ಆರೋಗ್ಯದ ವಿಷಯದಲ್ಲಿ ಮನಸ್ಸಿನ ಪಾತ್ರ
ಸಂಜೆ ಮುಗಿದು ಕತ್ತಲು ಆವರಿಸುತ್ತಿದೆ, ನೀವು ಒಂದೆಡೆ ನಿಂತಿದ್ದೀರಿ, ಏನೋ ನೆನಪಾಗಿ ಒಂದು ಹೆಜ್ಜೆ ಇಟ್ಟು ಮನೆಯ ಒಳಗೆ ಹೊರಡಲು ಹೆಜ್ಜೆ ಇಟ್ಟರೆ, ಕರೀ ನಾಗರ ಹಾವು ಕಂಡಿತು. ತಕ್ಷಣ ಅಡ್ರಿನ್ಯಾಲಿನ್ ಹಾರ್ಮೋನ್ ಉತ್ಪತ್ತಿಯಾಗಿ ತಕ್ಷಣಕ್ಕೆ, ಹಿಂದಕ್ಕೆ ಜಿಗಿಯುತ್ತೇವೆ, ಹೃದಯಬಡಿತ ತೀವ್ರವಾಗಿ ಏರುತ್ತದೆ. ಮೊಬೈಲ್ ಬೆಳಕು ಬಳಸಿ ನೋಡಿದರೆ, ಅದೊಂದು ಬೈಸಿಕಲ್ ಗಾಲಿಯ ಟ್ಯೂಬ್!!!
ಒಂದು ವೇಳೆ ನೀವು ಕಣ್ಮುಚ್ಚಿ ಕೂತಿದ್ದರೆ, ನಿಮ್ಮ ಮುಂದೆ ಅಥವಾ ಪಕ್ಕಕ್ಕೆ ಕಾಳಿಂಗ ಸರ್ಪ ಹೋದರೂ ನಿಮಗೆ ಗಾಭರಿ ಆಗದು, ಅಡ್ರಿನಾಲಿನ್ ಉತ್ಪತ್ತಿಯಾಗಿ ಹೃದಯ ಬಡಿತ ಏರದು, ಮಾಂಸಖಂಡಗಳು ಬಿಗಿಗೊಳ್ಳುವುದಿಲ್ಲ.
ಬಸ್ ಪ್ರಯಾಣದಲ್ಲಿ ನಿಮ್ಮ ಪಕ್ಕದಲ್ಲಿ ಕುಳಿತ ಒಬ್ಬರಿಗ ವಾಂತಿ ಆದರೆ, ನಿಮಗೆ ವಾಂತಿ ಬಂದಂತಾಗುತ್ತದೆ ಅಲ್ಲವೇ? ಇಲ್ಲಿ ನಿಮಗೆ ಕಾಯಿಲೆ ಏನೂ ಇಲ್ಲ ಆದರೂ ವಾಂತಿಯಾಗುತ್ತದೆ ಅಥವಾ ಉತ್‌ಕ್ಲೇಶ( ಬಂದಂತೆ ಆಗುತ್ತದೆ, ಬಾಯಲ್ಲಿ ನೀರು ಬರುತ್ತದೆ) ಆಗುತ್ತದೆ ಏಕೆ?
ಮಾಸಿಕ ಋತುಸ್ರಾವದ ಸಮಯ ಗಮನಿಸಿ ನೋಡಿ, ಮನೋಒತ್ತಡ ಇದ್ದರೆ ಋತುಸ್ರಾವ ಮುಂದಕ್ಕೆ ಹೋಗುತ್ತದೆ, ಇಲ್ಲವೇ ಬಹು ಬೇಗ ಆಗುತ್ತದೆ.
ಒಟ್ಟಾರೆ,
ಮನಸ್ಸು ಶರೀರದ ಸರ್ವಸ್ವವನ್ನೂ ನಿಯಂತ್ರಿಸುವ ಶಕ್ತಿಯಾಗಿದೆ.
ಹಾಗಾಗಿ,
ಅತ್ಯಗತ್ಯ ಇದ್ದರೂ ಅಥವಾ ಇಲ್ಲದಿದ್ದರೂ ವಿಷಯವನ್ನು ಸ್ವೀಕರಿಸಿ, ಅದಕ್ಕೆ ಪ್ರತಿಕ್ರಿಯೆ ತೋರಿದ ಮನಸ್ಥಿತಿಯಿಂದ ಶರೀರದ ಸರ್ವಸ್ವವೂ ಅಲುಗಾಡುತ್ತದೆ.
ಒಂದೊಮ್ಮೆ ಈಗಾಗಲೇ ಕಾಯಿಲೆ ಇದ್ದರೆ, ಅದು ಉಲ್ಬಣಗೊಳ್ಳುತ್ತದೆ. ಇಲ್ಲದಿದ್ದರೆ ಹೊಸದಾಗಿ ಕಾಯಿಲೆಗಳು ಬರುತ್ತವೆ.
News by Raghu Shikari-7411515737