ಶಿಕಾರಿಪುರ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಮೀಸಲಾತಿ ಪ್ರಕಟ…!
ಕಳೆದ ಒಂದುವರೆ ವರ್ಷಗಳಿಂದ ಪಟ್ಟಣದ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಘೋಷಣೆ ಆಗಿರಲಿಲ್ಲ ಕೋರ್ಟ್ನಲ್ಲಿ ಮುಖದ್ದಮೆ ಬಾಕಿ ಉಳಿದಿದ್ದರಿಂದ ವಿಳಂಬವಾಗಿದ್ದು ಕೊನೆಗೂ ರಾಜ್ಯ ಸರ್ಕಾರ ಪುರಸಭೆ ನಗರಸಭೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಪ್ರಕಟಿಸಿದೆ.
ಈ ಬಾರಿಯೂ ಮಹಿಳೆಯರದ್ದೇ ಅಧಿಕಾರ
ಶಿಕಾರಿಪುರ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ(GW) ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಮಹಿಳೆ(BCAW) ಸ್ಥಾನವನ್ನು ನಿಗದಿಪಡಿಸಿ ಘೋಷಣೆಯನ್ನು ಮಾಡಲಾಗಿದೆ.
ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಮಹಿಳೆ ಅಧ್ಯಕ್ಷ ಸ್ಥಾನ ಮೀಸಲಾತಿಯನ್ನು ನೀಡಲಾಗಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಸಮಾನ್ಯ ಮೀಸಲಾತಿ ಇತ್ತು ಈ ಬಾರಿ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು ಅದರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಎರಡು ಮಹಿಳೆ ಪಾಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ ಕೆಲ ಸದಸ್ಯರಿಗೆ ನಿರಾಸೆಯಾಗಿದೆ.
ಪುರಸಭೆ ರಚನೆಯಾದಗಿನಿಂದ ಎಸ್ ಟಿ ಗಿಲ್ಲ ಅಧಿಕಾರ..!
ಶಿಕಾರಿಪುರ ಪುರಸಭೆ ರಚನೆಯಾದಾಗಿನಿಂದ ಈ ವರೆಗೂ ಎಸ್ ಟಿ ಸಮುದಾಯದಕ್ಕೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಸಿಕ್ಕಿಲ್ಲ ಈ ಕುರಿತು ಮೀಸಲಾತಿಯಲ್ಲಿ ರೂಸ್ಟರ್ ಪದ್ದತಿ ಪ್ರಕಾರ ಘೋಷಿಸಿಲ್ಲ ತಾರತಮ್ಯವಾಗಿದೆ ಎಂದು ಕೆಲವರು ಕೋರ್ಟ್ ಮೊರೆ ಹೊಗುವ ಸಾಧ್ಯತೆ ಇದೆ ಎನ್ನಲಾಗಿದೆ.