ಕುಂಚಿಟಿಗರ ಸಮಾಜದ ವತಿಯಿಂದ ಕುಂಚಿಟಿಗರ ಬೃಹತ್ ಸಮಾವೇಶ: ಮಾಜಿ ಸಿಂ.ಎಂ ಯಡಿಯೂರಪ್ಪ ಭಾಗಿ
ಶಿಕಾರಿಪುರ ತಾಲೂಕು ಕುಂಚಿಟಿಗರ ಸಮಾಜದ ವತಿಯಿಂದ ನಗರದ ಸಾಂಸ್ಕೃತಿಕ ಭವನದಲ್ಲಿ ಕೇಂದ್ರ ಓಬಿಸಿ ಮೀಸಲಾತಿ ಹಕ್ಕುತಾಯ ವಿಚಾರವಾಗಿ ಕುಂಚಿಟಿಗರ ಬೃಹತ್ ಸಮಾವೇಶ ಇಂದು ನಡೆಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಜಾತಿ ಮತದ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ ಸಿಎಂ ಆಗಿ ರೈತ ದೀನದಲಿತರ ಕೆಲಸ ಮಾಡಿರುತ್ತೇನೆ ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ ಮಾತು ಸಾಧನೆ ಆಗದೆ ಸಾಧನೆ ಮಾತಾಗಬೇಕು ಎನ್ನುವುದು ನನ್ನ ಅಭಿಪ್ರಾಯ, ಭರವಸೆ ನೀಡುತ್ತೇನೆ ಬಹಳ ವರ್ಷದ ಕನಸು ಸಹಕಾರಕ್ಕೆ ಪ್ರಾಮಾಣಿಕ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ ವೈ ರಾಘವೇಂದ್ರ,ಮಾಜಿ ಸಚಿವ ಟಿಬಿ ಜಯಚಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಕುಂಚಿಟಿಗ ಸಮಾಜದ ತಾಲೂಕು ಅಧ್ಯಕ್ಷ ರುದ್ರಪ್ಪ, ಶಾಸಕ ರಾಜೇಗೌಡ ಕೌಶಲ್ಯ ನಿಗಮದ ಅಧ್ಯಕ್ಷ ಮುರಳಿದರ, ವೀರಭದ್ರಯ್ಯ ಮತ್ತು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
News by Raghu Shikari -7411515737