ಕಾರಣ ಇರದ ಕಾಯಿಲೆ “Migraine(ಪಿತ್ತದ ತಲೆನೋವು)” ಗೆ ಈ ಆಹಾರವೇ ಔಷಧ. . . !!

ಕಾರಣ ಇರದ ಕಾಯಿಲೆ “Migraine(ಪಿತ್ತದ ತಲೆನೋವು)” ಗೆ ಈ ಆಹಾರವೇ ಔಷಧ. . . !!

ಇದು ಆಯುರ್ವೇದದಲ್ಲಿ ಮಾತ್ರ ಹೇಳಿರುವ ಸತ್ಯ “ಅಜೀರ್ಣ, ಆಮ್ಲಪಿತ್ತಗಳನ್ನು ಸೂಕ್ತವಾಗಿ ನಿವಾರಿಸಿಕೊಂಡರೆ Migraine ತಲೆನೋವನ್ನು ತಡೆಯಬಹುದು ಮತ್ತು ಶಾಶ್ವತವಾಗಿ ಗುಣಪಡಿಸಬಹುದು”

ಇಲ್ಲಿ ಕಾಯಿಲೆಯ, ಕಾರಣ ತಿಳಿಯಬೇಕು ಮತ್ತು ಅವುಗಳನ್ನು ತಕ್ಷಣದಿಂದ ನಿಲ್ಲಿಸಬೇಕು. ಇದು ಮೊದಲ ಚಿಕಿತ್ಸೆ.

ನಂತರ, ಈ ಕಾಯಿಲೆಗೆ ನಿರ್ದಿಷ್ಟ ಆಹಾರವನ್ನು ಆಯುರ್ವೇದ ಆಚಾರ್ಯರು ಉಲ್ಲೇಖಿಸಿದ್ದಾರೆ. ಅವುಗಳನ್ನು ಪಾಲಿಸಬೇಕು…

ಮೈಗ್ರೇನ್‌ಗೆ ಕಾರಣವೇನು?:
ನಮ್ಮ ಕರುಳಿನಲ್ಲಿ, ಜೀರ್ಣಕ್ರಿಯೆಗೆಂದು ಸತತವಾಗಿ ಪಿತ್ತವು ಉತ್ಪತ್ತಿಯಾಗುತ್ತಿರುತ್ತದೆ. ಅದು ತನ್ನ ವಿಶೇಷ ಶಾಖ ಅಥವಾ ಶಕ್ತಿಯಿಂದ ಸೇವಿಸಿದ ಆಹಾರವನ್ನು ಶರೀರವನ್ನಾಗಿ ಬದಲಾಯಿಸುತ್ತದೆ. ಸೂರ್ಯನ‌ ಶಾಖದಿಂದ ನೀರು, ಗೊಬ್ಬರಗಳೇ ಧಾನ್ಯಗಳಾದಂತೆ ನಮ್ಮ ಶರೀರವೂ ಆಹಾರದ ಪರಿವರ್ತಿತ ರೂಪ…

ಮೈಗ್ರೇನ್ ಕಾಯಿಲೆ ಬರುವ ವಿಧಾನಗಳು 2, ಅವುಗಳೆಂದರೆ –

1) ಪಿತ್ತದ ಈ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ನಮ್ಮ ಜಠರ ಮತ್ತು ಕರುಳುಗಳಿಗೆ ಇರುತ್ತದೆ. ನಮ್ಮ ಆಹಾರ-ವಿಹಾರಗಳ ತಪ್ಪಿನಿಂದ ಕರುಳಿನ ಈ ಸಾಮರ್ಥ ಕ್ಷೀಣವಾದಾಗ, ಪಿತ್ತ ಅತಿಯಾಗಿ ವರ್ಧಿಸುತ್ತದೆ ಮತ್ತು ಈ ಪಿತ್ತವು ತನ್ನ ಉಷ್ಣಗುಣದಿಂದ ಕರುಳುಗಳನ್ನು ಕರಗಿಸಿ ಅಲ್ಸರ್(ಹುಣ್ಣುಗಳು) ಮಾಡುವಷ್ಟು ಬಲಶಾಲಿಯಾಗಿರುತ್ತದೆ. ಈ ವಿಕಾರವನ್ನು ತಡೆಯಲು, ಮೆದುಳು ತಲೆನೋವಿನೊಂದಿಗೆ ವಾಂತಿ ತರಿಸುವ ಮೂಲಕ ಆ ತೀಕ್ಷ್ಣ ಪಿತ್ತವನ್ನು ಹೊರಹಾಕಿ ನಮ್ಮ ಕರುಳುಗಳನ್ನು ರಕ್ಷಿಸುತ್ತದೆ. ಇದೇ ಎಲ್ಲರನ್ನೂ ಕಾಡುವ ಸಾಮಾನ್ಯವಾದ ಮೈಗ್ರೇನ್!

