ಹುಳುಕು ಹಲ್ಲು..!
ಕೇವಲ ಸಿಹಿ ಪದಾರ್ಥ ಹಲ್ಲಿನ ಪದರಗಳಲ್ಲಿ ಸೇರಿಕೊಂಡು, ಕ್ರಿಮಿ ಬೆಳೆದು ಹುಳುಕಾಗಿವೆ ಎಂದುಕೊಂಡರೆ ಅದೊಂದು ಶುದ್ಧ ಸುಳ್ಳು!!
🔹 ವಾಸ್ತವವಾಗಿ ಆ್ಯಸಿಡ್ ಉತ್ಪತ್ತಿ ಹಲ್ಲನ್ನು ಹಾಳುಮಾಡುತ್ತದೆ 🔹
🦷 ಹಲ್ಲಿನ ಹೊರ ಪದರ “ಎನಾಮಲ್” ಮಾನವನ ಅಂಗಗಳಲ್ಲೇ ಅತ್ಯಂತ ಗಟ್ಟಿಯಾದ ವಸ್ತು, ಹಾಗಾಗಿ ನಾವು ಕಲ್ಲು ಕಡಿದರೆ ಹಲ್ಲು ಪುಡಿಯಾಗುವ ಬದಲು ಕಲ್ಲು ಪುಡಿಯಾಗುತ್ತದೆ.
ಈ ಎನಾಮಲ್ ಅನ್ನು ಆ್ಯಸಿಡ್ ಅಂಶ ನಿಧಾನವಾಗಿ ಕರಗಿಸುತ್ತದೆ, ಆಗ ಒಳಗಿನ ಮೆದುವಾದ ಅಂಶಗಳಾದ “ಡೆಂಟೈನ್” ಮತ್ತು “ಪಲ್ಪ್” ಪದರಗಳು ಸುಲಭವಾಗಿ ಕರಗುತ್ತವೆ ಮತ್ತು ಕ್ರಿಮಿಗಳಿಗೆ ಸ್ಥಳವನ್ನು ಕೊಡುತ್ತವೆ.
▪️ ಪರಿಹಾರ ಏನು?
“ಎನಾಮಲ್ ಅನ್ನು ದೃಢವಾಗಿಟ್ಟುಕೊಳ್ಳುವುದೊಂದೇ ಶಾಶ್ವತ ಪರಿಹಾರ”
▪️ ಎಷ್ಟೇ ಪ್ರಯತ್ನ ಪಟ್ಟರೂ ಹುಳುಕು ಹಲ್ಲು ಉತ್ಪತ್ತಿ ಏಕೆ ನಿಲ್ಲುತ್ತಿಲ್ಲ?:
• ಸಿಹಿ ತಿಂದು ಸ್ವಚ್ಛ ಮಾಡಿಕೊಳ್ಳದಿರುವ ಕಾರಣದಿಂದ.
• ನಾವು ಬಳಸುವ ಎಲ್ಲಾ ಟೂತ್‌ಪೇಸ್ಟ್ ಗಳೂ ಸ್ವಚ್ಛಮಾಡಲು ಅಸಮರ್ಥ!!!
• ಹರ್ಬಲ್ ನಾನ್ ಹರ್ಬಲ್ ಎಲ್ಲಾ ರೀತಿಯ ಟೂತ್‌ಪೇಸ್ಟ್ ಗಳಲ್ಲಿ ಸಿಹಿ ಅಂಶ ಇದ್ದೇ ಇರುತ್ತದೆ, ಇದರಿಂದ ಆ್ಯಸಿಡ್ ಉತ್ಪತ್ತಿಯಾಗುತ್ತದೆ.
ನೀವೇ ವಿಚಾರ ಮಾಡಿ ನೋಡಿ, ಸಿಹಿ ಪದಾರ್ಥವನ್ನು ಬಳಸಿ ಉಜ್ಜಿ ಯಾವುದಾದರೂ ಪಾತ್ರೆಯನ್ನು ಸ್ವಚ್ಛಗೊಳಿಸಲು ಸಾಧ್ಯವೇ?!!
ಟೂತ್‌ಪೇಸ್ಟ್ ಬಳಸಿ ನಿಜವಾಗಿಯೂ ಹಲ್ಲು ಸ್ವಚ್ಛಗೊಳಿಸಲು ಸಾಧ್ಯವೇ?!!
ಇಷ್ಟೆಲ್ಲಾ ಟೂತ್‌ಪೇಸ್ಟ್ ಗಳಿದ್ದೂ ಹುಳುಕು ಹಲ್ಲಿನ ಬಾಧೆ ಜಗತ್ತಿನ ಶೇ 90 ರಷ್ಟು ಜನರಿಗೆ ಇದೆ ಎನ್ನುವುದು ಎಷ್ಟು ಹಾಸ್ಯಾಸ್ಪದ ಅಲ್ಲವೇ?!!
