ಶಿಕಾರಿಪುರ:ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ತಾ.ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ತಾಲ್ಲೂಕು ಕಛೇರಿ ಎದುರು ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೆ ಎಸ್ ಹುಚ್ರಾಯಪ್ಪ ಮಾತನಾಡಿ, ಸಾಗರ ತಾಲೂಕಿನ ಹೊಸದಿಗಂತ ಪತ್ರಿಕೆಯ ವರದಿಗಾರರಾದ ಬಿ ಡಿ ರವಿಕುಮಾರ್ ಹೊಸಕೊಪ್ಪ ಗ್ರಾಮಕ್ಕೆ ರಸ್ತೆ ಮತ್ತು ಕಿರು ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಗಮನ ಸೆಳೆಯಲು ವರದಿ ಮಾಡಲು ಹೋಗಿದ ಸಂದರ್ಭದಲ್ಲಿ ಕಲ್ಲುಕೋರೆ ನಡೆಸುತ್ತಿರುವ ಬಸವರಾಜ ಎಂಬ ವ್ಯಕ್ತಿಯು ಕಲ್ಲುಕೋರೆಗೆ ತೊಂದರೆ ಮಾಡುತ್ತೀಯ ಎಂದು ಹಲ್ಲೆ ಮಾಡಿರುತ್ತಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗವೂ ನಾಲ್ಕನೇ ಅಂಗವಾಗಿ ಕೆಲಸಮಾಡುತ್ತಿದೆ ಪತ್ರಕರ್ತರು ನಿರ್ಭಿತಿಯಿಂದ ವರದಿಗಾರಿಕೆ ಮಾಡಲು ಅಡ್ಡಿಪಡಿಸುವ ಕೆಲಸಮಾಡುವ ಸಮಾಜಘಾತಕ ಶಕ್ತಿಗಳು ನಿರಂತರವಾಗಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿಕೊಂಡು ಬರುತ್ತಿದೆ ಪತ್ರಕರ್ತರ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕ್ ಅಧ್ಯಕ್ಷ ಚಂದ್ರಶೇಖರ್ ಮಠದ್, ಕಾರ್ಯದರ್ಶಿ ಬಿ ಎಲ್ ರಾಜಪ್ಪ, ಟ್ರಸ್ಟ್ ಅಧ್ಯಕ್ಷ ಇ ಹೆಚ್ ಬಸವರಾಜ್, ಮಾಜಿ ಅಧ್ಯಕ್ಷ ಎಸ್ ಬಿ ಅರುಣ್ ಕುಮಾರ್, ಸದಸ್ಯರಾದ ಹೆಚ್ ಎಸ್ ರಘು, ಹೆಚ್ ಕೆ ಪ್ರಕಾಶ್, ಕಾಳಿಂಗ ರಾವ್, ಪ್ರಕಾಶ್, ರಘು ಶಿಕಾರಿ, ಮಂಜುನಾಥ್ ಮಠದ್ ರಾಜಾರಾವ್ ಎಂ ಜಾಧವ್ ಇದ್ದರು.
News by: Raghu Shikari-7411515737