ಅನಗತ್ಯವಾಗಿ ಹೆಚ್ಚು ನೀರು ಸೇವನೆಯಿಂದ ತಂದುಕೊಂಡ ಹರ್ನಿಯಾ ಹೈಪೋಥೈರಾಯ್ಡಿಸಮ್ ಮತ್ತು ಮಧುಮೇಹ ಎಂಬ ಮೂರು ರೋಗಗಳು..!

ಅನಗತ್ಯವಾಗಿ ಹೆಚ್ಚು ನೀರು ಸೇವನೆಯಿಂದ ತಂದುಕೊಂಡ ಹರ್ನಿಯಾ ಹೈಪೋಥೈರಾಯ್ಡಿಸಮ್ ಮತ್ತು ಮಧುಮೇಹ ಎಂಬ ಮೂರು ರೋಗಗಳು..!

ಅಥರ್ವ ಸಂಸ್ಥೆಯಲ್ಲಿ ಇಂದಿನ‌ ರೋಗ ತಪಾಸಣೆಗಳಲ್ಲಿ ಕಂಡ ಎರಡು ವಿಶೇಷ ಘಟನೆಗಳಿವು —

ಘಟನೆ 1)
ಅನಗತ್ಯ ಜಲಪಾನದಿಂದ ಬಂದ ಹರ್ನಿಯಾ:
ಸುಮಾರು 31 ವರ್ಷದ ಯುವಕ, ಹರ್ನಿಯಾ ಅವರ ತೊಂದರೆ, ಎಷ್ಟು ಹುಡುಕಿದರೂ ಮಲಬದ್ಧತೆ ಇಲ್ಲ, ಉದರದಲ್ಲಿ ಗ್ಯಾಸ್ ಇಲ್ಲ, ಬಹಳ ತೂಕ ಎತ್ತಿಲ್ಲ. ಉದರದ ಮಾಂಸಖಂಡಗಳ ದುರ್ಬಲತೆ ಇಲ್ಲ, ಆದರೂ ಸ್ಕ್ಯಾನಿಂಗ್ ರಿಪೋರ್ಟ್ ಹೇಳುತ್ತದೆ, ‘ಬಲಗಡೆಯ ಇಂಗ್‌ವೈನಲ್ ಹರ್ನಿಯಾ’ ಆಗುವ ಎಲ್ಲಾ ಲಕ್ಷಣಗಳೂ ಇವೆ!!!

ಇದರ ರೋಗ ನಿರ್ಣಯ ಮಾಡಲು, ಆಳವಾದ ರೋಗಿ ಇತಿಹಾಸವನ್ನು ತಿಳಿಯಬೇಕಾಗುತ್ತದೆ.

ಕಾರಣ ಏನು? ಹರ್ನಿಯಾ ಹೇಗೆ ಬಂತು?:
ಪುಸ್ತಕಗಳು, ವೈದ್ಯರು, ಮೀಡಿಯಾಗಳು ಹೇಳುತ್ತವೆಯೆಂದು ಶರೀರ ಕೇಳದಿದ್ದರೂ, ಅನಗತ್ಯವಾಗಿ ಹೆಚ್ಚಿನ ನೀರನ್ನು ಎರಡು ಆಹಾರದ ಮಧ್ಯದಲ್ಲಿ ಕುಡಿಯುತ್ತಿದ್ದ ಪರಿಣಾಮ ದೊಡ್ಡಕರುಳಿನ ಆರಂಭದ ಭಾಗ “ಪುರೀಷಧರಾ ಕಲಾ” ಅಥವಾ ಉಂಡುಕ( ileocecal junction)ದಲ್ಲಿ ದ್ರವಾಂಶ ಹೀರಿ ಘನ ಮಲೋತ್ಪತ್ತಿಗೆ ಸಹಾಯ ಮಾಡಬೇಕಾದ ಶೋಷಮಾಣ ವಹ್ನಿ(ದ್ರವವನ್ನು ಹೀರಿಕೊಳ್ಳುವ ಗುಣವುಳ್ಳ ಅಗ್ನಿಯ ಅಂಶ)ಯು ಅಧಿಕ ಪ್ರಮಾಣದ ನೀರಿನಿಂದ ಆವೃತವಾಗಿ ತನ್ನ ಗುಣವನ್ನು ಕಳೆದುಕೊಂಡು ಆ ಭಾಗದಲ್ಲಿ ಊತವನ್ನುಂಟು ಮಾಡುತ್ತದೆ, ಇಲ್ಲಿ ಸೋಂಕು ಬೆಳೆದರೆ ಅಪೆಂಡಿಕ್ಸ್ ಆಗುತ್ತದೆ, ಒಂದುವೇಳೆ ಸೋಂಕಿರದೇ ಕೇವಲ ಊತ ಹೆಚ್ಚುತ್ತಾ ಸಾಗಿದರೆ, ಅಲ್ಲಿನ ಇಂಗ್‌ವೈನಲ್ ರಿಂಗ್ ಸ್ವಲ್ಪ ಹರಿದು ಅಗಲವಾಗುತ್ತದೆ.

