ಶಿಕಾರಿಪುರ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರ ಪ್ರೀತಿಸಬೇಕು ಅದು ಇಡೀ ಜೀವನಕ್ಕೆ ಆಗುವಷ್ಟು ಶಕ್ತಿ ಸಾಮರ್ಥ್ಯ ನೀಡುತ್ತದೆ:ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ…!

ಶಿಕಾರಿಪುರ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರ ಪ್ರೀತಿಸಬೇಕು ಅದು ಇಡೀ ಜೀವನಕ್ಕೆ ಆಗುವಷ್ಟು ಶಕ್ತಿ ಸಾಮರ್ಥ್ಯ ನೀಡುತ್ತದೆ:ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ…!

ಶಿಕಾರಿಪುರ:ಪಟ್ಟಣದಲ್ಲಿ ಭಾನುವಾರ ವೀರಶೈವ ಮಹಾಸಭಾ ಆಯೋಜಿಸಿದ್ದ ಹಾನಗಲ್ಲು ಕುಮಾರ ಶಿವಯೋಗಿಗಳ ಜಯಂತಿ, ಪ್ರತಿಭಾ ಪುರಸ್ಕಾರ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶೈಕ್ಷಣಿಕವಾಗಿ ಹಿಂದುಳಿದ ಸಂದರ್ಭದಲ್ಲಿ ರಾಜ್ಯದಲ್ಲಿ ಕೆಎಲ್‌ಇ, ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಸ್ಥಾಪನೆ, ಪಂಚಾಕ್ಷರಿ ಗವಾಯಿಗಳಿಗೆ ಗುರುಗಳಾಗಿ, ವೀರಶೈವ ಮಹಾಸಭಾ ಸ್ಥಾಪಿಸಿ, ರಾಜ್ಯದ ನೂರಾರು ಮಠ ಮಂದಿರಕ್ಕೆ ಸ್ವಾಮೀಜಿ ನೀಡುವುದಕ್ಕೆ ಗುರುಕುಲ ಸ್ಥಾಪನೆ, ಶಿಕ್ಷಣ ದಾಸೋಹ ಪದ್ಧತಿ ಜಾರಿ, ವಿಭೂತಿ ತಯಾರಿಕೆ ಹೀಗೆ ಹಲವು ಕ್ರಾಂತಿಕಾರಿ ಚಿಂತನೆ ಮೂಲಕ ಸಮಾಜ ಉದ್ಧರಿಸುವ ಕರ‍್ಯದ ಮೂಲಕ ಇಂದಿಗೂ ನಮ್ಮೊಂದಿಗೆ ಇದ್ದಾರೆ ಅವರ ಚಿಂತನೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.

ಇಂದಿನ ಯುವಕರು ಮುಂದಿನ ಪ್ರಜೆಗಳು ಪ್ರತಿಯೊಬ್ಬ ತನ್ನ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರ ಪ್ರೀತಿಸಬೇಕು ಅದು ಇಡೀ ಜೀವನಕ್ಕೆ ಆಗುವಷ್ಟು ಶಕ್ತಿ ಸಾಮರ್ಥ್ಯ ನೀಡುತ್ತದೆ. ಶಿಕ್ಷಣಕ್ಕಾಗಿ ರಾಜ್ಯ, ಕೇಂದ್ರ ಸರಕಾರ ಹಲವು ಯೋಜನೆ ನೀಡಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು.

ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿ ಆಗಿದ್ದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ವಿರೇಶ್ವರಾನಂದ ಸ್ವಾಮೀಜಿ ಮಾತನಾಡಿ, ಮಹಾನ್ ಸಾಧನೆ ಮಾಡಿದವರೆಲ್ಲರೂ ಬಡತನ, ಕಷ್ಟದಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಬೀದಿದೀಪದ ಬೆಳಕಿನಲ್ಲಿ ಓದಿ ಜಗತ್ತು ಗೌರವಿಸುವ ಇಂಜಿನಿಯರ್ ಆದರು. ಪ್ರಧಾನಿ ನರೇಂದ್ರ ಮೋದಿ 3ವರ್ಷ ರಾಮಕೃಷ್ಣಾಶ್ರಮದಲ್ಲಿ ಕಸಗುಡಿಸಿ, ನೆಲಒರೆಸಿ ಸೇವೆ ಮಾಡಿದ್ದರಲ್ಲದೆ ಬಡತನದಲ್ಲಿ ಜೀವನ ಕಟ್ಟಿಕೊಂಡವರು. ಯಾವುದೆ ಕ್ಷೇತ್ರದಲ್ಲಿ ಸಂಪೂರ್ಣ ಮನಸ್ಸು ಇಟ್ಟು ಕರ‍್ಯತತ್ಪರರಾಗಬೇಕು ಆಗ ಯಶಸ್ಸು ದೊರೆಯುತ್ತದೆ.

