಮುಂತಾದ ಪಿತ್ತ-ವಾತ-ರಜೋ ವೃದ್ಧಿ ಎಳೆನೀರು ಶ್ರೇಷ್ಠ.

ಆಮ್ಲಿಪಿತ್ತದಲ್ಲಿ ಆ್ಯಸಿಡ್ ಹೆಚ್ಚಾದ ಪರಿಣಾಮ ಉಂಟಾದ ಅಕ್ಷುಧಾ ನಿವಾರಿಸಿ *ಹಸಿವನ್ನು ಹೆಚ್ಚಿಸುತ್ತದೆ.

ಎಳೆನೀರು ಪುರುಷತ್ವವನ್ನು ವರ್ಧಿಸುತ್ತದೆ. ‌ಅತಿಯಾಗಿ ಬಳಸದಿದ್ದರೆ *ಓಜಸ್ಸನ್ನೂ ತೇಜಸ್ಸನ್ನೂ(ಮನೋ ಶರೀರ ಕಾಂತಿ) ವರ್ಧಿಸುತ್ತದೆ.

ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶಗಳಲ್ಲಿ ಶೇಖರಣೆಗೊಂಡ ನಿರುಪಯುಕ್ತ ಮತ್ತು ರೋಗಕಾರಕ ಅಂಶಗಳನ್ನು ಹೊರಹಾಕುತ್ತದೆ.

ಇದು ಬಹಳ ಜನರಿಗೆ ಗೊತ್ತಿದೆ ಆದರೆ….. ಎಳೆನೀರಿನ ಬಗ್ಗೆ ಗೊತ್ತಿಲ್ಲದೇ ಆಗುವ
ಸಣ್ಣ ತಪ್ಪುಗಳನ್ನು ತಡೆದರೆ ಅದರ ಸಂಪೂರ್ಣ ಲಾಭಗಳನ್ನು ನಮ್ಮದಾಗಿಸಿಕೊಳ್ಳಬಹುದು.

ಏನು ಮಾಡುತ್ತಿದ್ದೇವೆ….?
ಎಷ್ಟೋ ದಿನಗಳ ಹಿಂದೆ ಸಿದ್ಧಪಡಿಸಿ ಪ್ಯಾಕ್ ಮಾಡಿ ಇಟ್ಟದ್ದು
ಬೀದಿಯಲ್ಲಿ ಬಿಸಿಲಿಗೆ ಇಟ್ಟದ್ದು
ಕೆತ್ತಿಸಿ ಮನೆಗೆ ತಂದು ಎರೆಡು ದಿನ ಇಟ್ಟದ್ದು
ಕೆತ್ತಿದೇ ತಂದು ಮೂರು ದಿನ ಇಟ್ಟದ್ದು
ಎಳೆನೀರು ತೆಗೆದು ಫ್ರಿಜ್ ನಲ್ಲಿಟ್ಟದ್ದು
ಎಳೆನೀರಿಗೆ ಉಪ್ಪು, ಸಕ್ಕರೆ, ಒ.ಆರ್.ಎಸ್ ಹಾಕಿದ್ದು
ಒಳ್ಳೆಯದೆಂದು ನಿತ್ಯವೂ ಅನಿಯಂತ್ರಿತವಾಗಿ ಸೇವಿಸುತ್ತೇವೆ.

ಎಳೆನೀರಿನ ಖಾದ್ಯ ತಯಾರಿಸುವುದು…. ಇವುಗಳಿಂದ ಎಳೆ ನೀರಿನ ಲಾಭ ಅತ್ಯಂತ ಕ್ಷೀಣವಾಗುತ್ತದೆ ಅಥವಾ ಇಲ್ಲವಾಗಿಸುತ್ತವೆ ಮತ್ತು ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಪ್ರಧಾನವಾಗಿ, ಹೆಚ್ಚಿನ ಜನ ಮಾಡುವ ತಪ್ಪು- ಬಿಸಿಲಲ್ಲಿ ಇಟ್ಟ ಕಾಯಿ ಮತ್ತು ನೆರಳಿನಲ್ಲಿ ಎರೆಡು ಮೂರು ದಿನ ಇಟ್ಟ ಕಾಯಿಯ ನೀರು ಬಳಕೆ ಬೇಡ

