ಡಾ.ಬಿ ಆರ್ ಅಂಬೇಡ್ಕರ್ ರವರನ್ನು ಒಂದು ಚೌಕಟಿಗೆ ಸೀಮಿತಗೊಳ್ಳಿಸಬೇಡಿ: ಸಂಸದ ಬಿ.ವೈ ರಾಘವೇಂದ್ರ..!

ಡಾ.ಬಿ ಆರ್ ಅಂಬೇಡ್ಕರ್ ರವರನ್ನು ಒಂದು ಚೌಕಟಿಗೆ ಸೀಮಿತಗೊಳ್ಳಿಸಬೇಡಿ: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ: ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಾಗು ಬಾಬು ಜಗಜೀವನ್ ರಾಮಂ ಜಯಂತಿ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ಚೇತನ ಅವರು ಅವರು ತಮ್ಮ ಜೀವನನ್ನು ರಾಷ್ಟ್ರಕ್ಕೆ ಅರ್ಪಿಸಿದರು ಅವರನ್ನು ಒಂದು ವರ್ಗ ಅಥಾವ ಒಂದು ಚೌಕಟಿಗೆ ಸೀಮಿತ ಗೊಳಿಸಬೇಡಿ ಎಂದರು.


ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜನ್ಮಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಂವಿಧಾನವನ್ನು ಈ ರಾಷ್ಟ್ರಕ್ಕೆ ನೀಡಿದ ಮಹಾನ್ ಶಿಲ್ಪಿ ಅವರು ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ನಾವೆಲ್ಲ ಜೀವನ ನಡೆಸುತ್ತಿದ್ದೇವೆ ಆ ವ್ಯಕ್ತಿಯನ್ನು ಯಾವುದೇ ಒಂದು ಸೀಮಿತ ಘಟನೆಗಳಿಗೆ ಬಳಸಿಕೊಳ್ಳದೆ ಅವರ ಚಿಂತನೆ ಹಾಗೂ ಆದರ್ಶಗಳನ್ನು ಎಲ್ಲಾರು ಪಾಲಿಸಬೇಕು.


ಜೀವನ ಪೂರ್ತಿ ಬಡತನ ಇರಬಾರದ್ದು ಎಂದರೆ ಶಿಕ್ಷಣ ಅತ್ಯಂತ ಅಗತ್ಯ ವಿದ್ಯಾವಂತರಾಗಬೇಕು ಎಂಬುದು ಅವರ ಕನಸ್ಸು ನನಸ್ಸು ಮಾಡಬೇಕಾಗಿದೆ ಎಲ್ಲಾ ವರ್ಗದವರೂ ಶಿಕ್ಷಣ ಪಡೆಯಬೇಕು ಎಂದರು.
ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರು ಅತ್ಯಂತ ಶ್ರೇಷ್ಠ ನಾಯಕ ಈ ನಾಡಿಗೆ ರೈತರ ಶ್ರಮದ ಅರಿತು ಹಸಿರು ಕ್ರಾಂತಿ ಆರಂಭಿಸಿದರು ಇಂತಹ ಶ್ರೇಷ್ಠ ನಾಯಕರನ್ನು ನಾವು ಸ್ಮರಿಸುತ್ತಿರುವುದು ನಮ್ಮ ಭಾಗ್ಯ ಎಂದರು.


ಕರೋನ ಸಮಸ್ಯೆಯನ್ನು ಅತ್ಯಂತ ಪ್ರಭಲವಾಗಿ ಎಲ್ಲಾರೂ ಎದರಿಸಬೇಕಾಗಿದೆ ಎಲ್ಲಾರೂ ಸಹಕಾರ ಅಗತ್ಯ ಬೇಕಾಗಿದೆ ಇಂದು ದೇಶದ ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದು ಮೇ 3 ರ ವರೆಗೂ ಲಾಕ್ ಡೌನ್ ಮುಂದುವರಿಸಿದ್ದಾರೆ ಮೋದಿಜೀ ಅವರ ಹಾಕಿಕೊಟ್ಟ ಸೂತ್ರಗಳನ್ನು ನಾವು ಪಾಲಿಸಬೇಕು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳು ನಿಯಮವನ್ನು ನೀಡಲಾಗಿದೆ ಇದು ಯಾವುದೇ ಶಿಕ್ಷೆಯಲ್ಲ ನಮ್ಮ ರಕ್ಷಣೆಗೆ ನೀಡಿರುವ ಸೂತ್ರಗಳು ಎಲ್ಲಾರು ಪಾಲಿಸಬೇಕಾಗಿ ಮನವಿ ಮಾಡಿದರು.


ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಅಧ್ಯಕ್ಷ ಆರ್.ಕೆ ಶಂಭು, ಜಿಲ್ಲಾ ಪಂ ಸದಸ್ಯೆ ಮಮತಾ ಸಾಲಿ, ತಾ.ಪಂ ಉಪಧ್ಯಕ್ಷೆ ಪ್ರೇಮಾ ಲೋಕೇಶ್, ತಾ.ಪಂ ಸದಸ್ಯರಾದ ಸುಬ್ರಮಣ್ಯ, ತಹಶೀಲ್ದಾರ್ ಎಂ.ಪಿ ಕವಿರಾಜ್, ತಾ.ಪಂ ಇಒ ಪರಮೇಶ್ವರ್, ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್, ಬಿಸಿಎಂ ವಿಸ್ತರಣಾಧಿಕಾರಿ ಶೋಭ, ವಿವಿಧ ಇಲಾಖಾ ಸಿಬ್ಬಂಧಿಗಳು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!