ಇಷ್ಟಾದರೆ ಸಾಕು, ಕರುಳು ದುರ್ಬಲ ರಿಂಗ್‌ನಿಂದ ಹೊರ ನುಗ್ಗಿ ಹರ್ನಿಯಾವನ್ನು ಉಂಟುಮಾಡುತ್ತದೆ. ಇದನ್ನು ಇಂಗ್‌ವೈನಲ್ ಹರ್ನಿಯಾ ಎಂದು ಕರೆಯುತ್ತಾರೆ… 🤔

ಘಟನೆ 2)
ಅತಿ ಜಲಪಾನದಿಂದ ಬಂದ ಮಧುಮೇಹ ಮತ್ತು ಹೈಪೋಥೈರಾಯ್ಡಿಸಮ್:
ಆಯಾಸ ಇಲ್ಲ, ಅತಿ ಮೂತ್ರತಾ ಇಲ್ಲ, ರಾತ್ರಿ ಮೂತ್ರತಾ ಇಲ್ಲ, ಶರೀರ ಸೊರಗಿಲ್ಲ, ತಕ್ಷಣ ಸಕ್ಕರೆ ಅಂಶ ಕಡಿಮೆ ಆಗಿಲ್ಲ, ದಿನಕ್ಕೆ 5-8 KM ಬೆಳಿಗ್ಗೆ-ಸಂಜೆ ವಾಕ್ ಮಾಡುತ್ತಿದ್ದಾರೆ, 60+ ವಯಸ್ಸಾಗಿದ್ದರೂ ಶಿವಮೊಗ್ಗದಿಂದ ಬೆಂಗಳೂರಿಗೆ ಕಾರ್ ಓಡಿಸಿಕೊಂಡು ಹೋಗಿ ಮರಳಿ ಬರುತ್ತಾರೆ. ಚೆನ್ನಾಗಿ ಆಹಾರ ಸೇರುತ್ತಿದೆ, ನಿದ್ದೆ ಉತ್ತಮವಾಗಿದೆ, ಒಟ್ಟಾರೆ ಆರೋಗ್ಯದಿಂದ ಇದ್ದಾರೆ…

ಆದರೆ ರಕ್ತದ ಸಕ್ಕರೆ ಅಂಶ ಮಾತ್ರ 200-400ರ ಗಡಿಯಲ್ಲಿದೆ!! ಮತ್ತು Hba1C – 9 % ಇದೆ!! TSH-45.0 ಇದೆ!!

