ಕಾಂಗ್ರೆಸ್‌ಗೆ ಸೆರಲಿದ್ದಾರಾ ಮಾಜಿ ಶಾಸಕ ಕುಮಾರ್ ಬಂಗಾರಪ್ಪ…??

ಕಾಂಗ್ರೆಸ್‌ಗೆ ಸೆರಲಿದ್ದಾರಾ ಮಾಜಿ ಶಾಸಕ ಕುಮಾರ್ ಬಂಗಾರಪ್ಪ…??

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಜೇಷ್ಠ ಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರಾ..? ಸೊರಬದಲ್ಲಿ ಸೊತ ಬೆನ್ನಲ್ಲೇ ಶಿವಮೊಗ್ಗ ರಾಜಕೀಯದಲ್ಲಿ ಬೃಹತ್ ಚರ್ಚೆ ಬಂದಿದ್ದು ಶಿವಮೊಗ್ಗ ರಾಜಕೀಯದಲ್ಲಿ ಬೃಹತ್ ಬದಲಾವಣೆ ಸೂಚನೆ ಸಿಕ್ಕಿದೆ.

ಕುಮಾರ್ ಬಂಗಾರಪ್ಪರನ್ನು ಕಾಂಗ್ರೆಸ್ ಗೆ ತರಲು ಕಾಗೋಡು ತಿಮ್ಮಪ್ಪ ಮುಂದಾಗಿದ್ದು ಕಾಗೋಡು ಮಾತಿಗೆ ಒಪ್ಪಿಕೊಳ್ಳುತ್ತಾರಾ ಕುಮಾರ್ ಬಂಗಾರಪ್ಪ.?
ಎನ್ನುವ ಪ್ರಶ್ನೆ ಕಾಡುತ್ತಿದೆ.

ಕೃಷ್ಣ ನಂತೆ ಸಾರಥಿಯಾಗಿ ಕುಮಾರ್ ಬಂಗಾರಪ್ಪರನ್ನು ಕರೆತರುವಲ್ಲಿ ಕಾಗೋಡು‌ ತೀಮ್ಮಪ್ಪ ಯಶಸ್ಸಿಯಾಗುತ್ತಾರಾ..? ಈ ರೀತಿ ಹತ್ತು‌ ಹಲವಾರು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಸವಾಗಿದೆ.

ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ‌ಸಮಿಪಿಸುತ್ತಿದ್ದು ಮುಂದಿನ ಎಂಪಿ ಚುನಾವಣೆಯಲ್ಲಿ ಕೈ ಹಿಡಿಯಲಿದ್ದಾರ ಸಹೋದರ ಸವಾಲ್ ಅಂತ್ಯ ಆಗತ್ತಾ ಈ ನಿಲುವಿನಿಂದ ಮುಧು ಬಂಗಾರಪ್ಪ ಕುಮಾರ್ ಬಂಗಾರಪ್ಪ ಒಂದುಮಾಡಲು ಮುಂದಾಗಿದ್ದಾರಾ ಕಾಗೋಡು ತಿಮ್ಮಪ್ಪ ಎಂದು ಅನೇಕ‌ ಪ್ರಶ್ನೆಗಳು ಕಾಂಗ್ರೆಸ್ ಚರ್ಚೆಯಾಗಿದೆ ಬಂಗಾರಪ್ಪನವರ ಶಿಷ್ಯ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ ಇದೆ ಸಮರ್ಥ ಲೋಕಸಭಾ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಯುತ್ತಿದ್ದು
ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕುಮಾರ್ ಬಂಗಾರಪ್ಪ ಅನಿವಾರ್ಯ ಎನ್ನಲಾಗಿದೆ.

ಶಿವಮೊಗ್ಗ ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆ ಆಗಿತ್ತು.ಆದರೆ ಈಗ ಕಡಿಮೆ‌ ಆಗಿದ್ದು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಶಕ್ತಿಯನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿದೆ. ಹೀಗಾಗಿ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿರುವ ಕಾಂಗ್ರೆಸ್ ಗೆ ಕುಮಾರ್ ಬಂಗಾರಪ್ಪಗೆ ಮಣೆ ಹಾಕುತ್ತಿದ್ದು ಕುಮಾರ್ ಬಂಗಾರಪ್ಪಗೂ ಕೂಡ ರಾಜಕೀಯ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ.

ಸೊರಬದಲ್ಲಿ 45 ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಸೋಲನ್ನು ಖಂಡಿತ ಕುಮಾರ್ ಬಂಗಾರಪ್ಪ.
ಕುಮಾರ್ ಬಂಗಾರಪ್ಪಗೆ ಸೊರಬ ಬಿಟ್ಟು ಬೇರೆ ಕಡೆಗೆ ಅವಕಾಶ ಕಡಿಮೆ. ಕಾಂಗ್ರೆಸ್ ಎಂಪಿ ಟಿಕೆಟ್ ಭರವಸೆ ನೀಡಿದರೆ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಗೆ ಸೇರ್ಪಡೆ ಆಗುವ ಸಾಧ್ಯತೆ ಇದೆ.

Special Story: Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!