ಒಂದು ವಿಕೃತಿ ರೋಗವನ್ನು ಹೇಗೆ ನೋಡಬೇಕು, ಈಗ ಅದನ್ನು ಯಾವದೃಷ್ಟಿಯಿಂದ ನೋಡುತ್ತಿದ್ದಾರೆ ಅದರ ಪರಿಣಾಮ ಏನಾಗಿದೆ?

ಒಂದು ವಿಕೃತಿ ರೋಗವನ್ನು  ಹೇಗೆ ನೋಡಬೇಕು, ಈಗ ಅದನ್ನು ಯಾವದೃಷ್ಟಿಯಿಂದ ನೋಡುತ್ತಿದ್ದಾರೆ ಅದರ  ಪರಿಣಾಮ ಏನಾಗಿದೆ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-5.

ಒಂದು ವಿಕೃತಿ(ರೋಗ)ವನ್ನು ನಿಜವಾಗಿಯೂ ಹೇಗೆ ನೋಡಬೇಕು, ಆದರೆ ಈಗ ಅದನ್ನು ಯಾವದೃಷ್ಟಿಯಿಂದ ನೋಡುತ್ತಿದ್ದಾರೆ ಮತ್ತು ಪರಿಣಾಮ ಏನಾಗಿದೆ? ನಮ್ಮನಿಮ್ಮೆಲ್ಲರ ಅನುಭವಕ್ಕೆ ಬರುವಂತೆ ನೋಡೋಣ.

ಹತ್ತು ಜನರು ದೂರದ ಊರಿಗೆ ಹೋಗಿ ಒಂದು ಕಡೆ ನೀರು ಕುಡಿದರು, ಮರುದಿನ ಇಬ್ಬರಿಗೆ ಜ್ವರ ಬಂತು. ಇಂದಿನ ವಿಜ್ಞಾನ ಅದಕ್ಕೆ ಕಾರಣ ಹುಡುಕಿತು ನೀರಲ್ಲಿರುವ ವೈರಸ್ ಅಥವಾ ಬ್ಯಾಕ್ಟೀರಿಯಾಗಳೇ ಜ್ವರಕ್ಕೆ ಕಾರಣ ಎಂದು, ಆಧುನಿಕ ವಿಜ್ಞಾನ ಹುಡುಕಿದ ಕಾರಣ ಸುಳ್ಳಲ್ಲ, ಆದರೆ ಪರಿಹಾರಾರ್ಥವಾಗಿ ಅವರು ನೀರನ್ನು ಬ್ಯಾಕ್ಟೀರಿಯಾ ಮುಕ್ತಗೊಳಿಸಲು ಅವುಗಳನ್ನು ರಾಸಾಯನಿಕಗಳನ್ನು ಬಳಸಿ ಕೊಂದರು! ಮತ್ತು ಅದನ್ನೇ ಎಲ್ಲರೂ ಅನುಸರಿಸುವಂತೆ ಕಾಯಿದೆ ತಂದರು!!

ನಿಜವಾದ ಪರಿಹಾರ ಏನಾಗಬೇಕಿತ್ತು ಎಂದರೆ, ಉಳಿದ ಎಂಟು ಜನ ಅದೇ ನೀರು ಕುಡಿದು ಜ್ವರ ಬಾರದೇ ಹೇಗೆ ಉಳಿದರು? ಅದನ್ನು ಕಂಡುಹಿಡಿದು, ಉಳಿದವರನ್ನು ಹಾಗೆ ತಯಾರು ಮಾಡುವ ಬದಲು, ಎಲ್ಲವನ್ನೂ ಕೊಂದು ಇಂದಿನ ದುಸ್ತಿತಿಗೆ ಕಾರಣವಾಗಿದ್ದೇವೆ.

