ಕೊರೋನಾ ವ್ಯಾಪಿಸವುದನ್ನು ಸುಲಭವಾಗಿ ತಡೆಯೋಣ…!

ಕೊರೋನಾ ವ್ಯಾಪಿಸವುದನ್ನು ಸುಲಭವಾಗಿ ತಡೆಯೋಣ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:- ಕೊರೋನಾ ಭಾಗ-1

ಮತ್ತೆ ಕರೋನಾ ಮುಂಚೂಣಿಗೆ ಬರತೊಡಗಿದೆ, ವಿಶ್ವದ ಪಟ್ಟಿಯಲ್ಲಿ ಭಾರತ ಮೇಲಕ್ಕೇರುತ್ತಿದೆ.

ವ್ಯಾಪಕವಾಗಿ ಹರಡುತ್ತಿರುವುದು ಜನರಲ್ಲಿ ಆತಂಕ ತರುತ್ತಿದೆ.

ಬನ್ನಿ ನಮ್ಮ ಮನೆಗೆ ಬಾರದಂತೆ ತಡೆಯೋಣ.

ಪ್ರೋಟೀನ್ ಮತ್ತು ಕೊಬ್ಬಿನ ಮಾಲಿಕ್ಯೂಲ್ ಗಳಿಂದಾದ ದೊಡ್ಡ ಪೊರೆಯೊಳಗೆ ಸುರಕ್ಷಿತವಾಗಿದ್ದು ಆತಂಕ ತರುತ್ತಿರುವ ಈ ವೈರಸ್ ನೇರ ತೀಕ್ಷ್ಣ ಸಿಂಗಲ್ ಕೆಮಿಕಲ್ ಮಾಲಿಕ್ಯೂಲ್ ಔಷಧಿಗಳಿಗಿಂತ ಮಲ್ಟಿಪಲ್ ಮತ್ತು ಕಾಂಪ್ಲೆಕ್ಸ್ ಮಾಲಿಕ್ಯೂಲ್ ಗಳು ಉತ್ತಮ ಎಂಬುದು ಸಿದ್ಧಾಂತ.

ಈ ಸಿದ್ಧಾಂತದ ಅಡಿಯಲ್ಲಿ ವೈರಾಣುವಿನಿಂದ ನಮ್ಮನ್ನು ಸುರಕ್ಷಿತವಾಗಿಡಲು ನಮ್ಮ ನಮ್ಮ ಅಡುಗೆ ಮನೆಯಲ್ಲಿರುವ ತೀಕ್ಷ್ಣ ಮಸಾಲೆಗಳೇ ಸಾಕು ಎಂದಾಯಿತು!!!

ಈ ಮಸಾಲೆಗಳು ಹೇಗೆ ಕೆಲಸ ಮಾಡುತ್ತವೆ ನೋಡೋಣ:

ಮೂಗು, ಬಾಯಿ ಮೂಲಕ ದೇಹ ಸೇರುವ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಾಣುಗಳು ನಮ್ಮ ಶರೀರದ ಸೈನಿಕರೊಂದಿಗೆ ಮೊದಲು ಹೋರಾಡಬೇಕಾಗಿರುವುದು ಗಂಟಲೆಂಬ ಮಹಾದ್ವಾರದಲ್ಲಿ.

ನಮ್ಮ ಗಂಟಲಿನ ಸೈನ್ಯವನ್ನು ಬಲಪಡಿಸುವುದು
ಮತ್ತು ವೈರಾಣುಗಳಿಗೆ ಅಲ್ಲಿ ಉಳಿಯಲು ಆಹಾರ, ಸ್ಥಳ ಕೊಡದಂತೆ ನೋಡಿಕೊಂಡರೆ ಯುದ್ಧದ ಮೊದಲೇ ಗೆದ್ದಂತೆ.

ಭಾರತದ ಎಲ್ಲರ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಅರಿಶಿಣ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು ಇವುಗಳಿಂದ ಗಂಟಲಿನಲ್ಲಿ ಅಭೇದ್ಯ ಕೋಟೆಯನ್ನೇ ಕಟ್ಟಿ ವೈರಾಣುಗಳನ್ನು ತಡೆದುಬಿಡಬಹುದು. ಅದರಲ್ಲೂ ಕಾಳು ಮೆಣಸು ವೈರಾಣುವಿನ ಪ್ರೋಟೀನ್ & ಲಿಪಿಡ್ ಪೊರೆಯನ್ನು ಹರಿದು ಹಾಕುತ್ತದೆ‌, ಅಲ್ಲಿಗೆ ವೈರಸ್ ನ ಅವನತಿ ಆರಂಭವಾಗುತ್ತದೆ.