ಸಾಧನೆ ಮಾಡುವ ಹಸಿವು ಇರುಬೇಕು ವಿದ್ಯೆ ರಾಜನಿಂದಲೂ ಪೂಜಿಸಲ್ಪಡುತ್ತದೆ, ಹಣ ಕತ್ತೆಯೂ ಸಂಪಾದಿಸುತ್ತದೆ ಶಿಕ್ಷಣ ಸಂಪಾದನೆ ಕಷ್ಟ ಅದಕ್ಕಾಗಿ ಸಮಯ ಮೀಸಲಿಡಬೇಕು. ವಿದ್ಯಾರ್ಥಿ ಸಮಾಜದ ಸಾಮರ್ಥ್ಯ ಅದು ಜನರಿಗೆ ಉಪಯೋಗ ಆಗಬೇಕು.

ನಮ್ಮ ಬುದ್ಧಿವಂತಿಕೆ ಮಾನವನ ಅಭ್ಯುದಯಕ್ಕೆ ಉಪಯೋಗ ಆಗಬೇಕು. ನಾಡಿಗೆ ವಿಶ್ವೇಶ್ವರಯ್ಯ, ಡಿವಿಜಿ ಸೇರಿ ಹಲವು ಮಹಾನುಭಾವರನ್ನು ಕೊಲಾರ ಕೊಡುಗೆ ನೀಡಿದೆ ಆದರೂ ಅಲ್ಲಿ ಕುಡಿಯುವ ನೀರಿಗೆ ಬರವಿದೆ ಅದನ್ನು ನೀಗಿಸುವುದಕ್ಕೆ ರಾಜಕಾರಣಿಗಳು ಮುಂದಾಗಬೇಕು ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಬಸ್‌ನಿಲ್ದಾಣ ಸಮೀಪ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಪಟ್ಟಣದ ವಿವಿದೆಡೆ ಬಸವಣ್ಣ, ಅಕ್ಕಮಹಾದೇವಿ ಪ್ರತಿಮೆ ನಿರ್ಮಾಣಕ್ಕೆ ಪುರಸಭೆ ಪ್ರಸ್ತಾವನೆ ಸಲ್ಲಿಸಿದ್ದು ಅದಕ್ಕೆ ಶೀಘ್ರದಲ್ಲೆ ಕ್ಯಾಬಿನೆಟ್ ಅನುಮೋದನೆ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ವೈ ಅಧಿಕಾರ ಅವಧಿಯಲ್ಲಿ ವೀರಶೈವ ಅಭಿವೃದ್ಧಿ ನಿಗಮ, ಬಸವನ ಬಾಗೆವಾಡಿ ಸ್ಥಾಪನೆ ಮಾಡಲಾಗಿದೆ.

ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿಗೂ ಅನುದಾನ ನೀಡಿದ್ದಾರೆ ವೀರಶೈವ ಸಮಾಜದ ಎಲ್ಲ ಒಳಪಂಗಡ ಜನರು ಒಗ್ಗಟ್ಟಾಗಿ ಮುನ್ನೆಡೆಯಬೇಕು ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೀರಶೈವ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಎನ್.ವಿ.ಈರೇಶ್ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಾಧನಾ ಅಕಾಡೆಮಿ ಸ್ಥಾಪಕ ಬಿ.ಮಂಜುನಾಥ್ ಉಪನ್ಯಾಸ ನೀಡಿದರು. ವೀರಶೈವ ಸಮಾಜದ ಕಾಂಚನ, ಬಿ.ಡಿ.ಭೂಕಾಂತ್, ಅಶ್ವಿನ್ ಕಡ್ಡಿಪುಡಿ, ವೀರಣಗೌಡ, ಕೊಟ್ಟುರೇಶಪ್ಪ, ಕುಮಾರ, ಸಮಾಜದ ಎಲ್ಲ ಗ್ರಾಮ ಘಟಕ, ಯುವ, ಮಹಿಳಾ ಘಟಕ ಪದಾಧಿಕಾರಿಗಳು ಸದಸ್ಯರು, ವಿದ್ಯಾರ್ಥಿಗಳು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!