ಹಾಗಾದರೆ,

ಈಗ ಬಂದಿರುವ, ಇನ್ನಿಲ್ಲದಂತೆ ಕಾಡುವ ರೋಗಗಳಾದ ಮಧುಮೇಹ, ರಕ್ತದೊತ್ತಡದ, ಥೈರಾಯಿಡಿಸಮ್, ಕೀಲುನೋವು…. ಮುಂತಾದವುಗಳನ್ನು ಚಿಕಿತ್ಸೆ ಮಾಡಲು ಯಾರನ್ನು ಕೊಲ್ಲೋಣ?! ಇಂತಹ, ಒಬ್ಬರಿಂದೊಬ್ಬರಿಗೆ ಹರಡದ ಯಾವ ಕಾಯಿಲೆಗಳಿಗೂ ಯಾವ ಕ್ರಿಮಿಗಳೂ ಕಾರಣವಲ್ಲವಲ್ಲ.!!

ಇನ್ನು ಕ್ರಿಮಿಗಳಿಂದಲೇ ಬರುತ್ತಿರುವ ಮತ್ತು ಒಬ್ಬರಿಂದೊಬ್ಬರಿಗೆ ಹರಡುವ ಕಾಯಿಲೆಗಳನ್ನೇ ನೋಡೋಣ-

ವೈರಸ್ ಗಳಿಂದ ಬರುವ ಡೆಂಗ್ಯೂ, ವೈರಲ್ ಅರ್ಥ್ರೈಟಿಸ್, ಹೆಪಾಟಿಟೀಸ್ ಹಾಗೇ ಬ್ಯಾಕ್ಟೀರಿಯಾ ಗಳಿಂದ ಬರುವ ಟಿ.ಬಿ, ನಿಮೋನಿಯಾ, ಅತಿಸಾರ, ಟೈಫಾಯ್ಡ್ ಮುಂತಾದವುಗಳೂ ಇಡೀ ಸಮುದಾಯವನ್ನೇನು ಆವರಿಸುವುದಿಲ್ಲ, ಯಾರ ರಸಧಾತುವಿನ ಶಕ್ತಿ ಕಡಿಮೆಯೋ ಅವರನ್ನು ಮಾತ್ರ ಬಾಧಿಸುತ್ತವೆ, ತುರ್ತುಪರಿಸ್ಥಿತಿ ತರುತ್ತವೆ ಕೆಲವೊಮ್ಮೆ ಕೊಂದೇಹಾಕುತ್ತವೆ.

 *ನೆನಪಿಡಿ ನಾವೆಲ್ಲಾ ಪ್ರತಿದಿನ ನಿಮ್ಯೊನಿಯಾ, ಟಿಬಿ ತರುವ ಬ್ಯಾಕ್ಟೀರಿಯಾಗಳನ್ನು ಉಸಿರಾಟದಿಂದ ಸೇವಿಸುತ್ತಲೇ ಇದ್ದೇವೆ, ಆದರೆ ಆ ರೋಗಾಣುಗಳು ಅಲ್ಲಿ ನಮ್ಮ ಪುಪ್ಪುಸಗಳಲ್ಲಿ ಬಾಳದೇ ಸಾಯುತ್ತವೆ ಅಥವಾ ಹೊರಬರುತ್ತವೆ, ಎಲ್ಲರಿಗೂ ಕಾಯಿಲೆ ತರುವುದಿಲ್ಲ.

ಯಾವಾಗ ಕಾಯಿಲೆ ತರುತ್ತವೆ ಎಂದರೆ ಪ್ರಪಂಚದ ಎಲ್ಲಾ ಜೀವರಾಶಿಗಳಂತೆ ಅವೂ ಸಹ ಅಲ್ಲಿ ತಮ್ಮ ಸಂತತಿ ಬೆಳೆಸಲು ಆಹಾರ, ಗಾಳಿ, ಸ್ಥಳ ಸಿಕ್ಕರೆ ಸೊಂಪಾಗಿ ಬೆಳೆದು ನಮಗೆ ರೋಗ ತರುತ್ತವೆ. ಅವಕಾಶ ಇರದವರ ಪುಪ್ಪುಸಗಳಿಂದ ಜಾಗ ಖಾಲಿಮಾಡುತ್ತವೆ ಇಲ್ಲವೇ ಸಾಯುತ್ತವೆ.*

ಈಗ ಹೇಳಿ, ಅವುಗಳಿಗೆ ಆಹಾರ ಇಲ್ಲದಂತೆ ಮಾಡುವುದು ಶಾಶ್ವತ ಪರಿಹಾರವೋ ಕೊಲ್ಲುವುದು ಶಾಶ್ವತ ಪರಿಹಾರವೋ?