ಸೂಕ್ಷ್ಮವಾಗಿ ಗಮನಿಸಿ – ಈ ಸಂದರ್ಭದಲ್ಲಿ, ವಾಂತಿ ತಡೆಯುವ ಮಾತ್ರೆಗಳನ್ನು ಸೇವಿಸಿದರೆ ಕರುಳುಗಳು ಏನಾಗುತ್ತವೆ ಯೋಚಿಸಿ?! ಮತ್ತು ನೋವು ನಿವಾರಕಗಳನ್ನು ಸೇವಿಸಿ, ಇನ್ನೊಂದಷ್ಟು ಪಿತ್ತವನ್ನು ಹೆಚ್ಚಿಸಿಕೊಂಡರೆ ಏನಾಗುತ್ತದೆ ಯೋಚಿಸಿ?!

ಇದು ಚಿಕಿತ್ಸೆಯ ಹೆಸರಿನಲ್ಲಿ ನಾವು ಮಾಡುತ್ತಿರುವ ಅನಾಹುತ!!

ಇನ್ನು ಹಲವರು ಕಾಫೀ-ಚಹಾಗಳ ಮೊರೆ ಹೋಗುತ್ತಾರೆ, ಕೆಫೇನ್ ಇರುವ ಮಾತ್ರೆಗಳ ಮೊರೆ ಹೋಗುತ್ತಾರೆ. ಇದು ನೋವನ್ನು ಈ ಕ್ಷಣಕ್ಕೆ ತಡೆದಂತೆ ಕಂಡರೂ, ಕಾಫೀ-ಟೀ, ಮಾತ್ರೆಗಳ ನಂತರ ಅತೀವ ಸುಸ್ತು ಕಾಡುವುದಲ್ಲ ಏಕೆ? ಕೆಫೇನ್ ಎಂಬ ರಾಸಾಯನಿಕವು ಉತ್ತೇಜಕವಾಗಿದ್ದು, ಅದು ನಮ್ಮ ಮೂಳೆಯೊಳಗಿ‌ನ ಸಾರ ಶಕ್ತಿಯನ್ನು ಹೀರಿ ನೋವನ್ನು ನಿಯಂತ್ರಿಸುತ್ತದೆ, ಮೂಳೆಗಳನ್ನು ದುರ್ಬಲಗೊಳಿಸುವ ಕಾರಣ ಸುಸ್ತು ಕಾಡುತ್ತದೆ. ಇದು ಹೇಗೆಂದರೆ ಅಸ್ತಮಾ ಆಘಾತಕ್ಕೆ ಬಾಯಿಯಿಂದ ಎಳೆದುಕೊಳ್ಳುವ ಸ್ಟಿರಾಯ್ಡ್ ಧೂಮ ಸೇವಿಸಿದ ತಕ್ಷಣ ಸುಸ್ತು ಆಗುವಂತೆ ಇದೂ ಸಹ ಆಗುತ್ತದೆ, ಆದರೆ ಪ್ರಮಾಣದಲ್ಲಿ ಸ್ವಲ್ಪ ಕಡಿಮೆ ಅಷ್ಟೇ…

2) ಇನ್ನೊಂದು ಕಾರಣ ಎಂದರೆ, ಮಾನವನ ಮನಸ್ಸು – ಇಲ್ಲಿ ಮನುಷ್ಯ ಚಿಂತೆ, ಭಯ, ದ್ವೇಷ, ಕ್ರೋಧ, ನಿದ್ರಾಹಾನಿ, ಉಪವಾಸ ಇವುಗಳಿಂದ ಬಳಲಿದಾಗ ಶರೀರದಲ್ಲಿ ಶಕ್ತಿಹ್ರಾಸತೆ ಮತ್ತು ವಾತ-ಪಿತ್ತಗಳ ಪ್ರಭಾವ ವರ್ಧನೆ ಒಟ್ಟೊಟ್ಟಿಗೇ ಆಗುತ್ತದೆ. “ಕಾಮ-ಶೋಕ-ಭಯಾತ್ ವಾಯುಃ”
ಮತ್ತು
“ಕ್ರೋಧಾತ್ ಪಿತ್ತಮ್” ಎನ್ನುತ್ತಾರೆ ಆಚಾರ್ಯರು.

