ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಿ ಎಂದರೆ ಎಲ್ಲಾ ರೋಗಗಳ ಬುಡ್ಡವನ್ನೇ ಕತ್ತರಿಸವಹುದು…!

ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಿ ಎಂದರೆ ಎಲ್ಲಾ ರೋಗಗಳ ಬುಡ್ಡವನ್ನೇ ಕತ್ತರಿಸವಹುದು…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-15

ಕೆಳಗಿನ ಕೆಲ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿರಿ ಎಂದರೆ, ನಿಮ್ಮದು ಅಸಾಧಾರಣ ಪ್ರಯತ್ನ! ಏಕೆಂದರೆ ನೀವು ಎಲ್ಲ ರೋಗಗಳ ಬುಡವನ್ನೇ ಕತ್ತರಿಸುವ ಪ್ರಯತ್ನದಲ್ಲಿದ್ದೀರಿ!!

ಯಾವ ಆಹಾರ ರುಚಿಯಾಗಿದೆ?

ರುಚಿಯ ಮೂಲ ನಾಲಿಗೆಯೋ?

ಉತ್ತರ:
ನನಗೆ ಪಾಯಸ ಎಂದರೆ ಪಂಚಪ್ರಾಣ, ಯಾವಾಗ ಸಿಗುತ್ತದೋ ಎಂದು ಕಾಯುವೆ, ಎಂಬ ವ್ಯಕ್ತಿಯ ಪಂಚಪ್ರಾಣಗಳು ಪಾಯಸವನ್ನು ದ್ವೇಷಿಸುವಂತೆ ಮಾಡುವುದು ಯಾವುದು? ಅದೇ ಅವನ ಹಸಿವು!!!

ಈ ಹಸಿವು ಜೀವಂತ ಇರುವಾಗ ನಮಗೆ ಎಲ್ಲವೂ ರುಚಿಸುತ್ತವೆಯೇ ಹೊರತು, ಯಾವುದೇ ನಿರ್ದಿಷ್ಟ ಆಹಾರ ಸ್ವತಃ ತಾನಾಗಿಯೇ ಯಾವ ರುಚಿಯೂ ಇಲ್ಲ!!!

ಒಟ್ಟಾರೆ,
ರುಚಿಯ ಮೂಲ ನಮ್ಮ ಹಸಿವು, ಹಸಿವಿನ ಮೂಲ ನಮ್ಮ ಶಾರೀರಿಕ ಕೆಲಸಗಳು ಅಲ್ಲವೇ? ಹಾಗಾದರೆ ರುಚಿ-ರುಚಿಯಾದ ಆಹಾರ ತಿನ್ನಬೇಕೆನಿಸಿದರೆ ಮಾಡಬೇಕಾದ ಕೆಲಸ ಎಂದರೆ ಹಸಿವನ್ನು ಹೆಚ್ಚಿಸಿಕೊಳ್ಳುದು
ಈ ಮೂಲ ಕಾರಣ ಬಿಟ್ಟು, ಏನೇನೋ ಸೇರಿಸಿ ಆಹಾರವನ್ನು ರುಚಿ ಮಾಡಹೊರಟರೆ, ಇನ್ನೇನೇನೋ ಹೊಸ ಕಾಯಿಲೆಗಳು ಬಾರದಿರವೇ?

ಇನ್ನು ರುಚಿಯ ಮೂಲ ನಾಲಿಗೆಯೋ?
ಹೌದು ಎನುವುದಾದರೆ, ಹಸಿವೆ ಇಲ್ಲವಾದವನಿಗೆ ನಾಲಿಗೆ ರುಚಿಸುವುದೇ? ಹೊಟ್ಟೆ ತುಂಬಿದ ನಂತರ ರುಚಿಸುವುದೇ? ಇಲ್ಲ ಎಂದಾದರೆ ನಾಲಿಗೆಯು ನಮ್ಮ ಅಗ್ನಿಯನ್ನು /ಹಸಿವನ್ನಾಧರಿಸಿ, ರುಚಿಯನ್ನು ಸೂಚಿಸುತ್ತದೆ ಅಷ್ಟೇ, ಇದು ಇಂಡೀಕೇಟರ್ ಮಾತ್ರವಾಗಿದೆ.

ಇತ್ತೀಚಿನ ಮಕ್ಕಳನ್ನು ಗಮನಿಸಿ, ಎಂತಹ ರುಚಿರುಚಿ ಆಹಾರವನ್ನೂ ದೂರ ತಳ್ಳುತ್ತಾರೆ!?!?!?….
ಅವರ ನಾಲಿಗೆ ಆಹಾರವನ್ನು ದ್ವೇಷಿಸುತ್ತದೆ, ಅದರ ಹೊಟ್ಟೆ ತುಂಬಿದೆ ಎಂದೇನೂ ಅಲ್ಲ, ನಮ್ಮ ಆತ್ಮೀಯರು ಅನಾರೋಗ್ಯದಿಂದ ಬಳಲುವಾಗ ಯಾವ ಆಹಾರವೂ ರುಚಿ ಇಲ್ಲ, ಹಾಗಂತ ಹೊಟ್ಟೆ ತುಂಬಿಲ್ಲ!

