ಶಿಕಾರಿಪುರ : ಈಸೂರಿನ ಇತಿಹಾಸ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ…!

ಶಿಕಾರಿಪುರ : ಈಸೂರಿನ ಇತಿಹಾಸ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿದೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ…!

ಶಿಕಾರಿಪುರ: ಈಸೂರಿನ‌ ಗ್ರಾಮದ ಸ್ಮಾರಕ ಭವನ ನಿರ್ಮಾಣ ಕಾಮಗಾರಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮಾತನಾಡಿ

ಸ್ವತಂತ್ರ ಹೋರಾಟ ಭಾರತ ಇತಿಹಾಸದಲ್ಲಿ ಈಸೂರು ಗ್ರಾಮ ಮೊದಲ ಅಕ್ಷರವಾಗಿದೆ. ಇಲ್ಲಿಯ ಸಾಹಿತ್ಯ ಕ್ಷೇತ್ರ ಜಿ.ಎಸ್ ಶಿವರುದ್ರಪ್ಪ ಹೆಸರು ಹಾಗೂ ಬಹುಮುಖ್ಯವಾಗಿ ಗಾಂಧಿಜೀಯವರ ಅಸಹಕಾರ ಚಳುವಳಿಯ ಘೋಷಣೆಗೆ ಕೈಜೋಡಿಸಿ ಹೋರಾಟ ಪ್ರಾರಂಭಿಸಿರುತ್ತಾರೆ.

ಈಸೂರು ಗ್ರಾಮದ ಐದು ಜನ ವೀರ ಹುತಾತ್ಮರು ಗಲ್ಲಿಗೇರುವ ಮೂಲಕ ಹೋರಾಟದ ಮಹತ್ವವನ್ನು ಇಡೀ ದೇಶಕ್ಕೆ ಸಾರಿದ್ದಾರೆ.

ಈ ಹೋರಾಟಗಾರರ ಹೋರಾಟ ಮುಂದಿನ ಜನಾಂಗಕ್ಕೆ ಮಾದರಿಯಾಗಿರಬೇಕು.ಸ್ಮಾರಕ ನಿರ್ಮಾಣಕ್ಕಾಗಿ 5 ಕೋಟಿ ಮೀಸಲಿಡಲಾಗಿದೆ ಒಂದು ವರ್ಷದಲ್ಲಿ ಎಲ್ಲಾ ಕೆಲಸವನ್ನು ಪೂರ್ಣ ಮಾಡಿ ಇಡಿ ರಾಜ್ಯದಲ್ಲಿ ಮುಖ್ಯ ಪ್ರವಾಸಿ ತಾಣವಾಗಲಿದೆ.

ಈ ಎಲ್ಲಾ ಕಾರ್ಯಗಳಿಗೆ ಈಸೂರು ಜನರ ಸಹಕಾರ ಮುಖ್ಯವಾಗಿದೆ. ಎಂದರು.

ಈ‌ ಸಂದರ್ಭದಲ್ಲಿ ಸಚಿವ ಸಿಸಿ ಪಾಟೀಲ್, ಸುನೀಲ್ ಕುಮಾರ್ ಕರ್ಕಳ, ಬಿ.ಸಿ ಪಾಟೀಲ್ , ನಾರಾಯಣ ಗೌಡ, ಸಂಸದ ಬಿ.ವೈ ರಾಘವೇಂದ್ರ ಆಯನೂರು ಮಂಜುನಾಥ, ಎಂಎಲ್‌ಸಿ ರುದ್ರೆಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!