ಶಿಕಾರಿಪುರ : ಪುರಸಭೆ ಅಧ್ಯಕ್ಷ ಉಪಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ..!

ಶಿಕಾರಿಪುರ : ಪುರಸಭೆ ಅಧ್ಯಕ್ಷ ಉಪಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ..!

ಶಿಕಾರಿಪುರ ಪುರಸಭೆ   ಚುನಾವಣೆ ಮುಗಿದು ವರ್ಷಗಳೇ ಹತ್ತಿರ ಬರುತ್ತಿದ್ದು ಅನೇಕ ತಿಂಗಳುಗಳಿಂದ  ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಶಿಕಾರಿಪುರದ ಜನರು ಕಾತುರದಿಂದ ಕಾಯುತ್ತಿದ್ದರು ಇಂದು ರಾಜ್ಯ ಸರ್ಕಾರ ರಾಜ್ಯ ಪತ್ರದಲ್ಲಿ ಪಟ್ಟಣ ಪಂಚಾಯತ್ ಮತ್ತು ಮುನಿಸಿಪಾಲಿಟಿಗಳ ಅಧ್ಯಕ್ಷ ಉಪಧ್ಯಕ್ಷರ ಆಯ್ಕೆ ಮೀಸಲಾತಿಯನ್ನು ಪ್ರಕಟಿಸಿದೆ.

ಶಿಕಾರಿಪುರ ಪುರಸಭೆ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಜನರಲ್ (ಜಿ) ಮತ್ತು ಉಪಧ್ಯಕ್ಷ ಸ್ಥಾನಕ್ಕೆ ಜನರಲ್ (ಜಿ)ಸ್ಥಾನವನ್ನು  ಘೋಷಣೆ ಮಾಡಿದ್ದೆ ಅಧ್ಯಕ್ಷ ಮತ್ತು ಉಪಧ್ಯಕ್ಷ ಸ್ಥಾನಕ್ಕೆ ಯಾರದರೂ ನಿಲ್ಲಬಹುದಾಗಿದೆ.

ಈ ಬಾರಿ ಚುನಾವಣೆಯಲ್ಲಿ ಒಟ್ಟು 23 ವಾರ್ಡ್ ಗಳಲ್ಲಿ ಕಾಂಗ್ರೇಸ್ 12 ಸ್ಥಾನವನ್ನು ಗೆದಿದ್ದು ಬಿಜೆಪಿ 8 ಸ್ಥಾನವನ್ನು ಗೆಲುವು ಸಾಧಿಸಿದೆ ಪಕ್ಷೇತರರು 3 ಜನ ಗೆಲುವು ಸಾಧಿಸಿದ್ದಾರೆ.

ಕಾಂಗ್ರೇಸ್ ಪಕ್ಷಕ್ಕೆ ಬಹುಮತ ಇದ್ದು ಅಧಿಕಾರ ಹಿಡಿಯುವ ಎಲ್ಲಾ ಅವಕಾಶಗಳಿದ್ದು ಅಧ್ಯಕ್ಷರು ಯಾರಾಗುತ್ತಾರೆ ಉಪಧ್ಯಕ್ಷರು ಯಾರಾಗುತ್ತಾರೆ ಎಂಬುದು ಶಿಕಾರಿಪುರ ನಾಗರೀಕರ ಪ್ರಶ್ನೆಯಾಗಿದ್ದು ಮುಂದಿನ ರಾಜಕೀಯ ಬೆಳವಣಿಗೆಯನ್ನು ಕಾದು ನೋಡಬೇಕಾಗಿದೆ .

ಪುರಸಭೆ ಅಧ್ಯಕ್ಷ ಉಪಧ್ಯಕ್ಷರ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಶಿಕಾರಿ ನ್ಯೂಸ್ ವಿಕ್ಷಿಸಿ.

ರಘು ಶಿಕಾರಿ- 7411515737

Admin

Leave a Reply

Your email address will not be published. Required fields are marked *

error: Content is protected !!