ಕೊಡಚಾದ್ರಿ ಬೆಟ್ಟಕ್ಕೂ ತಟ್ಟಿದ ಕರೋನಾ ಬಿಸಿ ಚಾರಣ ರದ್ದು ಎಲ್ಲಾ ಮಾರ್ಗಗಳು ಬಂದ್..!

ಕೊಡಚಾದ್ರಿ ಬೆಟ್ಟಕ್ಕೂ ತಟ್ಟಿದ ಕರೋನಾ ಬಿಸಿ ಚಾರಣ ರದ್ದು ಎಲ್ಲಾ ಮಾರ್ಗಗಳು ಬಂದ್..!

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ  ಕೊಡಚಾದ್ರಿ‌ ಗಿರಿಗೆ  ಸಾಗುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿರುವ ವನ್ಯ ಜೀವಿ ವಿಭಾಗ ಜೀಪ್ ಸಂಚಾರ ಮತ್ತು ಚಾರಣವನ್ನು ಸಂಪೂರ್ಣ ನಿಷೇಧಿಸಿದೆ.

ಕೊರೊನಾ ವೈರಸ್ ವ್ಯಾಪಿಸಬಹುದಾದ ಭೀತಿಯಿಂದ ಕೊಡಚಾದ್ರಿ ಗಿರಿಗೆ ದಿನವೂ ನೂರಾರು ಜೀಪ್‌ಗಳು ಬರುತ್ತವೆ. ಕೊರೊನಾ ಎಫೆಕ್ಟ್‌ನಿಂದಾಗಿ ಕೊಲ್ಲೂರು ವನ್ಯಜೀವಿ ವಿಭಾಗ ಈ ಹಿಂದೆ ಚಾರಣವನ್ನು ನಿಷೇಧ ಮಾಡಿತ್ತು. ಇದೀಗ ಜೀಪ್ ಸಂಚಾರವನ್ನೂ ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ.

ಪ್ರವಾಸೋದ್ಯಮ ನಂಬಿಕೊಂಡು ಬದುಕುತ್ತಿರುವ ಕೊಲ್ಲೂರು, ನಿಟ್ಟೂರು, ಸಂಪೇಕಟ್ಟೆ, ಕಟ್ಟಿನಹೊಳೆ ಭಾಗದ ಜೀಪ್ ಚಾಲಕರು ಮತ್ತು ಮಾಲೀಕರು, ಸಣ್ಣ-ಪುಟ್ಟ ಹೋಟೆಲ್, ಅಂಗಡಿ, ರಸ್ತೆಬದಿ ವ್ಯಾಪಾರಿಗಳು ಇದರಿಂದಾಗಿ ಪರದಾಡುವಂತಾಗಿದೆ.

ರಾಜ್ಯ ಮತ್ತು ಹೊರ ರಾಜ್ಯಗಳಿಂದ ಚಾರಣಕ್ಕಾಗಿ ಪ್ರವಾಸಿಗಳು ದಂಡು ಆಗಮಿಸುತ್ತಿದ್ದು ಇದರ ಹಿನ್ನಲೆಯಲ್ಲಿ ಕರೋನಾ ವೈರಸ್ ಮುಂಜಾಗ್ರತಾ ವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕೊಲ್ಲೂರಿಗು ಎಫೇಕ್ಟ್:

ರಾಜ್ಯದ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಕೇರಳ, ತಮಿಳುನಾಡು,ಆಂಧ್ರ ಪ್ರದೇಶದ ಭಕ್ತರು ಆಗಮಿಸುತ್ತಾರೆ ಕೊಡಚಾದ್ರಿ ಬೆಟ್ಟವನ್ನು ಹತ್ತಿಪೂಜೆ ಸಲ್ಲಿಸಿದಾರೆ ಮಾತ್ರ ಸರ್ಥಾಕ ಎನ್ನುವ ಪ್ರತೀತಿ ಇದ್ದು ಅದರಿಂದ ಕೊಲ್ಲೂರು ಮೂಕಾಂಬಿಕ ದೇವಸ್ಥಾನ ದರ್ಶನವನ್ನು ನಿಷೇಧಿಸಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!