ಇವುಗಳ ಕಾರಣದಿಂದ ಪಿತ್ತ ಹೆಚ್ಚಿ, ವಾಯುವಿನಿಂದ ತೀಕ್ಷ್ಣತೆ ಪಡೆದು ಕರುಳನ್ನು ಕೊರೆಯುವಂತೆ ಬಲಶಾಲಿಯಾಗುತ್ತದೆ. ಇದರ ಸುಳಿವು ಸಿಕ್ಕ ತಕ್ಷಣ ಮೆದುಳು ತಲೆನೋವಿನಿಂದಿಗೆ ವಾಂತಿಯನ್ನು ತಂದು ಮುಂಬರುವ ಅಪಾಯವನ್ನು ತಪ್ಪಿಸುತ್ತದೆ!

ಈಗ ಹೇಳಿ, ನಮ್ಮ ಚಿಂತೆ, ಸಿಟ್ಟು, ದ್ವೇಷ ಮುಂತಾದವುಗಳು ನಮ್ಮನ್ನಲ್ಲದೇ ಹೊರಗಿನವರನ್ನು ಸುಡುತ್ತವೆಯೇ?

ಮೈಗ್ರೇನ್ ಉಂಟುಮಾಡುವ ಆಹಾರ-ವಿಹಾರಗಳು:

• ಚಹಾ-ಕಾಫೀ
• ನೀರಿನ ಅಂಶ ಕಡಿಮೆ‌ ಇರುವ ‘ಕರಿದ ಪದಾರ್ಥಗಳು’ ‘ವಗ್ಗರಣೆ ಅನ್ನಗಳು’ ‘ಪಾನಿಪುರಿ’ ‘ಗೋಬಿ’ ‘ಬಿಸ್ಕೆಟ್-ಬ್ರೆಡ್’ ‘ಬನ್‌’ಗಳು!
• ಹುಳಿ ಪದಾರ್ಥಗಳು
• ಮೇಲುಪ್ಪು ಸೇವನೆ
• ಮೆಣಸಿನಕಾಯಿ ಚಟ್ನಿ!
• ನಿದ್ದೆ ಕೆಡುವುದು
• ಚಿಂತೆ ಮಾಡುವುದು
• ಸಿಟ್ಟು ಮಾಡುವುದು
• ಸದಾ ಕಾಮಾತುರತೆ
• ತೀಕ್ಷ್ಣ ಬಿಸಿಲಲ್ಲಿ ಹೋಗುವುದು
• ಶಕ್ತಿ ಕಳೆದುಕೊಂಡು, ದುಸ್ಸಾಹಸದ ಕೆಲಸಗಳನ್ನು ಮಾಡಲು ಹೋಗುವುದು…

ಮೈಗ್ರೇನ್‌ ನಿವಾರಿಸುವ ಆಹಾರ-ವಿಹಾರ:

ಆಹಾರವು ಹೆಚ್ಚಿನ ಪ್ರಮಾಣದ ನೀರಿನಲ್ಲಿ ಬೆಂದು ತಯಾರಾಗಿರಬೇಕು.‌ ಇದರಿಂದ ಆಹಾರದಲ್ಲಿನ ಶಕ್ತಿ, ಈ ಶರೀರದಲ್ಲಿ ದ್ರವರೂಪದಲ್ಲಿ ಸುಲಭವಾಗಿ ಸಂಚರಿಸುತ್ತದೆ ಮತ್ತು ಜೀವಕೋಶಗಳನ್ನು ಸುಲಭವಾಗಿ ಪೋಷಿಸುತ್ತದೆ.