*ಒಂದೊಮ್ಮೆ ಕೇವಲ ಕೊಲ್ಲುವುದಷ್ಟೇ ಮಾಡಿದರೆ ಪರಿಣಾಮ ಏನಾಗುತ್ತದೆ, ಶೇ90 ಕ್ರಿಮಿ ನಾಶವಾದರೆ ಉಳಿದವು ಔಷಧಿಗೆ ಪ್ರತಿರೋಧ ತೋರುತ್ತವೆ, ಕೇವಲ ಶೇ1% ಉಳಿದರೂ ಆ ಸಂತತಿ ಔಷಧಿಗೆ ಬಗ್ಗದೇ ಬೆಳೆಯುತ್ತವೆ. ಇಂದು ಜಗತ್ತಿನಲ್ಲಿ ಆಗುತ್ತಿರುವ ಅನಾಹುತ ಇದೇ.

ಈ ಔಷಧಿಗೆ ಬಗ್ಗಲ್ಲ, ಹೊಸ ಯಾಂಟಿಬಯಾಟಿಕ್ಸ್, ಅದಕ್ಕೆ ಬಗ್ಗಲ್ಲ ಮತ್ತೆ ಹೊಸದು, ಶಕ್ತಿಯುತ ಔಷಧ(ನಿನಪಿಡಿ ಇವು ಔಷಧ ಅಲ್ಲ ಕ್ರಿಮಿಗಳನ್ನು ಕೊಲ್ಲಲು ಅನುಮೋದನೆ ಪಡೆದ ಕ್ರಿಮಿನಾಶಕಗಳೇ ಹೊತು ಔಷಧಿ ಎನ್ನಬಾರದು) ತಯಾರಿಕೆಯಲ್ಲಿ ತೊಡಗಿದೆ ಒಂದು ವಿಭಾಗ ಮತ್ತು ಅದು ವಿಜ್ಞಾನ ಎನಿಸಿಕೊಂಡು ಜಗತ್ತನ್ನೇ ನಂಬಿಸುತ್ತಿದೆ!!! ಇಂದು ಜಗತ್ತು ಈ ಸಂಕೋಲೆಯಿಂದ ಹೊರಬರತೊಡಗಿದೆ, ಆದರೆ ಭಾರತ ನಿಧಾನಗತಿಯಲ್ಲಿದೆ.*

ಇನ್ನೊಂದು ಸತ್ಯ ಎಲ್ಲಾ ವೈರಸ್, ಬ್ಯಾಕ್ಟೀರಿಯಾ ಪೀಡಿತರನ್ನೂ ಯಶಸ್ವಿಯಾಗಿ ರಕ್ಷಿಸಲು ಔಷಧಿ/ಕ್ರಿಮಿನಾಶಕಗಳಿಂ ಅಸಾಧ್ಯ, ನಿಮ್ಮ ರಸಧಾತುವಿನ ಶಕ್ತಿಯೇ ನಿಮ್ಮನ್ನು ರಕ್ಷಿಸುತ್ತಿರುವ ತಾಯಿ, ಅದು ದುರ್ಬಲ ಅಥವಾ ಕಡಿಮೆ ಇರುವವರು ಅತೀವ ತೊಂದರೆಗೆ ಒಳಗಾಗುತ್ತಾರೆ, ತುರ್ತುಸ್ಥಿತಿ ತಲುಪುತ್ತಾರೆ ಅಥವಾ ದೇಹಬಿಡುತ್ತಾರೆ!!

ಆಯುರ್ವೇದ ಎಷ್ಟು ಸರಳ ಸುಂದರವಾಗಿ ಇದಕ್ಕೆ ಪರಿಹಾರ ಕೊಟ್ಟಿದೆ ಗೊತ್ತೇ,

ರೋಗ ಕಾರಣಗಳನ್ನು ನಾಲ್ಕು ವಿಭಾಗ ಮಾಡಿದ್ದಾರೆ

ಸನ್ನಿಕೃಷ್ಟ

ವಿಪ್ರಕೃಷ್ಟ

ಪ್ರಧಾನಿಕ ಮತ್ತು

ವ್ಯಭಿಚಾರಿ

ಎಂದು

ಇಲ್ಲಿ ಒಂದನ್ನು ಮಾತ್ರ ಹೇಳುತ್ತೇನೆ.

