ಕೆ ಎಸ್. ಈಶ್ವರಪ್ಪ ಚುನಾವಣೆ ಕಚೇರಿ ಮುಂದೆ ವಾಮಾಚಾರ..!

ಕೆ ಎಸ್. ಈಶ್ವರಪ್ಪ ಚುನಾವಣೆ ಕಚೇರಿ ಮುಂದೆ ವಾಮಾಚಾರ..!

ಶಿಕಾರಿಪುರ: ಪಕ್ಷೇತರ ಅಭ್ಯರ್ಥಿ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಚುನಾವಣೆ ಕಚೇರಿ ಎದುರು ವಾಮಾಚಾರ ಮಾಡಲಾಗಿದೆ.

ರಾಷ್ಟ್ರ ಭಕ್ತ ಬಳಗದ ಶಿಕಾರಿಪುರ ಕಚೇರಿಯಲ್ಲಿ ಬುಧವಾರ ರಾತ್ರಿ ವೇಳೆ ಬಾಗಿಲಿನ ಮುಂದೆ ನಿಂಬೆ ಹಣ್ಣು ಅರಿಶಿಣ ಕುಂಕುಮ ಹಾಕಿ ವಾಮಾಚಾರ ಮಾಡಲಾಗಿದೆ.

ಮಾಜಿ ಸಿಎಂ‌ ಬಿ.ಎಸ್ ಯಡಿಯೂರಪ್ಪನವರ ಕ್ಷೇತ್ರ ಹಾಗೂ ಬಿ ವ್ಯೆ. ರಾಘವೇಂದ್ರ ಕ್ಷೆತ್ರದಲ್ಲಿ ವಾಮಾಚಾರ ನೆಡೆದಿರೋದು ಚರ್ಚೆ ಗ್ರಸವಾಗಿದೆ.

ಈ‌ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸಂಸದ‌ ಬಿವೈ ರಾಘವೇಂದ್ರ ಅವರು ತಮ್ಮ ತೋಟದ ಮನೆಯಲ್ಲಿ ಪುನಗು ಬೆಕ್ಕನ್ನು ಬಳಸಿ ನಮ್ಮ ಕುಟುಂಬದ ಮೇಲೆ ವಾಮಾಚಾರ ಮಾಡಲಾಗಿದೆ ಎಂದು ಆರೋಪಿಸಿದರು.
ಲೋಕಸಭಾ ‌ಚುನಾವಣೆ ಇನ್ನೇನು ಕೆಲವೆ ದಿನಗಳು ಬಾಕಿ ಇದ್ದು ವಾಮಾಚಾರ ವಿಚಾರ ಮತ್ತೆ ಮುನ್ನಡೆಗೆ ಬಂದಿದೆ

Admin

Leave a Reply

Your email address will not be published. Required fields are marked *

error: Content is protected !!