ಅತಿಯಾಗಿ ನೀರನ್ನು ಬಯಸುವ ಆಹಾರಗಳು ಬೇಡ. ಏಕೆಂದರೆ, ಅಲ್ಲಿ ಜೀವಕೋಶಗಳು ಮತ್ತಷ್ಟು ಒಣಗಿ ತಕ್ಷಣ ಮೈಗ್ರೇನ್ ತರುತ್ತವೆ. ಹಾಗೆಯೇ, ನೀರು ಕ್ಷೀಣಿಸುವ ಬಿಸಿಲು, ಗಾಳಿ, ಅನಿದ್ರೆ, ಚಿಂತಾದಿಗಳಿಂದ ದೂರ ಇರಬೇಕು.

ಮೈಗ್ರೇನ್ ಶಿರಶೂಲೆಯ ಚಿಕಿತ್ಸೆ:
ಚಿಕಿತ್ಸೆ ಅತ್ಯಂತ ಸರಳವಾಗಿದೆ. ಲಕ್ಷಣ‌ದಿಂದ ಬಿಡುಗಡೆಯಾಗಲು, ಒಂದು ವಾರ ಸಾಕು. ಮರುಕಳಿಸದಂತೆ ಚಿಕಿತ್ಸೆ ಮಾಡಲು 120 ದಿನಗಳ ಆಯುರ್ವೇದ ಚಿಕಿತ್ಸೆ ಬೇಕು. ಇದಕ್ಕಾಗಿ ಶುದ್ಧ ಆಯುರ್ವೇದ ವೈದ್ಯರನ್ನು ಕಾಣಿರಿ…

ವಿ.ಸೂಚನೆ:
ಡಾಕ್ಟರೇ, ಆಹಾರ ಪಥ್ಯ ನಂತರ ಮತ್ತೆ ಯಾವಾಗ ಅಪಥ್ಯ ಆಹಾರಗಳನ್ನು ಸೇವಿಸಬಹುದು?!!! ಎಂದು ಪ್ರಶ್ನಿಸುವ ಮೊದಲು, ಒಂದು ವಿಷಯ ತಿಳಿಯಿರಿ – ಇದು ಮೈಗ್ರೇನ್ ಅಷ್ಟೇ ಅಲ್ಲ, ಸರ್ವ ಪಿತ್ತದ ರೋಗಗಳ ಮೂಲ, ಯಕೃತ್, ಪ್ಯಾಂಕ್ರಿಯಾಸ್, ಕಿಡ್ನಿಗಳನ್ನು ಮುಂದೊಮ್ಮೆ ಹೃದಯ, ಮೆದುಳುಗಳನ್ನು ರಕ್ಷಿಸಿಕೊಳ್ಳಬೇಕೆಂದು ಇಚ್ಛೆ ಉಳ್ಳವರು, ಹಬ್ಬ ಮತ್ತು ವಿಶೇಷ ದಿನಗಳ ಹೊರತು ಎಂದೂ ಅಪಥ್ಯ ಆಹಾರಗಳನ್ನು ನಿತ್ಯದ ರೂಢಿಗೆ ತಂದುಕೊಳ್ಳಬಾರದು…

ಈ ಎಲ್ಲಾ ಕಾರಣಗಳಿಂದ ಆಹಾರದಿಂದ ಗುಣಪಡಿಸಬಹುದಾದ ಸಂಗತಿಗಳನ್ನು ಹಂಚಿಕೊಳ್ಳ ಬಯಸಿ “ಆಹಾರವೇ ಔಷಧ” ಎಂಬ ಶೀರ್ಷಿಕೆಯ ಮಾಲಿಕೆಯನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ…

ಆಚಾರ್ಯರ ಈ ರೋಗನಿದಾನಗಳು, (ಕಾಯಿಲೆಯ ಕಾರಣಗಳು) ಸರ್ವಕಾಲಕ್ಕೂ ಪ್ರಸ್ತುತವಾದ ಸತ್ಯಸಂಗತಿಗಳು, ಆದ್ದರಿಂದ ದಯಮಾಡಿ ಸಂಗ್ರಹಿಸಿಟ್ಟು, ಬಳಸಿಕೊಳ್ಳಿ…

~ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research, Shimoga | Davanagere |

Admin

Leave a Reply

Your email address will not be published. Required fields are marked *

error: Content is protected !!