ಪತ್ರಿಕಾ ರಂಗ ಅತ್ಯಂತ ಸವಾಲಿನ ಕೆಲಸ :ಶಾಸಕ ಬಿವೈ ವಿಜಯೇಂದ್ರ

ಪತ್ರಿಕಾ ರಂಗ ಅತ್ಯಂತ ಸವಾಲಿನ ಕೆಲಸ :ಶಾಸಕ ಬಿವೈ ವಿಜಯೇಂದ್ರ

ಶಿಕಾರಿಪುರ :ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕ್ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿವೈ ವಿಜಯೇಂದ್ರ ಉದ್ಘಾಟಿಸಿದರು‌

ಈ ವೇಳೆ ಮಾತನಾಡಿದ ಅವರು ಪತ್ರಿಕಾ ರಂಗ ಸವಾಲಿನ ಕೆಲಸ ಒತ್ತಡ ಸಮಸ್ಯೆಗಳ ನಡುವೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ಅಪರೂಪದಲ್ಲಿ ಅಪರೂಪ ಪತ್ರಿಕಾ ರಂಗಕ್ಕೆ ಬಹಷ್ಟು ಗೌರವ ನೀಡುತ್ತಿದ್ದರು ಅವರು ಕೊಟ್ಟಷ್ಟು ಗೌರವ ಯಾವ ರಾಜಕಾಣಿಯೂ ನೀಡಿಲ್ಲ ಪತ್ರಕರ್ತರ ಸಂಕಷ್ಡಗಳನ್ನು ಆಲಿಸಿ ಶೀಘ್ರದಲ್ಲಿ ಸ್ಪಂದಿಸುತ್ತಿದ್ದರು

ರಾಜಕೀಯದಲ್ಲಿ ಯಾವುದೇ ಸಮಸ್ಯೆ ಇದ್ದರು ಹಿರಿಯ ಪತ್ರಕರ್ತರನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆದು ಸಲಹೆ ಸೂಚನೆ ಪಡೆಯುತ್ತಿದ್ದರು‌ ಎಂದರು.

ರಾಜಕೀಯದಲ್ಲಿ ನಾನು ಅಂಬೆಗಾಲು ಇಡುತ್ತಿದ್ದು ನಮ್ಮ ಪತ್ರಕರ್ತರಿಗೆ ಮನವಿ ಮಾಡುತ್ತೇನೆ ರಾಜಕೀಯದಲ್ಲಿ ಈಗ ಕಾಲಿಟ್ಟು ಜನರ ಸೇವೆ ಸಲ್ಲಿಸುತ್ತಿದ್ದು ಯಾವುದು ತಪ್ಪು ಸರಿಗಳನ್ನು ಇದ್ದರು ತಿದ್ದುವ ಕೆಲಸ ಮಾಡಿ ಎಡವಿದರು ಕೂಡ ಟೀಕೆ ಟಿಪ್ಪಣಿಗಳ ಮೂಲಕ ನನ್ನನು ತಿದ್ದಿಕೊಳ್ಳುತ್ತೇನೆ ಎಂದರು.

ಪತ್ರಿಕಾ ರಂಗ ಎಂದಿಗೂ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತದೆ ಅದರ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವ ಕೆಲಸ‌ ಆಗುತ್ತದೆ. ಅದೆ ರೀತಿ ರಾಜಕೀಯದಲ್ಲಿ ವಿರೋಧವಿದ್ದರೆ ಕಲಿಯಲು ಸಾಧ್ಯ
ನನಗೆ ವಿರೋಧ ಪಕ್ಷದ ಶಾಸಕನಾಗಿರುವುದು ಹೆಮ್ಮೆ ಇದೆ ಹಲವಾರು‌ ವಿಷಯಗಳನ್ನು ಕಲಿಯಲು ಅವಕಾಶ ಇದೆ ಆಡಳಿತ ಪಕ್ಷ ತಪ್ಪುಗಳನ್ನು ಟೀಕಿಸುವುದು ಹೋರಾಟಗ ನಡೆಸುವ ಮೂಲಕ ನಾವು ಗಟ್ಟಿಯಾಗುತ್ತೇವೆ ಎಂದರು.

ಈ ವೇಳೆ ನೂತನ ಶಾಸಕರಾದ ಬಿವೈ ವಿಜಯೇಂದ್ರ‌ ಅವರಿಗೆ ತಾಲೂಕ್‌ ಪತ್ರಕರ್ತ ಸಂಘದ ವತಿಯಿಂದ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಜಿಲ್ಲಾ ಸಂಘದ ಉಪಧ್ಯಕ್ಷರಾದ ಕೆ.ಎಸ್ ಹುಚ್ಚರಾಯಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ವೈದ್ಯನಾಥ, ಹಾಲಸ್ವಾಮಿ, ದೀಪಕ್ ಸಾಗರ್, ನಾಗೇಶ್ ನಾಯ್ಕ್, ತಾಲೂಕ್ ಅಧ್ಯಕ್ಷರಾದ ಚಂದ್ರಶೇಖರ ಮಠದ್, ಟ್ರಸ್ಟ್ ಅಧ್ಯಕ್ಷರಾದ ಬಸವರಾಜ್ ವೈಭವ್, ಹಿರಿಯ ಪತ್ರಕರ್ತರಾದ ವೇಣುಗೋಪಾಲ್,ಮಾಜಿ ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ರಾಜು ಬಿ ಎಲ್ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!