ಚಿಕ್ಕಮಗಳೂರು : ಸಿಡಿಲು ಬಡಿದು ರೈತ ಸಾವು
ಚಿಕ್ಕಮಗಳೂರು: ಮಳೆ ಅಬ್ಬರಕ್ಕೆ ವರ್ಷದ ಮೊದಲ ಮಳೆಗೆ ಒಂದು ಬಲಿಯಾಗಿದ್ದು ಶನಿವಾರ ಸುರಿದ ಮಳೆ ಗುಡುಗು ಸಿಡಿಲಿನಿಂದ ರೈತ ಸಾವನ್ನಪ್ಪಿದ ಘಟನೆ ನಡೆದಿದೆ.
ಸಂಜೆಯಿಂದ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಸುರಿದಿದೆ.
ಎನ್.ಆರ್.ಪುರ ತಾಲೂಕಿನ
ಅರಳಿಕೊಪ್ಪದ ಶಂಕರ್ (48) ತೋಟಕ್ಕೆ ಹೋಗಿದ್ದಾಗ
ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.