ಶಿವಮೊಗ್ಗ:ವಿಮಾನ ನಿಲ್ದಾಣದಿಂದ 11ಪ್ರಮುಖ ನಗರಗಳ ಜೊಡಣೆಗೆ ಸಂಸದ ಬಿ.ವೈ ಆರ್ ಮನವಿ..!
ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ ರವರು ಕೇಂದ್ರ ನಾಗರಿಕ ವಿಮಾನ ಖಾತೆಯ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಇವರನ್ನು ಭೇಟಿ ಮಾಡಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದ ವಿರುವ ರನ್ ವೇ ಹೊಂದಿದ್ದು, ಶಿವಮೊಗ್ಗ ಜಿಲ್ಲೆ ಕರ್ನಾಟಕ ಭೂಪಟದ ಮಧ್ಯಭಾಗದಲ್ಲಿ ಇರುತ್ತದೆ.
ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ ಮಲ್ಟಿ ಡಿಸ್ಪೆನರಿ ಟೀಮ್ ಕೂಡಲೇ ಕಳುಹಿಸಿಕೊಡುವುದು,
ಎಲೆಕ್ಟ್ರಿಕ್ ಪರಿಕರ ಫಂಡಿಂಗ್ ಮತ್ತು ಆರ್ ಎಸ್ ಎನ್ ಉಡಾನ್-4.2 ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮ ಸಲುವಾಗಿ ಬರುವ ಪ್ರಯಾಣಿಕರನ್ನು ಉತ್ತೇಜನ ನೀಡುವ ಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಮೂಲಕ ದೇಶದ 11 ಪ್ರಮುಖ ನಗರಗಳ ವಿಮಾನ ನಿಲ್ದಾಣಕ್ಕೆ ಜೋಡಣೆ ಮನವಿ.
ನಿಯೋಜಿತ ಮಾರ್ಗಗಳು
- Mumbai -Shimogga- Mumbai
- Mumbai-Shimogga- Mangalore
- Mumbai-Shimogga- Chennai
- Mumbai-Shimogga- Tirupati
- Shimogga-Gulbarga- Hyderabad
- Shimogga-Gulbarga-Delhi
- Bangalore-Shimogga- Belgaum,
- Bangalore-Shimogga- Delhi
- Cochin- Shimogga-Delhi 10. Bangalore-Shimogga- Goa ಮತ್ತು
- Hyderabad-Shimogga- Cochin
ಮಾರ್ಗಗಳನ್ನು ಕೂಡಲೇ ಟೆಂಡರ್ ಕರೆಯುವ ಮೂಲಕ ವಿಮಾನ ಸಂಚರಿಸಲು ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಲು ಕೇಂದ್ರ ಮಂತ್ರಿಗಳನ್ನು ಈ ಸಂದರ್ಭದಲ್ಲಿ ಕೋರಿರುತ್ತಾರೆ.
News By:Raghu Shikari-7411515737