ಅಂದರೆ ಹಸಿವು ಹೊಟ್ಟೆಯಲ್ಲೂ ಇಲ್ಲ!!!
ಅಚ್ಚರಿಯೇ?
ಈ ಶ್ಲೋಕವನ್ನು ಗಮನಿಸಿ-

ಪ್ರದ್ವೇಷೋ ವೃದ್ಧಿಹೇತುಷು……..
-ಮಹರ್ಷಿ ಅರುಣದತ್ತ, ಆಯುರ್ವೇದ ದೀಪಿಕಾ(ಚರಕ ಸಂಹಿತಾ ವ್ಯಾಖ್ಯಾನ)ರಚನೆಕಾರ.

ಯಾವುದು ಶರೀರದಲ್ಲಿ, (ಅಂದರೆ ರಸಧಾತುವಿನಲ್ಲಿ) ವೃದ್ಧಿಯಾಗುತ್ತದೆಯೋ ಅದರ ಬಗ್ಗೆ ದ್ವೇಷ ಉಂಟಾಗುತ್ತದೆ.
ಇಲ್ಲಿ ಪಾಯಸದ ಬಗ್ಗೆ ದ್ವೇಷ ಉಂಟಾಗಲು ಕಾರಣ, ಅದು ರಸಧಾತುವಿನಲ್ಲಿ ಈಗಾಗಲೇ ವೃದ್ಧಿಯಾಗಿದೆ, ಇನ್ನೂ ಒತ್ತಾಯವಾಗಿ ಬಾಯಿಗೆ ತುರುಕಿದರೆ ವಾಂತಿಯಾಗುತ್ತದೆ.

ಅಂದರೆ ಯಾವ ಅಂಶ ರಸಧಾತುವಿನಲ್ಲಿ ಹೆಚ್ಚುತ್ತದೋ ಅದರ ಬಗ್ಗೆ ದ್ವೇಷವೂ, ಯಾವ ಅಂಶ ರಸದಲ್ಲಿ ಕ್ಷೀಣವಾಗುತ್ತದೋ ಅದು ಹಸಿವೆಯ ಹೊಟ್ಟೆ ಹಸಿವಿನ ರೂಪದಲ್ಲೂ ಮತ್ತು ಆ ಹಸಿವು ನಾಲಿಗೆಯಲ್ಲಿ ರುಚಿಯ ರೂಪದಲ್ಲೂ ತೋರುತ್ತದೆ

ಒಂದು ವೇಳೆ ಹಸಿವು ನೀಗಿದರೆ, ಮನಸ್ಸು ಯಾವುದಕ್ಕೆ ಹಾತೊರೆಯುತ್ತಿತ್ತೋ ಅದನ್ನೇ ದೂರ ತಳ್ಳುತ್ತದೆ.

ವಿಶೇಷವಾಗಿ ಗಮನಿಸಿ: ಪ್ಲಾಸ್ಮಾ ಗ್ಲುಕೋಸ್ ಕ್ಷೀಣಿಸಿದ ಮಧುಮೇಹಿಗಳಲ್ಲಿ ಆಹಾರಾದ ಬಗೆಗಿನ ತೀವ್ರ ತುಡಿತವನ್ನು ಗಮನಿಸಿ. ಅಂದರೆ, ಪ್ಲಾಸ್ಮಾದಲ್ಲಿ ಯಾವುದು ಕಡಿಮೆಯಾಗುತ್ತದೊ ಅದು ಅಮೃತವೆಂಬತೆ ರುಚಿಸುತ್ತದೆ.

ನಿಮಗೆ ರುಚಿ ಬೇಕೇ, ಪ್ಲಾಸ್ಮಾದಲ್ಲಿ ಸಂಗ್ರಹಿಸಿದ ಶಕ್ತಿ ರೂಪೀ ರಸವನ್ನು ಕೆಲಸದ ರೂಪದಿಂದ ಕರಗಿಸಿ ಖಾಲಿಮಾಡಿಬಿಡಿ, ಆಗ ನಿಮ್ಮ ಮುಂದೆ ಒಣ ರೊಟ್ಟಿಯನ್ನಿಟ್ಟರೂ ಎಂತಹ ರಸವತ್ತಾದ ಊಟ ನಿಮ್ಮದಾಗುತ್ತದೆ!!!

ರಸಧಾತುವಿನಲ್ಲಿ ಜೀರ್ಣಿಸದ ಆಹಾರ ಸಂಗ್ರಹ ಎಂದಿಗೂ ಒಳ್ಳೆಯದಲ್ಲ. ಅದು ಎಲ್ಲ ಕಾಯಿಲೆಗಳ ಮೂಲ. ಆಯುರ್ವೇದ ಇದನ್ನು ಆಮವಿಷ ಎಂದಿದೆ. ಇದರ ಸಂಗತಿಯನ್ನು ನಾಳೆ ನೋಡೋಣ

ಇನ್ನೂ ಹೆಚ್ಚಿನ ಮಾಹಿತಿಗೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಬಹುದು.

ಪ್ರೀತಿಯ ಬಂಧುಗಳೇ,

ಆಯುರ್ವೇದ ಸಲಹೆ:
ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!