ವ್ಯಭಿಚಾರಿ ಕಾರಣ ಎಂದರೆ ರೋಗ ಉತ್ಪತ್ತಿ ಮಾಡಲು ಸಾಮರ್ಥ್ಯ ಇಲ್ಲದ ಕಾರಣವನ್ನು ವ್ಯಭಿಚಾರೀ ಕಾರಣ ಎನ್ನುತ್ತಾರೆ. ಅಂದರೆ ಅದರ ಕಾರ್ಯವಾದ ರೋಗ ಉತ್ಪತ್ತಿ ಆಗುವಲ್ಲಿ ವ್ಯಭಿಚಾರಿಯಾಗಿ ರೋಗ ಉಂಟುಮಾಡದೇ ಇರುವುದು

ಆಶ್ಚರ್ಯ ಅಲ್ಲವೇ ರೋಗ ಉಂಟು ಮಾಡಲು ಅಸಮರ್ಥವಾದುದನ್ನು ರೊಗಕಾರಣ ಎಂದು ಹೇಳಿದ್ದೇಕೆ? ಅದು ತಾನು ಸಮರ್ಥವೇ ಆಗಿದ್ದು, ಆದರೆ ಈ ಶರೀರದಲ್ಲಿ ಅದು ಅಸಮರ್ಥವಾಗಿದೆ, ಹಾಗಾಗಿ ವ್ಯಭಿಚಾರೀ ಕಾರಣವೂ ರೋಗಕ್ಕೆ ಒಂದು ಕಾರಣ ಎಂದಿದ್ದಾರೆ.

ಅಂದರೆ ನಮ್ಮ ನಮ್ಮ ಶರೀರಕ್ಕೆ ರೋಗ ಕಾರಣಗಳಾದ ನಾಲ್ಕನ್ನೂ ವ್ಯಭಿಚಾರಿಯನ್ನಾಗಿಸುವ ಶಕ್ತಿ ಇದ್ದೇ ಇದೆ. ಅಂದರೆ ನಮಗೆ ರೋಗಗಳು ಬಾರದಂತೆ ತಡೆದೇಬಿಡಬಹುದು.

ದೋಷ ವ್ಯತ್ಯಯದಿಂದ ಆ ಕ್ಷಣದಲ್ಲಿ ಇರದಿದ್ದರೆ ತಕ್ಷಣ ಪರಿಹರಿಸಿಕೊಳ್ಳಲು ಕೆಲ ಪುಟ್ಟ, ಸರಳ ನಿಯಮಗಳಿವೆ ಅವೇ

1.ನಿದಾನ ಪರಿಮಾರ್ಜನ(ಕಾರಣಗಳ ತ್ಯಾಗ)

2.ದಿನಚರ್ಯ

3.ಋತುಚರ್ಯ

4.ಸದೃತ್ ಮತ್ತು

5.ವೇಗಗಳ ನಿರ್ವಹಣೆ

ನಾವಾಗೀ ಸ್ಥಳಕೊಡದೇ ಯಾವ ನರಪಿಳ್ಳೆಯೂ ದೇಶವನ್ನಾಗಲೀ, ಯಾವ ಕ್ರಿಮಿಯೂ ದೇಹವನ್ನಾಗಲೀ ಆಳಲು ಸಾಧ್ಯವಿಲ್ಲ, ದುಷ್ಟ ಕ್ರಿಮಿಗಳನ್ನು ಒಳಬಿಟ್ಟುಕೊಳ್ಳುವುದೂ, ತೊಂದರೆ, ಅಪಾಯಗಳನ್ನೇ ಎದುರಿಸುವುದು, ಕೊಲ್ಲಲು ಔಷಧಿ ಕಂಡುಹಿಡಿಯುವುದು!!!! ಇದು ಬಾಳುವ ರೀತಿಯೇ.