ಎಳೆ ನೀರಿನ ನಂತರ ಗಂಜಿ ಅಂತ್ಯಂತ ತೆಳುವಾಗಿದ್ದರೆ ಸೇವಿಸಬೇಕು, ಅದು ಎಳೆನೀರಿಗೆ ಸಮ, ಅದೇ ದಪ್ಪ ಕೊಬ್ಬರಿಯಾಗಿದ್ದರೆ, ಬರಿ ನೀರನ್ನು ಕುಡಿದು ಕೊಬ್ಬರಿ ಬಿಡಬೇಕು

ವಿ.ಸೂಚನೆ:
ವಿಶೇಷವಾಗಿ ಹಸಿದಾಗ ಎಳೆನೀರು ಸೇವನೆ ಮಾಡಬಾರದು, ಮತ್ತಷ್ಟು ಹಸಿವೆ ಹಚ್ಚಿ ಸಂಕಟ ವಾಗುತ್ತದೆ.

ಅತಿಯಾಗಿ ಅಂದರೆ ನಿತ್ಯವೂ ಸೇವಿಸುವ ಎಳೆನೀರೂ ಆರೋಗ್ಯಕರವಲ್ಲ
ಬಳಲಿಕೆ ಬಾಯಾರಿಕೆ, ಬಿಸಿಲಿನಿಂದ ಬಳಲಿದಾಗ ಸೂಕ್ತ.

ತಪ್ಪು ಬಳಸಿದರೆ ಏನು ಆಗುತ್ತದೆ…..?
ಅತಿಯಾಗಿ ಬಳಸಿದರೆ ಏನಾಗುತ್ತದೆ?
ದೇಹದಲ್ಲಿ ಉಷ್ಣ ತಡೆಯುವ ಬದಲು ಏರುತ್ತದೆ, ಪಿತ್ತ ಹೆಚ್ವುತ್ತದೆ. ಶರೀರದಲ್ಲಿ ಜಲ ಸಂಚಯವಾಗುತ್ತದೆ, ಮತ್ತು ಇದು ಆರೋಗ್ಯಕರವಲ್ಲ.

ಏನು ಆಗಬೇಕು…..?

ಆಗ ತಾನೇ ಮರದಿಂದ ತೆಗೆದ ಮತ್ತು ಎಳೆಯದಾಗಿರುವ ಕಾಯಿಯನ್ನು ಸೇವಿಸಬೇಕು.
ಏನನ್ನು ಬೆರೆಸಬಾರದು. ಬಿಸಿಲಿನಿಂದ ಬಳಲಿಕೆಯಾದಾಗ ಮಾತ್ರ ಬಳಸಿ.

ಎಳೆನೀರ ಪರೀಕ್ಷೆ
ಎಳೆಕಾಯಿ ಮುಟ್ಟಿದರೆ ಮಕ್ಕಳ ಚರ್ಮದಂತೆ ನುಣುಪಾಗಿಯೂ,
ಅಲ್ಲಾಡಿಸಿದರೆ ನೀರು ಶಬ್ದಮಾಡದೆಯೂ,
ಭಾರವಾಗಿಯೂ,
ಆದರೆ ನೀರಿನಲ್ಲಿ ಹಾಕಿದರೆ ತೇಲುತ್ತಲೂ ಇರುತ್ತದೆ
ಈ ನಾಲ್ಕು ಗುಣ ಇಲ್ಲದೇ ಇದ್ದರೆ ಅದರಲ್ಲಿ ದೋಷ ಇದೆ ಎಂದು ತಿಳಿದು ತ್ಯಜಿಸಬೇಕು.

ಧನ್ಯವಾದಗಳು.

ಸ್ವಾಸ್ಥ್ಯಕ್ಕಾಗಿ-ಸ್ವಲ್ಪ ಬದಲಾಗಿ

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!