ಶಿಕಾರಿಪುರ: ಬಿಜೆಪಿಯ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳದೇ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ: ಲಕ್ಷ್ಮಿ ಮಹಾಲಿಂಗಪ್ಪ…!
ಶಿಕಾರಿಪುರ : ಪಟ್ಟದ ಪುರಸಭೆಯಲ್ಲಿ ಬಿಜೆಪಿ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ ಸದಸ್ಯರು ನಮ್ಮ ವಿರುದ್ದ ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಪುರಸಭಾ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕುರಿತು ನಗರಾಭಿವೃದ್ಧಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ನಗರ ಕುಡಿಯುವ ನೀರು ಸರಬರಾಜು ಮಂಡಳಿಗೆ ಹಸ್ತಾಂತರ ಮಾಡುತ್ತಿದ್ದೇವೆ.
ಇತ್ತಿಚೆಗೆ ನಡೆದ ಪುರಸಭೆಯ ಸಭೆಯಲ್ಲಿ ಎರಡು ವಿಷಯಗಳ ಕುರಿತು ಚೆರ್ಚೆ ಕರೆಯಲಾಗಿತ್ತು ಅಧ್ಯಕ್ಷರ ಅಪಣೆ ಮೇರೆಗೆ ಯಾವುದೇ ವಿಷಯ ಇರುವುದಿಲ್ಲ ಎಂದು ತಿಳಿಸಲಾಗಿತ್ತು.
ಅದರೆ ಈ ಎರಡು ವಿಷಯಗಳನ್ನು ಬಿಟ್ಟು ಬೇರ ಬೇರೆ ವಿಷಯಗಳ ಕುರಿತು ಕಾಂಗ್ರೆಸ್ ಸದಸ್ಯರು ಗೊಂದಲ ಮೂಡಿಸಿದರು ಈ ಎರಡು ವಿಷಯಗಳು ಮುಗಿದ ನಂತರ ನಾನು ಸಭೆಯಿಂದ ಹೊರ ಬಂದೆ ಅದರೆ ಅರ್ಧಕ್ಕೆ ಹೊರ ಹೋಗಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು.
ಕುಡಿಯುವ ನೀರು ಕಂದಾಯ ಸರಿಯಾಗಿ ವಸೂಲಿ ಆಗುತ್ತಿಲ್ಲ ನಿರ್ವಹಣೆ ಪುರಸಭೆ ಹೆಚ್ಚಿನ ಹೊರೆಯಾಗುತ್ತಿದೆ.
ಕುಡಿಯುವ ನೀರಿನ ಸರಬರಾಜು ಪ್ರತಿ ವರ್ಷ ಕೋಟಿಗಟ್ಟಲೇ ಹಣ ಹೊರೆಯಾಗುತ್ತಿದೆ ಇದರ ಸಂಪೂರ್ಣ ಖರ್ಚು ವೆಚ್ಚ ಜವಾಬ್ದಾರಿ ಮಂಡಳಿ ನೋಡಿಕೊಳ್ಳುತ್ತದೆ ಪುರಸಭೆಗೆ ಇದರಿಂದ ಪುರಸಭೆಗೆ ಹಣ ಉಳಿತಾಯವಾಗಲಿದೆ ಎಂದರು.
ಪಟ್ಟಣದಲ್ಲಿ 101 ಕೋಳವೆ ಭಾವಿ ಇದೆ ವಿದ್ಯುತ್ ಬಿಲ್ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಲಾಗುತ್ತಿದೆ ನಿರ್ವಹಣೆ ಬೇರೆಯವರಿಗೆ ವಹಿಸಿದ ನಂತರ ವಾಲ್‌ಮ್ಯಾನ್ ಗಳನ್ನು ಕೆಲಸದಿಂದ ತೆಗೆಯುವ ಆದಿ ಅವರನ್ನು ಪುರಸಭೆಗೆ ಬಳಸಿಕೊಳ್ಳುತ್ತೇವೆ ಇನ್ನೂ ಹೆಚ್ಚಿನ ಜನರನ್ನು ತೆಗೆದುಕೊಳ್ಳುತ್ತೇವೆ ಕಾಂಗ್ರೆಸ್ ನವರು ಕೆಲಸದಿಂದ ತೆಗೆಯುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಪುರಸಭೆಗೆ 15 ಜನ ಪೌರ ಕಾರ್ಮಿಕರನ್ನು ಮ್ಯಾನಪವರ್ ಏಜನ್ಸಿ ಮೂಲಕ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಸದಸ್ಯರು ನಮ್ಮ ಕಾಂಗ್ರೆಸ್ ಕಾರ್ಯಕರ್ತನ 5 ಜನರನ್ನು ತೆಗೆದುಕೊಳ್ಳಿ ಎಂದು ನನ್ನ ಮೇಲೆ ಒತ್ತಡ ಹೇರಿದರು ಅದರೆ ನಾನು ಅದಕ್ಕೆ ಒಪ್ಪಿಲ್ಲ ಲಿಬ್ರಾ ಏಜನ್ಸಿ ಮೂಲಕ ಹೊರಗುತ್ತಿಗೆ ಆಧಾರ ಮೇಲೆ ತೆಗೆದುಕೊಳ್ಳಲಾಗಿದೆ ನಾವು ಹಣವನ್ನು ಪಡೆದು ತೆಗೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಅಪ ಪ್ರಚಾರ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಬಿಜೆಪಿ ಮುಖಂಡ ಪುರಸಭಾ ಸದಸ್ಯ ಟಿ.ಎಸ್ ಮೋಹನ್ ಮಾತನಾಡಿ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ದ ಆರೋಪ ಮಾಡುವುದಾದರೆ ನಮ್ಮ ಪಕ್ಷದ ಅಭಿವೃದ್ಧಿ ಕೆಲಸಗಳ ಬಗ್ಗೆ ಏಕೆ ಹೇಳುತ್ತಿಲ್ಲ.