ಸರಿಯಾದ ಬಾಳು ಯಾರನ್ನೂ ಕೊಲ್ಲುವುದಿಲ್ಲ, ಬದಲಾಗಿ ದುಷ್ಟ ಕ್ರಿಮಿಗಳನ್ನು ಹತ್ತಿರವೇ ಬಿಟ್ಟುಕೊಳ್ಳುವುದಿಲ್ಲ, ಒಂದೊಮ್ಮ ಒಳಹೊಕ್ಕರೂ ಅನ್ನ ನೀರು ಗಾಳಿ ಇಲ್ಲದೇ ಕೊಲ್ಲಬೇಕೇ ಹೊರತು ನಮ್ಮ ಹೊಲದೊಳಗೇ ಕ್ರಿಮಿನಾಶಕ ಸುರಿದುಕೊಳ್ಳಬಾರದು.

ಗಮನಿಸಿ:

ಕ್ರಿಮಿಗಳಿಗೆ ಆಹಾರ ಯಾವುದೆಂದರೆ, ನಮ್ಮಲ್ಲಿ ಶೇಖರಣೆಗೊಳ್ಳುವ ಮತ್ತು ನಾವು ಖರ್ಚು ಮಾಡಿ ಹೊರಹಾಕದ, ನಾವು ಆಹಾರವೆಂದುಕೊಂಡು ಏನೇನೋ ತಿಂದ ದ್ರವ್ಯಗಳೇ ಆಗಿದೆ. ಅವುಗಳಿಗೆ ಆಹಾರ ಕೊಡದಿರೋಣ- ಪಚನವಾಗುವ ಆಹಾರ ತಿನ್ನುವುದು, ಹಸಿದಮೇಲೆಯೇ ತಿನ್ನುವುದು ಮತ್ತು ವ್ಯಾಯಾಮ ಅಥವಾ ನಿತ್ಯ ಚಟುವಟಿಕೆಯೇ ಇದಕ್ಕೆ ಪರಿಹಾರ.

ಕ್ರಿಮಿಗಳಿಗೆ ಗಾಳಿ ಕಾರ್ಬನ್ ಡೈಆಕ್ಸೈಡ್ (ಅನರೋಬಿಕ್ ಕ್ರಿಮಿಗಳಿಗೆ) ಆಗಿದೆ, ಗಾಳಿ ಕೊಡದಿರೋಣ- ದೀರ್ಘ ಉಸಿರಾಟ ಇದಕ್ಕೆ ಪರಿಹಾರ.

ಕ್ರಿಮಿಗಳಿಗೆ ಸ್ಥಳ ನಮ್ಮ ಧಾತುಗಳೇ ಆಗಿವೆ. ಅವುಗಳನ್ನು ಸದೃಢಗೊಳಿಸಿ ಕೊಳ್ಳೋಣ-

ಸ್ವಸ್ಥ್ಯ ಪಂಚಕರ್ಮ ಚಿಕಿತ್ಸೆ(ರೋಗಕಾರಕ ಅಂಶಗಳನ್ನು ವರ್ಷಕ್ಕೊಮ್ಮೆ ಹೊರ ಹಾಕುವುದು ಉದಾ: ನಮ್ಮ ವಾಹನ ಸರ್ವೀಸ್ ಮಾಡಿಸಿದಂತೆ)

ಮತ್ತು ರಾಸಾಯನ(ಧಾತುವರ್ಧಕ, ದೇಹ ಪೋಷಕ ಗಿಡಮೂಲಿಕೆಗಳು ಮತ್ತು/ಅಥವಾ ಆಹಾರಗಳು)ಪ್ರಯೋಗಗಳೇ ಇದಕ್ಕೆ ಪರಿಹಾರ.

ಇನ್ನೂ ಹೆಚ್ಚಿನ ಮಾಹಿತಿಗೆ ಆಯುರ್ವೇ ವೈದ್ಯರನ್ನು ಸಂಪರ್ಕಿಸಬಹುದು.ಪ್ರೀತಿಯ ಬಂಧುಗಳೇ,

ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು  ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.

ಆಯುರ್ವೇದ ಸಲಹೆ ಪಾಲಿಸೋಣ ; ಆಸ್ಪತ್ರೆಗಳಿಂದ ದೂರ ಇರೋಣ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ –

ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

ಶಿವಮೊಗ್ಗ-ದಾವಣಗೆರೆ.

Admin

Leave a Reply

Your email address will not be published. Required fields are marked *

error: Content is protected !!