ಯಾವುದಕ್ಕಾದರೂ ಔಷಧಿ ಮಾಡಿದರೆ, ದುರ್ಬಲತೆಯ ಲಕ್ಷಣಗಳು ಮತ್ತು ಶರೀರದ ಒಣಗುವಿಕೆ ಹೆಚ್ಚುತ್ತಿದೆ, ಹಾಗಾಗಿ ದಂಪತಿಗಳು ರೋಸಿಹೋಗಿದ್ದಾರೆ. ಶುದ್ಧ ಸಸ್ಯಾಹಾರಿಗಳು…

ಕಾರಣ ಹುಡುಕುತ್ತಾ ಹೋದರೆ, ಇವರದ್ದು ಮಧುಮೇಹ ಅಲ್ಲವೇ ಅಲ್ಲ, ಔಷಧ ರಹಿತವಾಗಿ, ಶಾಶ್ವತವಾಗಿ ಸರಿಪಡಿಸಬಹುದು ಎಂಬ ಭರವಸೆ ಬಂತು, ಏಕೆಂದರೆ ಇಲ್ಲಿ ರಸಧಾತು ಎಂಬ ಅಂಶ ಸಾಂದ್ರತೆ ಕಳೆದುಕೊಂಡು ನೀರಾಗಿ ಹೋಗಿದೆ ಅಷ್ಟೇ.

ಬೆಳಿಗ್ಗೆ ಎದ್ದ ತಕ್ಷಣ 750-900ml, ಯಾವುದೇ ಆಹಾರಕ್ಕೆ ಮುನ್ನ 300ml, ಆಹಾರ ಸೇವನೆಯ ನಂತರ 600ml, ಸಂಜೆ 600-900ml, ಮತ್ತೆ ಮಲಗುವಾಗ 600ml ನೀರು ಸೇವನೆ. ಮಧ್ಯೆ ಮಧ್ಯೆ ನೀರು ಸೇವನೆ ಇದ್ದೇ ಇರುತ್ತದೆ… ಕೇಳಿದರೆ, ಹೇಗಿದ್ದರೂ ಒಳ್ಳೆಯದೇ ಅಲ್ವಾ ಎಂದು ಸೇವಿಸುತ್ತಿದ್ದಾರೆ…

ವಿಶೇಷ ಲಕ್ಷಣ ಎಂದರೆ – ಬಾಯಿ ಸದಾ ಜೊಲ್ಲಿನಿಂದ ತುಂಬಿರುವುದು…

ಮಧುಮೇಹ, ಹೈಪೋಥೈರಾಯ್ಡಿಸಮ್ ಹೇಗೆ ಬಂತು?:
ಇವರ ಜಲಪಾನದ ಸಮಯ ಮೇಲಿನ ವ್ಯಕ್ತಿಗಿಂತ ಭಿನ್ನವಾಗಿದೆ ಆಹಾರದ ಮೊದಲು ನಂತರ ಅತಿಯಾಗಿ ಜಲ ಸೇವನೆಯ ಕಾರಣ ಆರಂಭದ ಕರುಳಿನಲ್ಲೇ ಜೀರ್ಣಕಿಣ್ವಗಳು ಶಕ್ತಿ ಕಳೆದುಕೊಂಡಿವೆ, ಆಮಾಶಯ(ಜಠರ) ಮತ್ತು ಪಚ್ಛಮಾನಾಶಯ(ಡಿಯೋಡಿನಮ್) ಭಾಗದಲ್ಲಿ ಫೇನಕಫ(ಶಕ್ತಿ) ಮತ್ತು ಶುದ್ಧಪಿತ್ತ(ಶಾರೀರಿಕ ತೇಜಸ್ಸು) ಉತ್ಪತ್ತಿಯಾಗುವ ಸ್ಥಳ…

📢 ಗಮನಿಸಿ:
▶️ ಕಿಣ್ವಗಳ ಕೆಲಸ ನಡೆದರೆ ಶುದ್ಧ ಶಕ್ತಿ ಬಿಡುಗಡೆಯಾಗುತ್ತದೆ, ರಕ್ತವು ಆಹಾರವನ್ನು ಹೀರಿಕೊಳ್ಳುತ್ತದೆ.

