ಶಿಕಾರಿಪುರ: ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಬಡ ಕೂಲಿ‌‌ ಕಾರ್ಮಿಕರಿಗೆ 200 ರೂ ವಿತರಣೆ…!

ಶಿಕಾರಿಪುರ: ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಬಡ ಕೂಲಿ‌‌ ಕಾರ್ಮಿಕರಿಗೆ 200 ರೂ ವಿತರಣೆ…!

ಶಿಕಾರಿಪುರ :ಮಾಜಿ ಪ್ರಧಾನಿ ದಿ:ರಾಜೀವ್‍ಗಾಂಧಿಯವರ 29ನೇ ಪುಣ್ಯಸ್ಮರಣೆ ಬಡಕೂಲಿ ಕಾರ್ಮಿಕರಿಗೆ ನ್ಯಾಯ ಯೋಜನೆ ಅಡಿ 6ತಿಂಗಳ ಸಹಾಯಧನ ನೀಡಿ ಎಂದು ಕೇಂದ್ರಕ್ಕೆ ಒತ್ತಾಯ – 50 ಕಾರ್ಮಿಕರಿಗೆ ಶಿಕಾರಿಪುರ ಯುವ ಕಾಂಗ್ರೇಸ್ಸಿನಿಂದ ಒಂದು ದಿನದ ಸಹಾಯಧನ ವಿತರಣೆ ಮಾಡಲಾಯಿತು.

ಶಿಕಾರಿಪುರ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿಗಳಾದ ದಿವಂಗತ ಶ್ರೀ ರಾಜೀವ್ ಗಾಂಧಿ ಅವರ 29ನೇ ಪುಣ್ಯಸ್ಮರಣೆಯ ಅಂಗವಾಗಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಜೊತೆಗೆ “ನ್ಯಾಯ ಯೋಜನೆಯ” ಕಾರ್ಯಕ್ರಮವನ್ನು ನಗರದ 50 ಜನ ಬಡ ಕೂಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಪ್ರತಿಯೊಬ್ಬರಿಗೆ 200 ರೂ.ಗಳಂತೆ ಯುವ ಕಾಂಗ್ರೆಸ್‍ನಿಂದ ನೀಡುತ್ತಿದ್ದು.

ಇದೇ ರೀತಿಯಲ್ಲಿ ಕೇಂದ್ರ ಸರ್ಕಾರವು 6 ತಿಂಗಳುವರೆಗೆ ಎಲ್ಲಾ ಬಡ ಕೂಲಿ ಕಾರ್ಮಿಕರಿಗೆ ನೀಡಬೇಕೆಂದು ಆಗ್ರಹಿಸುತ್ತಾ ಕರೋನ ಮಹಾಮಾರಿಯಿಂದ ಲಾಕ್‍ಡೌನ್ ನಿಂದ ತತ್ತರಿಸಿರುವ ನಗರ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ನ್ಯಾಯಯೋಜನೆಯಲ್ಲಿ ಕೇಂದ್ರ ಸರ್ಕಾರವು ತತ್‍ಕ್ಷಣವೇ ಸಹಾಯಧನ ವಿತರಿಸಬೇಕು

ಜೊತೆಗೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನರೆಗಾ ಕಾರ್ಯಕ್ರಮದ ಸಂಬಳವನ್ನು ದ್ವಿಗುಣ ಮಾಡಬೇಕು ಎಂದು
ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್ ಹೇಳಿದರು.

ಲಾಕ್‍ಡೌನ್ ನಿಂದ ತತ್ತರಿಸಿರುವ ವಲಸೆ ಕಾರ್ಮಿಕರು ಹಾಗೂ ಎಲ್ಲಾ ಸ್ತರದ ಶ್ರೀಸಾಮಾನ್ಯರ ಹಿತವನ್ನು ಕಾಪಾಡಬೇಕು, ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್ ಬರೀ ಘೋಷಣೆ ಆಗಬಾರದು, ತಕ್ಷಣ ಕಾರ್ಯರೂಪಕ್ಕೆ ತರಬೇಕೆಂದು ಈ ಮೂಲಕ ಯುವ ಕಾಂಗೆಸ್ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ.

ಇಂದು ಸಾಂಕೇತಿಕವಾಗಿ ನಗರಭಾಗದ 50 ಬಡ ಕೂಲಿ ಕಾರ್ಮಿಕರಿಗೆ 200 ರೂಪಾಯಿಗಳಂತೆ ಒಂದು ದಿನದ ಸಹಾಯಧನವನ್ನು ಯುವ ಕಾಂಗ್ರೆಸ್ ನೀಡುತ್ತಿದ್ದು, ಕೇಂದ್ರ ಸರ್ಕಾರ ಬಡ ಕೂಲಿ ಕಾರ್ಮಿಕರ ಪರ ಗಮನಹರಿಸದಿದ್ದಲ್ಲಿ, ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ,ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರಾದ ಪ್ರವೀಣ್ ಕುಮಾರ್, ಜಿಲ್ಲಾ ಉಪಾದ್ಯಕ್ಷರಾದ ಶರವಣ, ಚಂದ್ರಪ್ಪ, ದಯಾನಂದ ಗಾಮ, ಸುಹಾಸ್, ಜುನೈದ್ ಅಫ್ಸರ್, ಮುಂತಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!