ಪುಲ್ವಾಮಾ ದಾಳಿಯ ಸೈನಿಕರ ಸಾವನ್ನು ಸಂಭ್ರಮಿಸಿದ್ದ ವಿದ್ಯಾರ್ಥಿಗೆ ಐದು ವರ್ಷ ಜೈಲು,25 ಸಾವಿರ ರೂ. ದಂಡ.
ಬೆಂಗಳೂರು : 2019 ರಲ್ಲಿ ಕಾಶ್ಮೀರದ ಪುಲ್ವಾಮಾ ಬಳಿ ಸೈನಿಕರ ಮೇಲೆ ಭೀಕರ ಬಾಂಬ್ ದಾಳಿಯಾಗಿತ್ತು, ಫೇಸ್‌ಬುಕ್‌ನಲ್ಲಿ ಸಂಭ್ರಮಿಸಿದ್ದ ಬೆಂಗಳೂರಿನ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಫಯಾಜ್ ರಶೀದ್ ನನ್ನು ಎನ್‌ಐಎ ವಿಶೇಷ ಕೋರ್ಟ್ ದೋಷಿ ಎಂದು ಪರಿಗಣಿಸಿ , 5 ವರ್ಷ ಸಾದಾ ಶಿಕ್ಷೆ ಮತ್ತು 25,000 ರೂ . ದಂಡವನ್ನು ವಿಧಿಸಿದೆ .
ಈ ಶಿಕ್ಷೆಯನ್ನು ಯಾವುದೇ ರೀತಿಯಲ್ಲಾದರೂ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿಯಾಗಿ ಮತ್ತೆ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುಬೇಕಾಗುತ್ತದೆ ಎಂದು ಎನ್‌ಐನ ವಿಶೇಷ ನ್ಯಾಯಾಲಯದ ಜಡ್ ಸಿ ಎಂ ಗಂಗಾಧರ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ .
2019 ಫೆಬ್ರವರಿ 14 ರಂದು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ಸಿಆರ್‌ಪಿಎಫ್ ವಾಹನಗಳ ಸಾಲಿನಲ್ಲಿ ಸ್ಫೋಟಿಸಿದ್ದರು . ಈ ಘಟನೆಯಲ್ಲಿ 40 ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದರು . ಪುಲ್ವಾಮ ಘಟನೆಯಾದ ಬಳಿಕ ಮೂರು ದಿನಗಳ ಬಳಿಕ ಬೆಂಗಳೂರು ಪೊಲೀಸರು , ಈಗ ಶಿಕ್ಷೆಗೆ ಗುರಿಯಾಗಿರುವ ವಿದ್ಯಾರ್ಥಿಯನ್ನು ಬಂಧಿಸಿದ್ದರು . ಪುಲ್ವಾಮಾ ಘಟನೆಗೆ ಫೇಸ್‌ಬುಕ್‌ನಲ್ಲಿ ಈ ಆರೋಪಿ ಸಂಭ್ರಮ ವ್ಯಕ್ತಪಡಿಸಿದ್ದ ಆದ್ದರಿಂದ ವಿದ್ಯಾರ್ಥಿ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು .
News by Naveen Yuva -7411515737