ಆರೋಗ್ಯಕರ ಗೋಧಿ ಖಾದ್ಯಗಳು: ಭಾಗ-3, ಸಿದ್ಧಗೋಧಿಯ ಉಪ್ಪಿಟ್ಟು..!

ಆರೋಗ್ಯಕರ ಗೋಧಿ ಖಾದ್ಯಗಳು: ಭಾಗ-3, ಸಿದ್ಧಗೋಧಿಯ ಉಪ್ಪಿಟ್ಟು..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✒️ ಇಂದಿನ ವಿಷಯ:
ಆರೋಗ್ಯಕರ ಗೋಧಿ ಖಾದ್ಯಗಳು:
ಭಾಗ-3, ಸಿದ್ಧಗೋಧಿಯ ಉಪ್ಪಿಟ್ಟು

ಗೋಧಿಗೆ ಶುದ್ಧಿ ಮತ್ತು ಸಿದ್ಧಿ ಎಂಬ ಎರಡು ಸಂಸ್ಕಾರಗಳು ಇವೆ. ಈ ರೀತಿ ಸಂಸ್ಕರಿಸುವುದು ಹೇಗೆಂದು ಪ್ರತ್ಯೇಕ ಸಂದೇಶದಲ್ಲಿ ತಿಳಿಸಲಾಗಿದೆ.

ಸಿದ್ಧಗೋಧಿಯ ಉಪ್ಪಿಟ್ಟು:
ಸಿದ್ಧಗೋಧಿ ಉಪ್ಪಿಟ್ಟು ತಯಾರಿಸುವ ಮುನ್ನ, ಸಿದ್ಧಗೋಧಿಯನ್ನು 6-7 ತಾಸುಗಳ ಕಾಲ ನೀರಿನಲ್ಲಿ ನೆನೆಸಿ ಇಡಿ.

ನಂತರ – ಸಿದ್ಧ ಶೇಂಗಾ ಎಣ್ಣೆಯನ್ನು ಅಥವಾ ಮನೆಯಲ್ಲಿಯೇ ತಯಾರಿಸಿದ ತುಪ್ಪವನ್ನು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಸಾಸಿವೆ, ಜೀರಿಗೆ, ಹಸಿಮೆಣಸಿನಕಾಯಿ, ಈರುಳ್ಳಿ, ಶೇಂಗಾಬೀಜ ಅಥವಾ ಗೋಡಂಬಿ ಅಥವಾ ಬಾದಾಮಿಗಳನ್ನು ಬಳಸಿ ವಗ್ಗರಣೆ ತಯಾರಿಸಿಕೊಳ್ಳಿ.

ನಂತರ – ಅದಕ್ಕೆ ಸಿದ್ಧಗೋಧಿಯ ಆರು ಪ್ರಮಾಣದ ನೀರನ್ನು ಹಾಕಿ ನಿಧಾನವಾದ ಬೆಂಕಿಯಲ್ಲಿ ಬೇಯಿಸಲು ಇಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿರಿ, ನೀರು ಚೆನ್ನಾಗಿ ಕುದಿಯುವಾಗ ಸಿದ್ಧಗೋಧಿಯನ್ನು ಅದಕ್ಕೆ ಸೇರಿಸಿ ನಿಧಾನವಾಗಿ ತಿರುವುತ್ತಾ ಇರಿ

ನಂತರ – ಅದು ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿರಿ, ಅಷ್ಟೂ ನೀರನ್ನು ಗೋಧಿ ಹೀರಿಕೊಳ್ಳುತ್ತದೆ. ಈಗ ಸಿದ್ಧಗೋಧಿಯ ಉಪ್ಪಿಟ್ಟು ತಯಾರು.

