ಶಿಕಾರಿಪುರ: ಮನುಷ್ಯ ತಾನು ಬದುಕಲು ಎಷ್ಟು ಬೇಕು ಅಷ್ಟನ್ನು ಇಟ್ಟುಕೊಂಡು ಇತರಿಗೆ ದಾನ ಧರ್ಮ ಮಾಡಬೇಕು: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ: ಮನುಷ್ಯ ತಾನು ಬದುಕಲು ಎಷ್ಟು ಬೇಕು ಅಷ್ಟನ್ನು ಇಟ್ಟುಕೊಂಡು ಇತರಿಗೆ ದಾನ ಧರ್ಮ ಮಾಡಬೇಕು: ಸಂಸದ ಬಿ.ವೈ ರಾಘವೇಂದ್ರ..!

ಶಿಕಾರಿಪುರ ಪಟ್ಟಣದ ಖಾಸಗಿ ಬಸ್ ನಿಲ್ಧಾಣದಲ್ಲಿ ಪರೋಪಕರಂ ತಂಡದ ವತಿಯಿಂದ ಕರುಣೆಯ ಗೋಡೆ ನಿರ್ಮಾಣ ಮಾಡಿದ್ದು ಸಂಸದ ಬಿ.ವೈ ರಾಘವೇಂದ್ರ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಶಿಕಾರಿಪುರ ಹಿಂದೆ ಮಹಾದಾನಪುರ ಎಂದು ಹೆಸರಿತ್ತು ದಾನಗಳಲ್ಲಿ ಶ್ರೇಷ್ಠ ಹೆಸರನ್ನು ಪಡೆದುಕೊಂಡಿತ್ತು ಇಲ್ಲಿನ ಜನರಿಗೆ ದಾನ ಕೊಡುವ ಮನಸ್ಸು ಇದೆ ಅದರಂತೆ ಮನುಷ್ಯ ತಾನು ಉಪಯೋಗಿಸುವ ವಸ್ತುಗಳಲ್ಲಿ ಯಾವುದು ಅಗತ್ಯ ಇಲ್ಲ ಅದನ್ನು ಇನೊಬ್ಬರಿಗೆ ನೀಡಿ ದಾನ ಧರ್ಮದಲ್ಲಿ ಸಂತಸ ಪಡಬೇಕು ಎಂದರು.

ಶಿಕಾರಿಪುರದ ಪರೋಪಕರಂ ತಂಡ ಈ ನಿಟ್ಟಿನಲ್ಲಿ  ತಾಲೂಕಿನಲ್ಲಿ ಹೊಸ ಸಂಚಲನ ಮೂಡಿಸಿದ್ದು ಕರುಣೆಯ ಗೋಡೆ ಎಂಬ ಹೆಸರಿನಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಗತಿಕರಿಗೆ ಉಪಯೋಗವಾಗುವಂತ ಬಟ್ಟೆಗಳು ಅಡುಗೆ ಸಾಮಾಗ್ರಿ ಹಾಗೂ ಪೇನ್, ಪುಸ್ತಕ, ಈ ರೀತಿಯಲ್ಲಿ ಅನೇಕ ವಸ್ತುಗಳು ಬಡವರಿಗೆ ನಿರ್ಗತಿಕರಿಗೆ ಅನುಕೂಲವಾಗಲಿದೆ ಎಂದರು.

ಪಟ್ಟಣವನ್ನು ಸುಂದರವಾಗಿ ಇಡಬೇಕು ಎಂಬ ಉದ್ದೇಶದಿಂದ ಊರಿನ ದೇವಸ್ಥಾನ, ಸರ್ಕಾರಿ ಕಟ್ಟಡಗಳು ರಸ್ತೆಗಳು ಚರಂಡಿಗಳನ್ನು ಸ್ವಚ್ಚಗೊಳ್ಳಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಪರೋಪಕರಂ ತಂಡದ ಈ ಕೆಲಸ ಇಡೀ ಊರಿನ ಜನತೆಗೆ ಸ್ಪೂರ್ತಿಯಾಗಿದ್ದು ನಮ್ಮ ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಎಲ್ಲಾರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಯುವ ಜನತೆಯನ್ನು ಒಟ್ಟುಗೊಡಿಸಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳುವುದು ಅರಿವು ಮೂಡಿಸುವುದು ಉತ್ತಮವಾದ ಕೆಲಸ ಎಂದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ನಾಗರತ್ನಮ್ಮ, ಅಟೋ ಚಾಲಕ ಬೀರೇಶ್, ಅಮಾಲಿ ಬಷೀರ್, ಹಾಗೂ ಪರೋಪಕರಂ ತಂಡದ ಎಲ್ಲಾ ಸದಸ್ಯರು ಇದ್ದರು.

News by: Raghu Shikari

Admin

Leave a Reply

Your email address will not be published. Required fields are marked *

error: Content is protected !!