ಚಹಾ ಕಾಫಿಗಳೇ ಪೋಷಣೆಗೆ ವಿರುದ್ಧ ಹೇಗೆ? ಎಂಬ ಸಂಶಯವೇ?

ಚಹಾ ಕಾಫಿಗಳೇ ಪೋಷಣೆಗೆ ವಿರುದ್ಧ ಹೇಗೆ? ಎಂಬ ಸಂಶಯವೇ?

“ಚಹಾ ಮತ್ತು ಕಾಫಿಗಳಲ್ಲಿ ಇರುವ Tannin ಗಳು ಕುಪೋಷಣ ಕಾರಕಗಳು”

ಮುಂದೆ ಓದಿ.
ಸಂಕ್ಷಿಪ್ತ ಸಾರಾಂಶ:
ಕಷಾಯ(ಒಗರು ರಸ) ರಸ ದ್ರವ್ಯಗಳು ಶರೀರವನ್ನು ಪೋಷಣೆ ಮಾಡಲು ಇರುವ ಜೀವರಸವನ್ನು ಒಣಗಿಸಿಬಿಡುತ್ತವೆ.

ಅಡಿಕೆಯಲ್ಲಿ tannins ಇರುವ ಕಾರಣ, ತಿಂದಾಗ ಗಂಟಲಿನ ಜೀವಕೋಶಗಳು ಮುದುರಿಕೊಂಡು, ಗಂಟಲು ಹಿಡಿಯುವಂತೆ, ಚಹಾ ಮತ್ತು ಕಾಫಿಗಳಲ್ಲಿನ ರಾಸಾಯನಿಕಗಳಾದ tannins and ceaffeine ಗಳು ಶರೀರದ ಆಂತರಿಕ ಜೀವಕೋಶಗಳ ಪೊರೆಯನ್ನು ಸಂಕೋಚಗೊಳಿಸಿ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರದಂತೆ ಮಾಡಿಬಿಡುತ್ತವೆ.

ತತ್ಪರಿಣಾಮವಾಗಿ ಜೀವಕೋಶಗಳು ನಿರಂತರ ದುರ್ಬಲತೆಯನ್ನು ಹೊಂದುತ್ತವೆ. ಕೊನೆಕೊನೆಗೆ ಚಹಾ-ಕಾಫಿಗಳು ಕರುಳನ್ನು ಒಣಗಿಸಿ iron, calcium, vitamins ಮುಂದಾದವುಗಳನ್ನು ಹೀರಿಕೊಳ್ಳದಂತೆ ಮಾಡಿ, ಶರೀರವನ್ನು ಬಹು ಬೇಗ ದುರ್ಬಲಗೊಳಿಸುತ್ತವೆ. 😟

ಇನ್ನೊಂದೆಡೆ ಆಹಾರದ ಪೋಷಕಾಂಶಗಳು ಜೀವಕೋಶಗಳ ಒಳಗೆ ಹೋಗದೇ ಉಳಿಯುವ ಕಾರಣ ಅದು ಮಧುಮೇಹಕ್ಕೆ ತಿರುಗುತ್ತದೆ ಕೂಡಾ, “ಆದರೆ ಆಳ-ಅಗಳವಲ್ಲದೆ ಮೂಗಿನ ನೇರದ ಸಂಶೋಧನೆಗಳು ಚಹಾದ tannins ಗಳು ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತವೆ!!” ಎಂದು ಪ್ರಚಾರ ಮಾಡುತ್ತಿವೆ.

ಇದು ಬಾಲಿಶ ಸತ್ಯ, ಅಂದರೆ ಎಷ್ಟು ಬಾಲಿಶ ಎಂದರೆ “ಉರಿವ ಬೆಂಕಿಗೆ ಹೆಚ್ಚಿನ ತುಪ್ಪ ಸುರಿದು, ಆ ಕ್ಷಣಕ್ಕೆ ಕಡಿಮೆಯಾದ ಬೆಂಕಿಯನ್ನೇ ಆಧರಿಸಿ, “ತುಪ್ಪ ಬೆಂಕಿಯನ್ನು ಆರಿಸುತ್ತದೆ” ಎಂದಂತೆ ಆಗಿದೆ ಈ ಸಂಶೋಧನೆ. ಆದರೆ ವಿಚಿತ್ರ ಎಂದರೆ ಅದೇ ಸಂಶೋಧನೆಗಳು ಹೇಳುತ್ತವೆ, ಒಟ್ಟು ಸೇವಿಸುವ ಆಹಾರ ಪ್ರಮಾಣದ ಶೇ.5 ರಷ್ಟು, Tannins ಗಳನ್ನು ಸೇವಿಸಿದರೆ ಅದು ಅಪಾಯಕರ ಮತ್ತು ಮರಣವನ್ನು ತರಬಲ್ಲದು ಎಂದು!
ಆದರೂ ನಿತ್ಯ ಕುಡಿಯುತ್ತೇವೆ!! ಅದೂ ನಿರ್ಭಯವಾಗಿ!!!

ಇನ್ನೂ ಆಶ್ಚರ್ಯ ಎಂದರೆ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್‌ಗಳು ಬಂದರೆ “ಚಹಾ-ಕಾಫಿ” ಗಳೆಂಬ ಶತ್ರುಗಳ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ!!! ಏಕೆಂದರೆ ಆ ನಿಟ್ಟಿನಲ್ಲಿ ಯೋಚಿಸದಂತೆ ಮಾಡಿಟ್ಟಿವೆ ವಾಣಿಜ್ಯ ಪ್ರಚಾರಗಳು!!!!

ಹೀಗೆ ಆದ್ಯಧಾತು ಅಂದರೆ ಮೊದಲ ಧಾತುವಾದ ಜೀವರಸವು ಒಣಗಿ ಮುಂದಿನ ಎಲ್ಲಾ ಧಾತುಗಳನ್ನು ದುರ್ಬಲಗೊಳಿಸುತ್ತದೆ. ಇದನ್ನು ಅನುಲೋಮ ಕ್ಷಯ ಎಂದು ಕರೆಯುತ್ತಾರೆ, ಆಚಾರ್ಯರು…

ಒಂದನೇ ಧಾತುವಿನಿಂದ ಆರಂಭವಾಗಿ ಅನುಲೋಮ ಕ್ಷಯವು‌‌‌‌ ಆದರೂ, ಏಳನೇ ಧಾತುವಿನಿಂದ ಆರಂಭವಾಗಿ ಪ್ರತಿಲೋಮ‌ಕ್ಷಯವು‌ ಆದರೂ ಎರಡರ ಫಲಿತಾಂಶ ಒಂದೇ — ದುರ್ಬಲತೆ…!!!

ಧಾತು ದೌರ್ಬಲ್ಯದಿಂದ ಬರುವ ರೋಗಗಳನ್ನು ನೋಡಿದರೆ, ಅವು ಜೀವನವನ್ನು ನರಕವಾಗಿಸುವುದರಲ್ಲಿ ಯಾವ ಸಂಶಯವಿದೆ?

ಇರಲಿ, ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಾಳೆ ನೋಡೋಣ…

ನಿಮ್ಮ ಸಂಪರ್ಕಕ್ಕೆ:
📞 8792290274 9148702645

ವಿಶ್ವ ಹೃದಯಾಶೀರ್ವಾದವಂ ಬಯಸಿ
~ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research, Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!