ನಮ್ಮ ಶರೀದ ಬೆಳವಣಿಗೆಗೆ ಮತ್ತು ಸದೃಢ ಆರೋಗ್ಯಕ್ಕೆ ಮೂಲಕಾರಣ ಏನು?

ನಮ್ಮ ಶರೀದ ಬೆಳವಣಿಗೆಗೆ ಮತ್ತು ಸದೃಢ ಆರೋಗ್ಯಕ್ಕೆ ಮೂಲಕಾರಣ ಏನು?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-2

||ಕೋಷ್ಠಃ ಕ್ರೂರೋ ಮೃದುರ್ಮಧ್ಯೋ ಮಧ್ಯಃ ಸ್ಯಾತ್ತೈಃ ಸಮೈಃ ಅಪಿ|| ವಾಗ್ಭಟ ಸೂತ್ರ ಸ್ಥಾನ, ಅಧ್ಯಾಯ-1

ಮಾನವನ ಅನ್ನ ನಾಳವನ್ನು ಸಂಸ್ಕೃತದಲ್ಲಿ ಕೋಷ್ಠ ಎಂದು ಕರೆಯುತ್ತಾರೆ. ಇದು ಪ್ರತಿ ಜೀವಿಯ ಪ್ರಕೃತಿ, ಆರೋಗ್ಯ ಮತ್ತು ಬೆಳವಣಿಗೆಯನ್ನು ನಿರ್ಧರಿಸುತ್ತದೆ.

ವಿಧಗಳು:
ಕ್ರೂರಕೋಷ್ಠ
ಮಧ್ಯಮ ಕೋಷ್ಠ
ಮೃದು ಕೋಷ್ಠ
ಸಮ ಕೋಷ್ಠ

ಈ ನಾಲ್ಕು ವಿಧದ ಕೋಷ್ಠಗಳಲ್ಲಿ ನಮ್ಮದು ಯಾವುದು?
ಎನ್ನುವುದನ್ನು ಆಧರಿಸಿ ಸೂಕ್ತ ಆಹಾರ ಸೇವನೆ ಮಾಡಬೇಕು ಮತ್ತು ಅದರ ಮೇಲೆಯೇ ನಮ್ಮ ಆರೋಗ್ಯ, ಜೀವನ‌, ಬೆಳವಣಿಗೆ ಎಲ್ಲಾ ನಿಂತಿದೆ.

ಒಂದೇ ನೆಲದಲ್ಲಿರುವ ಒಂದೇ ಜಾತಿಯ ಮತ್ತು ಒಂದೇ ರೀತಿಯ ಪೋಷಣೆ ಮಾಡಿದ ಗಿಡಗಳಲ್ಲಿ ಒಂದು ದಪ್ಪ – ಮತ್ತೊಂದು ಸಣ್ಣ, ಒಂದು ಆರೋಗ್ಯ – ಮತ್ತೊಂದು ಅನಾರೋಗ್ಯದಿಂದ ಬೆಳೆದಿರುತ್ತವೆ ಅಲ್ಲವೇ?
ಇದಕ್ಕೆ ಕಾರಣ ಪೋಷಕಾಂಶಗಳನ್ನು ಹೀರಿಕೊಳ್ಳುವ ಅದರ ಬೇರೇ(ಕೊಷ್ಠ) ಹೊರತು ಅನ್ಯ ಕಾರಣ ಇಲ್ಲ.

ಹಾಗೆಯೇ,

ಮಾನವನ ಬೆಳವಣಿಗೆ ಆರೋಗ್ಯ ಸೌಂದರ್ಯ ಎಲ್ಲವೂ ನಮ್ಮ ಬೇರುಗಳಾದ ಉದರ ಕರುಳುಗಳನ್ನು ಅವಲಂಬಿಸಿರುತ್ತದೆ. ಅದನ್ನೇ ಕೋಷ್ಠ ಎನ್ನುತ್ತೇವೆ. ನಾವು ಏನು ತಿನ್ನುತ್ತೇವೆ ಎನ್ನುವುದಕ್ಕಿಂತ, ಎಷ್ಟು ಜೀರ್ಣಿಸಿಕೊಳ್ಳುತ್ತೇವೆ, ಹೇಗೆ ಹೀರಿಕೊಳ್ಳುತ್ತೇವೆ ಎನ್ನುವುದು ಆರೋಗ್ಯದ ಮೂಲ ಮಂತ್ರ.

ಓದುಗರೇ..

ಆರೋಗ್ಯ ಬೇಕೇ ನಿಮ್ಮ ಕೋಷ್ಠ ದ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಿ.
ಹೊಟ್ಟೆಗೆ ಕಸವನ್ನು ಹಾಕಿ ಗಟ್ಟಿಯಾದ ಆರೋಗ್ಯ ಪಡೆಯಲು ಸಾಧ್ಯವಿಲ್ಲ.