ನಿಮ್ಮ ಗಮನಕ್ಕೆ:
ಎಣ್ಣೆ ಅಥವಾ ತುಪ್ಪದ ಅಂಶವನ್ನು ಕಡಿಮೆ ಮಾಡಿಕೊಂಡು ವಗ್ಗರಣೆ ತಯಾರಿಸಬಾರದು, ಹಾಗೆಯೇ ಆರು ಪ್ರಮಾಣಕ್ಕಿಂತ ಕಡಿಮೆ ನೀರು ಬಳಸಿಯೂ ಸಿದ್ಧಗೋಧಿ ಉಪ್ಪಿಟ್ಟು ತಯಾರಿಸಬಾರದು. ಏಕೆಂದರೆ, ಸಾಕಷ್ಟು ನೀರು ಇರದ ಉಪ್ಪಿಟ್ಟು ಜೀವಕೋಶಗಳ ಮಟ್ಟದಲ್ಲಿ ಉಷ್ಣತೆಯನ್ನು ಬಿಡುಗಡೆ ಮಾಡಿ, ದೀರ್ಘಕಾಲದಲ್ಲಿ ಪಿತ್ತದ ರೋಗಗಳನ್ನು ತರುತ್ತದೆ, ಅಂದರೆ ಶರೀರದಲ್ಲಿ ಜಲ ಸಂಚಯವಾಗಿ(Water retention) ತೂಕ ಗಣನೀಯವಾಗಿ ಹೆಚ್ಚುತ್ತದೆ, ಮುಂದುವರಿದು ಪಿತ್ತಜ ಮೇಹವನ್ನೂ, ಬಿಟ್ಟರೆ ಮಧುಮೇಹವನ್ನೂ ತರುತ್ತದೆ.


ಹಾಗೆಯೇ,
ಸ್ನೇಹಾಂಶ ಕಡಿಮೆ ಇದ್ದರೆ ಜೀವಕೋಶಗಳ ಪೊರೆಗೆ ಧಕ್ಕೆಯನ್ನುಂಟುಮಾಡುತ್ತದೆ ಮತ್ತು ಇದು ಆಮವಾತ(ರುಮ್ಯಾಟಿಸಮ್)ದಂತಹ ಅಟೋಇಮ್ಯೂನ್ ಕಾಯಿಲೆಯನ್ನು ತರುತ್ತದೆ.

ಸಂಪೂರ್ಣ ಫಲಪ್ರದವಾಗಿಸಲು ಬೇಕಾದ ಅವಶ್ಯಕ ಮುನ್ನೆಚ್ಚರಿಕೆಗಳು:

1) ನಿತ್ಯ ಬಳಕೆ ಸಲ್ಲದು:
ಇದು ಮಾಂಸಾಹಾರದಂತೆಯೇ ಅತ್ಯಂತ ಶಕ್ತಿಯನ್ನು ಹೊಂದಿರುವ ಆಹಾರವಾದ್ದರಿಂದ ಶ್ರಮಿಕರು ವಾರಕ್ಕೆ 3-4 ಬಾರಿ ಬಳಸಬಹುದು, ಅದೇ ಅಲ್ಪಶ್ರಮಿಕರು ವಾರಕ್ಕೆ ಒಂದು ಬಾರಿ ಬಳಸಿದರೆ ಸಾಕು.

2) ಗೋಧಿ ಉಪ್ಪಿಟ್ಟಿನಲ್ಲಿ ಕಾಳು, ಬೇಳೆ ಬಳಕೆ ನಿಷಿದ್ಧ:
ಅಕ್ಕಿಯ ಉಪ್ಪಿಟ್ಟಿನಂತೆ ಇಲ್ಲಿ ಕಡಲೆ ಕಾಳು, ಅವರೆಕಾಳು ಬೆರೆಸಿ ಉಪ್ಪಿಟ್ಟು ತಯಾರಿಸಬಾರದು. ಏಕೆಂದರೆ ಅಕ್ಕಿ ಕೇವಲ ‘ಮಧುರ’ ರಸವನ್ನು ಹೊಂದಿದೆ, ಅದೇ ಗೋಧಿ ಅಲ್ಪ ‘ಕಷಾಯ’ ರಸವನ್ನೂ ಸಹ ಹೊಂದಿದೆ. ಕಾಳು, ಬೇಳೆಗಳಿಂದ ಶರೀರದಲ್ಲಿ ಗ್ಯಾಸ್ ಹೆಚ್ಚುತ್ತದೆ. ಹೀಗೆ ನಿರಂತರ ಬಳಸಿದರೆ, ಮಾಂಸಖಂಡಗಳ, ಕೀಲುಗಳ ನೋವುಗಳು, ಕಾಯಿಲೆಗಳು ಬರುತ್ತವೆ.

