ವ್ಯಾಟ್ಸಪ್ 2 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ…!

ವ್ಯಾಟ್ಸಪ್ 2 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ…!

ನಮಗೆಲ್ಲ ತಿಳಿದ ಹಾಗೆ ವ್ಯಾಟ್ಸಪ್ ನಲ್ಲಿ ಕೆಲವು ಸಂದೇಶಗಳು ನಮ್ಮ ಸ್ನೇಹಿತರೇ ನಮಗೆ ಫಾರ್ವರ್ಡ್ ಮಾಡಿರುತ್ತಾರೆ..

“ಆಮೇಜಾನ್ ನಲ್ಲಿ 10000 ರೂಗಳ ಪ್ರೈಜ್ ಗೆಲ್ಲಬಹುದು ಈ ಲಿಂಕ್ ಕ್ಲಿಕ್ ಮಾಡಿ ಎಂದೂ ತಕ್ಷಣ 5 ಜನಕ್ಕೆ ಶೇರ್ ಮಾಡಿ ಎನ್ನುವ ಸಂದೇಶವಾಗಿರುತಿತ್ತು..

ಮತ್ತೊಂದು ಉದಾಹಾರಣೆಯಂದರೆ ನಿಮಗೆ ಬಂದ ಫಾರ್ವರ್ಡ್ ಸಂದೇಶದಲ್ಲಿ “5 ಜನರಿಗೆ ಈ ಸಂದೇಶವನ್ನು ಕಳುಹಿಸಿದರೆ ಮೊಬೈಲ್ 100% ಚಾರ್ಚ್ ಆಗಿಬಿಡುತ್ತದೆ” ಎಂದು ಈ ತರಹ ಹಲವು ಸಂದೇಶಗಳನ್ನು ನಾವು ವ್ಯಾಟ್ಸಪ್ ನಲ್ಲಿ ನೋಡಿರುತ್ತೇವೆ..

ಸಾಮಾಜಿಕ ಜಾಲತಾಣಗಳ ಆಯಾಮವನ್ನೆ ಬದಲಿಸಿದ ಹೊಸ ಮಾಹಿತಿ ಮತ್ತು ತಂತ್ರಜ್ಞಾನ ನಿಯಮ (2021)

ಇತ್ತೀಚೆಗೆ ಕೇಂದ್ರ ಸರ್ಕಾರವು ಹೊಸ ಮಾಹಿತಿ ಮತ್ತು ತಂತ್ರಜ್ಞಾನ ನಿಯಮವನ್ನು ಹೊರಡಿಸಿತ್ತು.

ನಿಯಮಗಳ ಪ್ರಕಾರ ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸಪ್ , ಫೇಸ್ ಬುಕ್, ಟ್ವಿಟರ್ ಇತರೆ ಕಂಪನಿಗಳಿಗೆ ಸುಳ್ಳು ಸುದ್ದಿಗಳು, ಹಾಗೂ ಅತೀ ಹೆಚ್ಚು ಫಾರ್ವರ್ಡ್ ಆಗುವ ಸಂದೇಶಗಳನ್ನು ಮತ್ತು ಸುಳ್ಳು ಖಾತೆಗಳನ್ನು ಕಡಿವಾಣ ಹಾಕಲು ಭಾರತದಲ್ಲಿಯೇ ಕುಂದುಕೊರೆತೆಯನ್ನು ಅವಲೋಕಿಸುವ ಅಧಿಕಾರಿಗಳನ್ನು ಹೊಂದಿರುವ ಕಛೇರಿಯನ್ನು ಸ್ಥಾಪಿಸಬೇಕು.

ಭಾರತ ದೇಶದ ಕಾನೂನಿಗೆ ಹೊಂದಿಕೊಂಡು ಕೆಲಸ ನಿರ್ವಹಿಸಬೇಕು ಹಾಗೇಯೇ ಸುಳ್ಳುಖಾತೆ , ಸುಳ್ಳು ಸುದ್ದಿಗಳಿಗೆ ಕ್ರಮ ತೆಗೆದುಕೊಂಡ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ತಿಂಗಳು ನೀಡುಬೇಕು ಎಂದು ನಿಯಮದಲ್ಲಿ ತಿಳಿಸಲಾಗಿತ್ತು..

ಪ್ರಸ್ತುತ ಮೇ ಮತ್ತು ಜೂನ್ ತಿಂಗಳ ವರದಿ ನೀಡಿರುವ ವ್ಯಾಟ್ಸಪ್ ಮತ್ತು ಪೇಸ್ ಬುಕ್ . ವ್ಯಾಟ್ಸಪ್ 2 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ ಎಂದು ವರದಿ ನೀಡಿದೆ.. ಹಾಗೂ ಪೇಸ್ ಬುಕ್ 95 % ರಷ್ಟು ರಿಪೋರ್ಟ್ ಮಾಡಿದ ಕೊರತೆಗಳಿಗೆ ಸ್ಪಂದಿಸಿದೆ ಎಂದು ವರದಿ ನೀಡಿದೆ..

ವ್ಯಾಟ್ಸಪ್ ಇನ್ನೂ ಮುಂದೆ ರೀಪೋರ್ಟ ಮಾಡಿದ ಕೂಡಲೆ ಸ್ಪಂದಿಸಲಿದೆ ಎಂದು ತಿಳಿಸಿದೆ.

ವೀಶೇಷ ವರದಿ
ನವೀನ್

Admin

Leave a Reply

Your email address will not be published. Required fields are marked *

error: Content is protected !!