▶️ ಕಿಣ್ವಗಳ ಶಕ್ತಿ ಕುಂದಿದರೆ ಆಮ್ಲತೆ ಹೆಚ್ಚಿ ಆಹಾರ ಕರಗಿ ರಕ್ತಕ್ಕೆ ಸೇರುತ್ತದೆ.
ಆಮ್ಲತೆಗೆ ಜಲಾಧಿಖ್ಯತೆ ಬೇಕು, ಅದು ಸಾಕಷ್ಟು ಸೇವಿಸಿದ್ದಾರೆ…

▶️ ಒಂದೊಮ್ಮೆ ಕಿಣ್ವಗಳೂ ಇಲ್ಲದೇ, ಜಲವೂ ಅಸಮರ್ಪಕವಾಗಿದ್ದರೆ ಗ್ಯಾಸ್ ಉತ್ಪತ್ತಿಯಾಗಿ ಹೊಟ್ಟೆ ಊದಿಕೊಂಡು ಆಹಾರ ಒಡೆದು ರಕ್ತಕ್ಕೆ ಸೇರುತ್ತಿತ್ತು.

ಮೂರೂ ರೀತಿಯಲ್ಲಿ ಭಿನ್ನತೆ ಇದೆ. ಇವರಲ್ಲಿ ಆಹಾರದ ಹಿಂದೆ-ಮುಂದೆ ಸೇವಿಸಿದ ಜಲದ ಕಾರಣ ಅದು ಆಮ್ಲೀಯವಾಗಿ, ಕರಗಿ ರಕ್ತಕ್ಕೆ ಸೇರಿದೆ. ರಕ್ತದಲ್ಲಿ ಆಮ್ಲೀಯ ಭಾವ ಹೆಚ್ಚಿ ಯಕೃತ್, ಮಜ್ಜೆಯವರೆಗೆ ತಲುಪಿದೆ.

ಮಜ್ಜೆಯಲ್ಲಿ ಆಮ್ಲ ಇರುವ ಕಾರಣ ಹೆಚ್ಚು ರಕ್ತಕಣಗಳು ಅನಗತ್ಯವಾಗಿ ಬೇಗ ಬೇಗ ಉತ್ಪತ್ತಿಯಾಗಿವೆ, ಆದರೆ ಅವು ಮೆಚುರಿಟಿ ಪಡೆದು ಸಶಕ್ತವಾಗಿ ಹೊರಬರುತ್ತಿಲ್ಲ, ಈ ಕಾರಣದಿಂದ ಥೈರಾಯ್ಡ್ ಗ್ರಂಥಿಯು ಸ್ರಾವ ಕಡಿಮೆ ಮಾಡಿಕೊಂಡು, ಹೈಪೋಥೈರಾಯ್ಡಿಸಮ್ ಎಂಬಂತೆ ತೋರುತ್ತಿದೆ, TSH-45.0 ಇದ್ದರೂ ವಾಸ್ತವದಲ್ಲಿ ಅದು ಹೈಪೋಥೈರಾಯ್ಡಿಸಮ್ ಅಲ್ಲ.

ಆಹಾರ, ಗಾಳಿಯನ್ನು ಶರೀರಕ್ಕೆ ಪೂರೈಸಲು ರಕ್ತಕಣಗಳಿಗೆ ಸಾಧ್ಯವಾಗದೇ ತ್ವಚೆಯಲ್ಲಿ ತುರಿಕೆಯುಂಟಾಗಿದೆ ಮತ್ತು ಸಕ್ಕರೆ ಅಂಶ ತಾನು ಆಹಾರ ಪೂರೈಸುವ ಕೆಲಸ ಮಾಡಲು RBS 400ವರೆಗೂ ತಲುಪಿದೆ, ಇದನ್ನು ಕಡಿಮೆ ಮಾಡಲು ಔಷಧ ಸೇವಿಸಿದರೆ ದೇಹದ ಜೀವಕೋಶಗಳಿಗೆ ಆಹಾರದ ಕೊರತೆಯಾಗಿ ಸುಸ್ತಾಗುತ್ತಿದೆ…

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research, Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!