ನಮ್ಮ ಒಳಗಿನ ಸ್ವಲ್ಪವೇ ಇಮ್ಯೂನಿಟಿ ವೈರಾಣುವನ್ನು ಕೊಂದುಹಾಕುತ್ತದೆ. ಅಥವಾ ಅದಕ್ಕೂ ಸಹಕಾರ ಬೇಕಾದಲ್ಲಿ ಸರಕಾರ ನಿರ್ಧರಿಸಿದ ಇಮ್ಯೂನಿಟಿ ವರ್ಧಿಸುವ ಚವನಪ್ರಾಶವನ್ನು(ಉತ್ತಮ ಕಂಪನೆಯ ಉತ್ಪಾದನೆ ಬಳಸಿ) ಸೇವಿಸಿ ಗೆಲ್ಲಬಹುದು.

ಪೇಯ(ಕಷಾಯ) ತಯಾರಿಸುವ ವಿಧಾನ:

ಶುದ್ಧ ಅರಿಶಿಣ- ಒಂದು ಚಿಟಿಗೆ
ಶುಂಠಿ- ಸಣ್ಣ ಚೂರು
ಬೆಳ್ಳುಳ್ಳಿ- 2 ಬೇಳೆ
ಕಾಳುಮೆಣಸು- 4
ನೀರು- ½ ಟೀ ಕಪ್

ಕೆಲ ಕಾಲ ಕುದಿಸಿ ¼ ಕಪ್ ಗೆ ಇಳಿಸಿ ಸೋಸಿ ನಂತರ ಸ್ವಲ್ಪವೇ ಬೆಲ್ಲ ಬೆರೆಸಿ ಕುಡಿಯಿರಿ. ಇದನ್ನು ಪ್ರತಿ 2-3 ತಾಸುಗಳಿಗೊಮ್ಮೆ ಸೇವಿಸಿ.

ಕಾಳು ಮೆಣಸು ಸೇವಿಸಿ ವೈರಾಣು ಪೊರೆ ಹರಿದುಹಾಕಿ:

ಮರೀಚಂ……ಜಂತು ಸಂತಾನ ನಾಶನಂ…..ಭೂತನಾಶನಂ…….||
-ಭಾವಪ್ರಕಾಶ ನಿಘಂಟು

ವಿಧಾನ
1 ಅಥವಾ 2 ಕಾಳು ಮೆಣಸುಗಳನ್ನು ಹಿಂದಿನ‌ ದವಡೆಹಲ್ಲಿನಿಂದ ಕಚ್ಚಿ ನಿಧಾನವಾಗಿ ಗಂಟಲಿಗೆ ಇಳಿಸಿ, ಇದರಿಂದ ಗಂಟಲಿನಲ್ಲೇನಾದರೂ ವೈರಾಣುಗಳಿದ್ದರೆ ಅವುಗಳ ಪೊರೆ ಹರಿದು ಹೋಗುತ್ತದೆ.

ಎಲ್ಲವೂ ಪ್ರಾಕೃತಿಕ ದ್ರವ್ಯಗಳು ಮತ್ತು ನಿತ್ಯಸೇವನೆಯ ಅಡುಗೆ ಮಸಾಲೆಗಳಾದ್ದರಿಂದ ಯಾವುದೇ ಅಪಾಯ ಇಲ್ಲ.

ಇದರಿಂದ ಹೀಟ್ ಆಗಿ ಬಿಕ್ಕಳಿಕೆ ಬಂದರೆ “ಆ” ಎಂಬ ಅಕ್ಷರವನ್ನು ಆಳವಾಗಿ ಉಸಿರು ಮುಗಿವವರೆಗೆ ಹೇಳಬಹುದು.

ಉರಿ ಮೂತ್ರ ಬಂದರೆ ಪೇಯವನ್ನು ಸ್ವಲ್ಪ ಕಡಿಮೆ ಮಾಡಿ ಮತ್ತು 4-5 ತಾಸಿಗೊಮ್ಮೆ ಸೇವಿಸಬಹುದು.

ಪಥ್ಯ ಪಾಲನೆ ನೋಡೋಣ:

ಪ್ರೋಟೀನ್ ಮತ್ತು ಕೊಬ್ಬಿನ ಅಂಶವನ್ನು ಬಳಸಬೇಡಿ. ಅಂದರೆ,
ಹಾಲು
ಮೊಳಕೆ ಕಾಳು
ತುಪ್ಪ
ಮಾಂಸಾಹಾರ
ಕೊಬ್ಬರಿ‌
ಶೇಂಗಾ
ಕರಿದ ಮತ್ತು ವಗ್ಗರಣೆ ಕಲಸಿದ ಅನ್ನಗಳು.

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!