ಇವರು ಹತಾಶ ಭಾವನೆಯಿಂದ ಅಭಿವೃದ್ಧಿಗೆ ಸಹಿಸಿಕೊಳ್ಳದೇ ಈ ರೀತಿ ಆರೋಪ ಮಾಡುತ್ತಿದ್ದಾರೆ.
ಕಾಂಗ್ರೆಸ್ ನವರು ಅಭಿವೃದ್ಧಿ ವಿರುದ್ದವಾಗಿದ್ದಾರೆ ಕಾಂಗ್ರೆಸ್ ಪುರಸಭಾ ಸದಸ್ಯರೇ ಒಬ್ಬರು ತಮ್ಮ ಜಮೀನಿನಲ್ಲಿ ಯುಜಿಡಿಗೆ ಜಾಗ ಕೊಡದೇ ತೊಂದರೆ ಮಾಡಿ ಕೊರ್ಟ್ ಗೆ ಹೋಗಿದ್ದಾರೆ.
ಬಿಜೆಪಿ ಪಕ್ಷ ಅಭಿವೃದ್ಧಿಯ ಬಗ್ಗೆ ಗಮನ ನೀಡುತ್ತದೆ ನಮ್ಮದು ಅಭಿವೃದ್ಧಿ ಪಕ್ಷ ಎಂದರು.
ಪುರಸಭಾ ಸದಸ್ಯ ಸುರೇಶ್ ಮಾತನಾಡಿ ಪುರಸಭೆಯಲ್ಲಿ ಒಂದೇ ಕುಟುಂಬದ 16 ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿ ಒಂದೆ ಕುಟುಂಬದ ಸದಸ್ಯರು ಮಾತ್ರವಲ್ಲ ಒಂದೇ ಜನಾಂಗ ಕೆಲಸ ಮಾಡುತ್ತಿದ್ದಾರೆ.
ಸ್ಚಚ್ಚತೆಯ ಕೆಲಸಕ್ಕೆ ಬೇರೆ ಯಾರು ಮಾಡುವುದಿಲ್ಲ ಪೌರ ಕಾರ್ಮಿಕರು ಎಲ್ಲಾರು ಒಂದೇ ಜನಾಂಗದವರೇ ಒಬ್ಬರೊಗೊಬ್ಬರು ಸಂಬಂಧಿಕರು ಇದ್ದೆ ಇರುತ್ತಾರೆ ಎಂದರು
ಸದಸ್ಯ ಗುರುರಾಜ್ ಜಗತಾಪ್ ಮಾತನಾಡಿ ಕಾಂಗ್ರೆಸ್ ನ ಸದಸ್ಯರು ಆರೋಪವನ್ನು ಮಾಡುವಾಗ ಆಧಾರ ಇಟ್ಟುಕೊಂಡು ಆರೋಪ ಮಾಡಲಿ ಕುಡಿಯುವ ನೀರಿಗೆ ಮೀಟರ್ ಬೋರ್ಡ್ ಅಳವಡಿಕೆಯಿಂದ ನೀರನ್ನು ಮೀತವಾಗಿ ಬಳಸುತ್ತಾರೆ.
ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂದು ಸುಳ್ಳು ಆರೋಪ 80% ನೌಕರರು ಇದ್ದಾರೆ ಇನ್ನುಳಿದ ಸಿಬ್ಬಂದಿಗಳ ಭರ್ತಿ ಮಾಡಲು ಸರ್ಕಾರ ಎಲ್ಲಾ ರೀತಿಯ ಗಮನ ನೀಡದೆ.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರೂಪಕಲಾ, ಪಾಲಕ್ಷಪ್ಪ, ಬೆಣ್ಣೆ ದೇವೇಂದ್ರಪ್ಪ,ಜೀನಳ್ಳಿ ಪ್ರಶಾಂತ್ ,ಸುನಂದ ಮಂಜುನಾಥ,ರಮೇಶ್, , ಶಿವನಗೌಡ, ರೂಪ ಮಂಜುನಾಥ, ವಿಶ್ವನಾಥ,ಉಮಾವತಿ, ರೇಖಾಬಾಯಿ,ಇದ್ದರು.
News by: Raghu Shikari-7411515737