ಶಿಕಾರಿಪುರ: ಕೆಪಿಟಿಸಿಎಲ್ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ಮಾಜಿ ಸಿಎಂ ಬಿಎಸ್ ವೈ ಭಾಗಿ..!
ಶಿಕಾರಿಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಪಿಟಿಸಿಎಲ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯನ್ನು ಸಂಸದ ಬಿ ವೈ ರಾಘವೇಂದ್ರ ನೇತ್ರತ್ವದಲ್ಲಿ ನಡೆಸಲಾಯಿತು.
ನೀರಾವರಿ ಇಲಾಖೆ ವತಿಯಿಂದ ತಾಲೂಕಿನ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ಭರ್ತಿ ವಿಚಾರ ಹಾಗೂ ಮೇಸ್ಕಾಂ ಇಲಾಖೆಯಿಂದ ವಿದ್ಯುತ್ ಪೂರೈಕೆ ಕುರಿತು ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಅಧಿಕಾರಿಗಳಿಗೆ ಶಿಕಾರಿಪುರ ತಾಲ್ಲೂಕಿನ ಬಾಕಿ ಉಳಿದಿರುವ ಉಡಗಣಿ ತಾಳಗುಂದ ಹೊಸೂರು ಕಸಬಾ ಹೋಬಳಿಗಳ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳಿಗೆ ಇನ್ನೊಂದು ವಾರದಲ್ಲಿ ನೀರು ತುಂಬಿಸುವಂತೆ ಹಾಗೂ ಮೆಸ್ಕಾಂ ಕೆ,ಇ,ಬಿ,ಗೆ ರೈತರ ಪಂಪ್ ಸೆಟ್ ಟಿ,ಸಿ,ಗಳು ರಿಪೇರಿಗೆ ಬಂದಲ್ಲಿ ತಕ್ಷಣ ರಿಪೇರಿ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಕೆ ಎಸ್ ಗುರುಮೂರ್ತಿ, ನೀರಾವರಿ ಮತ್ತು ಮೇಸ್ಕಾಂ ಅಧಿಕಾರಿಗಳು ಇದ್ದರು.
News By: Raghu Shikari-7411515737