ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆಗೆ ಚಾಲನೆ..!
ಶಿಕಾರಿಪುರ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಗೆ ತಹಶಿಲ್ದಾರ್ ಶಂಕರಪ್ಪ ಚಾಲನೆ ನೀಡಿದರು.
ಈ ವೇಳೆ ಶಿಕಾರಿಪುರದಿಂದ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಬಸ್ ಸಂಚಾರ ನಡೆಸುವ ಮೂಲಕ ಚಾಲನೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಗೋಣಿ ಮಾಲತೇಶ್,ನಗರದ ಮಹದೇವಪ್ಪ, ಪುರಸಭಾ ಸದಸ್ಯರಾದ ಮಹೇಶ್ ಹುಲ್ಮಾರ್ ,ದರ್ಶನ್ ಉಳ್ಳಿ ,ರೋಷನ್, ಜಯಶ್ರೀ ಕಮಲಮ್ಮ,ಕೆಎಸ್ ಆರ್ಟಿಸಿ ನಿಗಮದ ದೇವರಾಜ್,ರೇಣುಕಾನಂದ,ಇದ್ದರು.
ಕಾಂಗ್ರೇಸ್ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
News by: Raghu Shikari-7411515737