ಚೆಕ್ ಪೋಸ್ಟ್ ಕಣ್ ತಪ್ಪಿಸಿ ಶಿಕಾರಿಪುರಕ್ಕೆ ಬಂದ 6 ಜನ 3 ಬೈಕ್ ಗಳ ವಶ..!

ಚೆಕ್ ಪೋಸ್ಟ್ ಕಣ್ ತಪ್ಪಿಸಿ ಶಿಕಾರಿಪುರಕ್ಕೆ ಬಂದ 6 ಜನ  3 ಬೈಕ್ ಗಳ ವಶ..!

ಶಿಕಾರಿಪುರ: ಯಾವುದೇ ಅಧಿಕೃತ ಪಾಸ್ ಹೊಂದದೇ ಶಿವಮೊಗ್ಗ ಜಿಲ್ಲಾ ಸರಹದ್ದಿನ ಚೆಕ್ ಪೋಸ್ಟ್ ಮೂಲಕ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಬರದೇ ಪೊಲೀಸರ  ಕಣ್ ತಪ್ಪಿಸಿ ಬೇರೆ ರಸ್ತೆಯ ಮೂಲಕ ಶಿಕಾರಿಪುರ ಕ್ಕೆ ಬರುತ್ತಿದ್ದ 03  ದ್ವಿ ಚಕ್ರ ವಾಹನಗಳ ವಶ

ಶಿಕಾರಿಪುರ ತಾಲೂಕಿಗೆ ನೆರೆ ಜಿಲ್ಲೆ ಹಾವೇರಿಯಿಂದ ಯಾವುದೇ ಅಧಿಕೃತ ಪಾಸ್ ಇಲ್ಲದೇ ಪೊಲೀಸರ ಕಣ್ ತಪ್ಪಿಸಿ ಗುಳೇದಹಳ್ಳಿ ಮತ್ತು ಮಾರವಳ್ಳಿ ಗ್ರಾಮದ ಒಳ ರಸ್ತೆಗಳ  ಮುಖಾಂತರ ದ್ವಿ ಚಕ್ರ ವಾಹನಗಳಲ್ಲಿ ಬಂದಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ರವಿ ಕುಮಾರ್ ಹಾಗೂ ಸಿಬ್ಬಂಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದರು,

ಈ ಸಂದರ್ಭದಲ್ಲಿ ಯಾವುದೇ ಅಧಿಕೃತ ಪಾಸ್ ಇಲ್ಲದೇ ಶಿವಮೊಗ್ಗ ಜಿಲ್ಲೆಗೆ ಬಂದಿರುವ ಒಟ್ಟು 03 ದ್ವಿ ಚಕ್ರ ವಾಹನಗಳನ್ನು ಮತ್ತು 06 ಜನರನ್ನು ವಶಕ್ಕೆ ಪಡೆದು ಕ್ರಮ ತೆಗೆದುಕೊಂಡರು.

 ಯಾವುದೇ ಜಿಲ್ಲೆಯವರು ಶಿವಮೊಗ್ಗ ಜಿಲ್ಲೆಗೆ ಒಳ ಪ್ರವೇಶಿಸುವಾಗ ಅಧಿಕೃತ ಪಾಸ್ ನ್ನು ಹೊಂದಿರುವುದು ಕಡ್ಡಾಯ, ಪಾಸ್ ಇಲ್ಲದೇ ಸಂಚರಿಸುವ ವ್ಯಕ್ತಿಗಳನ್ನು ದಿಡೀರ್ ಆಗಿ ವಾಹನಗಳನ್ನು ತಡೆದು ಪರಿಶಿಲಿಸಿದಾಗ ಅವರುಗಳು ಬೇರೆ ಜಿಲ್ಲೆಯವರಾಗಿದ್ದು, ಅಧಿಕೃತ ಪಾಸ್ ಗಳನ್ನು ಹೊಂದಿರದೇ ಇದ್ದಲ್ಲಿ ಅಂತಹವರ ವಿರುದ್ದ ಕಾನೂನು ರೀತ್ಯಾ ಮುಂದಿನ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ತಹಶೀಲ್ದಾರ್ ಎಂ ಪಿ ಕವಿರಾಜ್ ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!