• ಆಹಾರದ ನಂತರ ಒಗರು ಪದಾರ್ಥಗಳಿಂದ ಬಾಯಿ ಸ್ವಚ್ಛ ಮಾಡಿಕೊಳ್ಳದಿರುವುದರಿಂದ.
• ಆ್ಯಸಿಡಿಟಿ, ಗ್ಯಾಸ್ಟ್ರೈಟೀಸ್ ಗಳನ್ನು ಆಹಾರ ಪಾಲನೆಯಿಂದ ಸರಿಪಡಿಸಿಕೊಳ್ಳುವ ಬದಲು ಮಾತ್ರಗಳಿಂದ ನಿಯಂತ್ರಿಸುತ್ತಿರುವುದರಿಂದ
• ಉದರದೊಳಗೆ ಪ್ರವೇಶಿಸಿದ ನಂತರ ಜೀರ್ಣವಾಗಲು ಆ್ಯಸಿಡ್ ಬಿಡುಗಡೆಮಾಡಿಕೊಳ್ಳುವ ಗೋಧಿ, ಉದ್ದು, ಮೈದಾಗಳನ್ನು ಯಥೇಚ್ಛವಾಗಿ ನಿತ್ಯವೂ ಬಳಸುತ್ತಿರುವುದರಿಂದ.
• ಅಕಾಲದಲ್ಲಿ ಆಹಾರ ಸೇವನೆಮಾಡಿ ಆ್ಯಸಿಡಿಟಿ ಹೆಚ್ಚಿಸಿಕೊಳ್ಳುವುದರಿಂದ (ಆಹಾರ ಜೀರ್ಣವಾಗಲು ಬೇಕಾಗುವ ಎಂಜೈಮ್ ಗಳು ಉತ್ಪತ್ತಿಯಾದ ಕಾಲದಲ್ಲಿ, ಅಂದರೆ, ಮಧ್ಯರಾತ್ರಿ ಆಹಾರ ಸೇವನೆ.)
• ಬಹಳ ಸಮಯದವರೆಗೆ ಚಾಕಲೇಟ್ ನಂತಹ ಸಿಹಿ ಪದಾರ್ಥಗಳನ್ನು ಬಾಯಲ್ಲೇ ಇಟ್ಟುಕೊಳ್ಳುವುದರಿಂದ. ಮತ್ತು ನಂತರ ಬಾಯಿ ಸ್ವಚ್ಛ ಮಾಡಿಕೊಳ್ಳದಿರುವುದರಿಂದ.
• ಅತಿಯಾದ ಕಾಫಿ-ಟೀ ಸೇವನೆಯಿಂದ ಮತ್ತು ಸೇವಿಸಿದ ನಂತರ ಬಾಯಿ ತೊಳೆದುಕೊಳ್ಳದಿರುವುದರಿಂದ.
▪️ ಸರಳ ಉಪಾಯಗಳು:
➰ ಒಗರು ಮತ್ತು ಕಹಿ ಪದಾರ್ಥಗಳಾದ ಬೇವು, ಹೊಂಗೆ, ಹುಣಸೆಗಳನ್ನೇ ಪ್ರಧಾನವಾಗಿ ಬಳಸಿದ ದಂತಮಂಜನ, ದಂತದ್ರವಗಳನ್ನು ಬಳಸಿದರೆ ಅದ್ಭುತ ಪರಿಣಾಮವನ್ನು ಕಾಣಬಹುದು.
➰ ಸಿಹಿ ಪದಾರ್ಥಗಳ ಸೇವನೆಯ ನಂತರ ಒಗರು ಪದಾರ್ಥವಾದ ಅಡಿಕೆಯನ್ನು ಸ್ವಲ್ಪ ಪ್ರಮಾಣದಲ್ಲಿ ಅಗೆದು ಉಗಿಯಬೇಕು ನುಂಗಬಾರದು.
➰ ಆ್ಯಸಿಡಿಟಿ ಆಗದಂತೆ ಆಹಾರ ಸೇವಿಸಬೇಕೆ ಹೊರತು ಆ್ಯಂಟಾಸಿಡ್ ಮಾತ್ರೆಗಳನ್ನು ಸೇವಿಸಬಾರದು.
ನಿಮ್ಮ ಸಂಪರ್ಕಕ್ಕೆ:
📞 8792290274
9148702645
ವಿಶ್ವಹೃದಯಾಶೀರ್ವಾದವಂ ಬಯಸಿ
–ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)