ಮಂಜುನಾಥ್ ಭಂಡಾರಿ ಜನ್ಮದಿನದ ಪ್ರಯಕ್ತ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ಮಂಜುನಾಥ್ ಭಂಡಾರಿ ಜನ್ಮದಿನದ ಪ್ರಯಕ್ತ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

ಶಿಕಾರಿಪುರ: ವಿಧಾನಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ 60ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು ಹಾಗು ಸಿಹಿ  ವಿತರಣೆ.

ತಾಲ್ಲೂಕಿನ ಅರಶಿಣಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ, ಪೆನ್ನು ಹಾಗು ಸಿಹಿ ವಿತರಿಸಿ ಮಾತನಾಡಿದ ಉಳ್ಳಿ ಫೌಂಡೇಶನ್ ನ ಅದ್ಯಕ್ಷರಾದ ಉಳ್ಳಿ ದರ್ಶನ್ ರವರು, ಶಿಕ್ಷಣ ತಜ್ಞರು, ಯುವಕರ ಕಣ್ಮಣಿ, ಕೆಪಿಸಿಸಿ ಉಪಾದ್ಯಕ್ಷರು,ವಿಧಾನಪರಿಷತ್ ಶಾಸಕರಾದ ಡಾ.ಮಂಜುನಾಥ್ ಭಂಡಾರಿಯವರ 60ನೇ ವರ್ಷದ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗಿದೆ.

ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗಬೇಕೆಂದರೆ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿ ಎಂಬ ಮಹಾತ್ಮಾ ಗಾಂಧೀಜಿಯವರ ಮಾತಿನಂತೆ ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸಣ್ಣ ಸಹಾಯ ಮಾಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಉತ್ತಮ ವಿದ್ಯಾಭ್ಯಾಸ ಮಾಡಿ ಊರಿಗೆ ಹಾಗು ತಂದೆ ತಾಯಿಗೆ ಉತ್ತಮ ಹೆಸರು ತರಬೇಕಾಗಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅದ್ಯಕ್ಷರಾದ ಪರಶುರಾಮ, ರಹಮತ್, ದಯಾನಂದ್, ಸುರೇಶ್ ಕಲ್ಮನೆ, ದೇವೆಂದ್ರಪ್ಪ, ಬಾಬಣ್ಣ, ಜಗದೀಶ್, ರಾಜಣ್ಣ, ಸುವರ್ಣಮ್ಮ, ಸಂತೋಷ, ಗಣೇಶ್, ಸುಹಾಸ್, ಶಶಾಂಕ್ ಕಾಗಿನಲ್ಲಿ,  ರಾಜು ಕೆಂಗಟ್ಟಿ ಹಾಗು ಮುಂತಾದ ಮುಖಂಡರು, ಗ್ರಾಮಸ್ಥರು ಇದ್ದರು.

News By Raghu Shikari -7411515737

Admin

Leave a Reply

Your email address will not be published. Required fields are marked *

error: Content is protected !!