ಇಂದಿನ ವೈದ್ಯಪದ್ಧತಿ ಆಹಾರವನ್ನು ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್…. ಎಂದು ಹೇಳುತ್ತದೆಯೇ ಹೊರತು, ಒಳ ಹೋದಮೇಲೆ ಕೋಷ್ಠದ ಅಗ್ನಿ ಸಂಪರ್ಕದ ನಂತರ (after enzymatic action) ಅದರ ಪರಿಣಾಮ ಏನಾಗುತ್ತದೆ ಎನ್ನವುದನ್ನು ಗಮನಿಸದೇ ಇಷ್ಟೊಂದು ಅನಾರೋಗ್ಯಕ್ಕೆ ಈಡಾಗಿದ್ದೇವೆ.

ಉದಾಹರಣೆಗೆ
ಒಂದು ತಿಂಗಳ ಮಗುವಿಗೆ ಅತ್ಯುತ್ತಮ ಜೋಳದ ಅಥವಾ ಅಕ್ಕಿಯ ಬಿಸಿ ಬಿಸಿ ರೊಟ್ಟಿ, ಅನ್ನವನ್ನೋ, ತಾಜಾ ಉತ್ತಮ ಹಣ್ಣನ್ನೋ ಹೊಟ್ಟೆಗೆ ಕಳಿಸಿದರೆ ಅದು ಸತ್ತೇಹೋಗುತ್ತದೆ.

ಹಾಗಾದರೆ ಯವುದು ಆಹಾರ?

ಯಾವುದು ನಮ್ಮ‌ಕೋಷ್ಠಕ್ಕೆ ವಿರೋಧವಾಗದೇ, ಸುಲಭವಾಗಿ ಜೀರ್ಣಿಸಿ, ಕರಗಿ, ಹೀರಿ ಒಳಹೋಗಿ ತಾನು ಶರೀರವೇ ಆಗಿ ಮಾರ್ಪಡಾಗುತ್ತದೆಯೋ ಅದೇ ನಿಜವಾದ ಆಹಾರ.

ಕಚ್ಚಾವಸ್ತುವಿನಂತೆ ಮತ್ತು ತಾಯಾರಿಕಾ ವ್ಯವಸ್ಥೆಯಂತೆ ಸಿದ್ಧವಸ್ತು

ಹಾಗೆಯೇ,

ಆಹಾರದಂತೆ ಮತ್ತು ಅದನ್ನು ಜೀರ್ಣಿಸಿ-ಹೀರಿಕೊಳ್ಳುವ ಸಾಮರ್ಥ್ಯದಂತೆ ನಮ್ಮ ಶರೀರ

ಹಾಗಾದರೆ ನಮ್ಮ ಕೊಷ್ಠಕ್ಕೆ ಸೂಕ್ತವಾದ ಆಹಾರವನ್ನು ಗುರುತಿಸುವುದು ಹೇಗೆ?

ಅತ್ಯಂತ ಸರಳ- ಯಾವುದನ್ನು ತಿಂದರೆ ಹೊಟ್ಟೆ 1/2 ಅಥವಾ 1 ಗಂಟೆಗಳ ಕಾಲ ಊದಿಕೊಂಡಂತೆ ಭಾರವಾದಂತೆ ಭಾಸವಾಗುತ್ತದೆಯೋ ( ಸ್ವಲ್ಪ ಪ್ರಮಾಣದಲ್ಲಿ ತಿಂದರೂ) ಅದನ್ನು ನಮ್ಮ ಕೋಷ್ಠ ತಿರಸ್ಕರಿಸುತ್ತಿದೆ ಎಂದು ಅರ್ಥ, ಆಗ ಅದನ್ನು ತಿನ್ನ ಬಾರದು, ಅದು ಬೇರೆಯವರಿಗೆ ಅಮೃತವೇ ಆದರೂ, ವಿಜ್ಞಾನ ಏನೇ ಹೇಳಿದರೂ, ಯಾವ ಪುಸ್ತಕ ಅದರ ಬಗ್ಗೆ ಏನೇ ಹೇಳಿದರೂ ಈ ಶರೀರ ಅದನ್ನು ತಿರಸ್ಕರಿಸಿದೆ ಎಂದೇ ತಿಳಿದು ತ್ಯಜಿಸಿಬಿಡಬೇಕು.

ಉದಾ: ಹೆಚ್ಚಿನ ಜನರಿಗೆ ಇಡ್ಲಿ, ದೋಸೆ ತಿಂದಾಗ ಹೀಗಾಗುವುದನ್ನು ನಾವು ನೋಡಿದ್ದೇವೆ, ಅದಕ್ಕೆ ಕಾರಣ ದೋಸೆ ಅಲ್ಲ ಅದರಲ್ಲಿನ‌ ಉದ್ದಿನ ಬೇಳೆ.
ಇನ್ನೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು.

ಪ್ರೀತಿಯ ಬಂಧುಗಳೇ,
ದಯಮಾಡಿ ನಿಮ್ಮ ಹಸಿವನ್ನು ಮತ್ತು ನಿಮ್ಮ ಆಹಾರವನ್ನು ಚನ್ನಾಗಿಟ್ಟುಕೊಳ್ಳಿ ಮತ್ತು ಆಸ್ಪತ್ರೆಗಳಿಂದ ದೂರ ಇದ್ದುಬಿಡಿ.

ಆಯುರ್ವೇದ ಸಲಹೆ ಪಾಲಿಸೋಣ ; ಆಸ್ಪತ್ರೆಗಳಿಂದ ದೂರ ಇರೋಣ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!