3) ಕಡಿಮೆ ನೀರಿನಿಂದ ಹಾನಿ:
ಆರು ಪ್ರಮಾಣಕ್ಕಿಂತ ಕಡಿಮೆ ನೀರನ್ನು ಬಳಸಿ ಬೇಯಿಸಿದರೆ, ಉದರ ಸೇರಿದ ನಂತರ ಜೀವಕೋಶಗಳ ಒಳಗಿನ ಜಲವನ್ನು ಹೀರಿಕೊಂಡು ಅವುಗಳ ಆಂತರಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ನಾವು ಗೋಧಿ ಚಪಾತಿ ತಿಂದಾಗ ಶರೀರ ಹೀಟ್ ಎನಿಸುವುದು. ಹಾಗೆಂದು ಹೆಚ್ಚು ನೀರನ್ನು ಕುಡಿದರೆ ಉಪಯೋಗವಾಗುವುದಿಲ್ಲ. ಏಕೆಂದರೆ, ನಾವು ಕುಡಿದ ನೀರು ಮತ್ತು ಜೀವಕೋಶದೊಳಗಿನ ದ್ರವ ಒಂದೇ ಅಲ್ಲ.

ಹೀಗೆ ಸೇವಿಸಿದ ಸಿದ್ಧಗೋಧಿ ಉಪ್ಪಿಟ್ಟು
ಪೌರುಷ ಬಲವನ್ನು ಹೆಚ್ಚಿಸುತ್ತದೆ.
ವೀರ್ಯ ವರ್ಧಕ.
ಬಲಕಾರಕ.
ಸುಲಭವಾಗಿ ಜೀರ್ಣವಾಗುತ್ತದೆ.
ಉದರಕ್ಕೆ ಬಲವನ್ನು ಕೊಡುತ್ತದೆ.
ಧಾತುಗಳನ್ನು, ವಿಶೇಷವಾಗಿ ಮಾಂಸಖಂಡಗಳನ್ನು ಪೋಷಣೆ ಮಾಡುತ್ತದೆ.

ಆದರೆ, ಹೀಗೆ ಆಹಾರ ಸಿದ್ಧಿ ಮಾಡದೇ ಗೋಧಿ ನುಚ್ಚಿನಿಂದ ನೇರವಾಗಿ ತಯಾರಿಸುವ ಗೋಧಿಯ ಉಪ್ಪಿಟ್ಟು ಅನಾರೋಗ್ಯ ತರುತ್ತದೆ!

ಹೀಗೆ ಒಂದು ವಸ್ತುವು ತಾನಾಗಿಯೇ ಎಲ್ಲ ಲಾಭವನ್ನೂ ತಂದುಕೊಡುವುದಿಲ್ಲ, ಅದರ ಸೇವನಾ ವಿಧಾನ, ಯಾರು ಯಾರಿಗೆ ಹೇಗೆ ಲಾಭದಾಯಕ ಎಂದು ಸಾಕಷ್ಟು ಮಾನದಂಡಗಳಿರುತ್ತವೆ._

ಅದರ ಹೊರತು ಕೇವಲ ರಾಸಾಯನಿಕಗಳ ಆಧಾರದಲ್ಲಿ ಆಹಾರ ಸೇವಿಸಿದರೆ ಹೇಗೆ ಒಳಿತಾಗಬಲ್ಲದು ಅಲ್ಲವೇ?!

ಸಂಪರ್ಕಕ್ಕೆ:
9148702645
8792290274

ವಿಶ್ವ ಹೃದಯಾಶೀರ್ವಾದವಂ ಬಯಸಿ

ಡಾ. ಮಲ್ಲಿಕಾರ್ಜುನ ಡಂಬಳ_
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ, ಶಿವಮೊಗ್ಗ-ದಾವಣಗೆರೆ*

Admin

Leave a Reply

Your email address will not be published. Required fields are marked *

error: Content is protected !!