ಶಿವಮೊಗ್ಗದಲ್ಲಿ ಇಂದು ಆರು ಕರೋನಾ ಕೇಸ್ ಪತ್ತೆ ಸೋಂಕಿನಿಂದ ಮೃತಪಟ್ಟ ಮಹಿಳೆಯಿಂದ ಇಬ್ಬರಿಗೆ ಸೋಂಕು..!

ಶಿವಮೊಗ್ಗದಲ್ಲಿ ಇಂದು ಆರು ಕರೋನಾ ಕೇಸ್ ಪತ್ತೆ ಸೋಂಕಿನಿಂದ ಮೃತಪಟ್ಟ ಮಹಿಳೆಯಿಂದ ಇಬ್ಬರಿಗೆ ಸೋಂಕು..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 6 ಹೊಸ ಕರೋನ ಪ್ರಕರಣ ಪತ್ತೆಯಾಗಿದ್ದು ಪ್ರಾಥಮಿಕ ಸಂಪರ್ಕದಿಂದ ಇಬ್ಬರಿಗೆ ತಗುಲಿದ ಕರೋನಾ ಸೋಂಕು ಧೃಡ ಪಟ್ಟಿದೆ ಪೇಷಂಟ್ P-9546 ರ ಪ್ರಾಥಮಿಕ ಸಂಪರ್ಕದಿಂದ ಇಬ್ಬರಿಗೆ ಕರೋನಾ ಸೋಂಕು ಪಾಸಿಟಿವ್ ಬಂದಿದೆ.

ಕರೋನದಿಂದ ಮೃತಪಟ್ಟ ಮಹಿಳೆಯಿಂದ ಇಬ್ಬರಿಗೆ ಸೋಂಕು:

ಶಿಕಾರಿಪುರ ತಾಲೂಕ್ ಸಾರ್ವಜನಿಕ ಆಸ್ಪತ್ರೆ ತೀವ್ರ ಉಸಿರಾಟದಿಂದ ದಾಖಲಾಗಿದ್ದ 75 ವರ್ಷ ಖಾವಸಪುರದ ಮಹಿಳೆ ಜೂನ್ 21 ರಂದು ಮೃತ ಪಟ್ಟಿದರು ಮರಣೋತ್ತರ ಕರೋನ ಸ್ಲ್ಯಾಬ್ ಪರೀಕ್ಷೆಯ ನಂತರ ಮೃತ ಮಹಿಳೆಗೆ ಸೋಂಕು ದೃಡಪಟ್ಟಿದ್ದು ಮಹಿಳೆಯ ಶವ ಸಂಸ್ಕಾರ ಹಾಗೂ ಅವರ ಸಂಪರ್ಕದಲ್ಲಿದ ಎಲ್ಲಾರನ್ನು ಕ್ವಾರಂಟೈನ್ ಮಾಡಿ ಪ್ರಾಥಮಿಕ ಸಂಪರ್ಕದಲ್ಲಿದವರ ಪರೀಕ್ಷೆ ನಡೆಸಲಾಗಿತ್ತು  ಕರೋನಾ ಸೋಂಕಿನಿಂದ ಮೃತಪಟ್ಟ (P-9546) ಮಹಿಳೆಯಿಂದ ಮತ್ತೇ ಇಬ್ಬರಿಗೆ ಸೋಂಕು ದೃಡ್ಡವಾಗಿದೆ.

ಶಿಕಾರಿಪುರ ಪಟ್ಟಣದ ಗುಂಬಾರಗುಂಡಿ ಹಾಗೂ ಸುತ್ತಮುತ್ತಿಲಿನ ಕೆಲವು ಬೀದಿಗಳನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದ್ದು ಅಲ್ಲಿನ ಜನರಿಗೆ ಈಗಾಗಲೇ ತಾಲೂಕ್ ಆಡಳಿತ ವತಿಯಿಂದ ಜಾಗೃತವಾಗಿರಲು ಸೂಚಿಸಲಾಗಿದೆ.

ಶಿವಮೊಗ್ಗ ಜಿಲ್ಲಾಡಳಿತದಿಂದ ಇನ್ನೋರ್ವ ಸೋಂಕಿತರ ( P-10827) ಸಂಪರ್ಕ ಪತ್ತೇ ಹಚ್ಚಲಾಗುತ್ತಿದೆ

ಶಿವಮೊಗ್ಗದ ಮೂವರಲ್ಲಿ ಇಂದು ILI ಸೋಂಕು ಪತ್ತೆಯಾಗಿದೆ 

ಇಂದಿನಿಂದ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ:

ಇಂದಿನ ಸೋಂಕಿತರಲ್ಲಿ ಇಬ್ಬರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಕರೋನಾ ಪಾಸಿಟಿವ್ ಬಂದಿರುವ ಇಬ್ಬರು ವೈದ್ಯರಿಗೆ ಖಾಸಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ  ಉಳಿದ ಕರೋನಾ ಸೋಂಕಿತರಿಗೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 129 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು 129 ಪ್ರಕರಣಗಳಲ್ಲಿ 96 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಪ್ರಸ್ತುತ ಶಿವಮೊಗ್ಗದಲ್ಲಿ‌ 31 ಕರೋನಾ ಆಕ್ಟೀವ್ ಕೇಸ್ ಇದೆ.

Admin

Leave a Reply

Your email address will not be published. Required fields are marked *

error: Content is protected !!