ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ರೂ.ಗೆ ಹರಾಜು

ಲಂಡನ್: ಭಾರತದಿಂದ ಪಲಾಯನಗೊಂಡಿರುವ ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ. ರೂ.ಗೆ ಮತ್ತೊಮ್ಮೆ ಹರಾಜಾಗಿದೆ.
ಟಿಪ್ಪು ಖಡ್ಗವನ್ನು ಮಂಗಳವಾರ ಲಂಡನ್ ನಲ್ಲಿ ಹರಾಜು ಮಾಡಲಾಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್ಹ್ಯಾಮ್ ಹರಾಜು ಸಂಸ್ಥೆ 145 ಕೋಟಿ ರೂ.ಗೆ ಖರೀದಿಸಿದೆ.

ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004 ರಲ್ಲಿ ವಿಜಯ್ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿ ಮಾಡಿದ್ದರು.
2016ರಲ್ಲಿ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್ ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲು ಕೋರಿದ್ದವು. ಅದೇ ಖಡ್ಗ ಇಂದು 145 ಕೋಟಿ ರೂ.ಗೆ ಮಾರಾಟವಾಗಿದೆ.
News- national news agecny